ಸಂಜೆ ವೇಳೆಗೆ ಹಾವೇರಿ ಜಿಲ್ಲೆಯ ಶಿಗ್ಗಾವಿಯ ತಾಲೂಕಿನಲ್ಲೂ ಮಳೆಯಾಗಿದ್ದು, ಶಿಗ್ಗಾವಿಯ ತಾಲೂಕಿನ ತಡಸ ಗ್ರಾಮದಲ್ಲಿ ನಡೆದ ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಆಗಮಿದ್ದ ಜನರು ಮಳೆಯಿಂದ ಪರದಾಡಿದರು. ಸಭೆಗೆ ಹಾಕಿದ್ದ ಚೇರ್ಗಳನ್ನೇ ಮಳೆಯಿಂದ ರಕ್ಷಣೆ ಮಾಡಿಕೊಳ್ಳಲು ಬಳಸಿದರು. ಆದರೆ ಗಾಳಿ ಮಳೆಗೆ ಕಾರ್ಯಕ್ರಮಕ್ಕೆ ಹಾಕಿದ್ದ ಶಾಮಿಯಾನ ಹಾರಿ ಹೋಗಿ ಸಾಕಷ್ಟು ಸಮಸ್ಯೆಯಾಗಿದೆ. ಇತ್ತ ವಿಧಿ ಇಲ್ಲದೆ ಗಣ್ಯರು, ಪೋಲಿಸರು ಹಾಗೂ ಅಧಿಕಾರಿಗಳು ಮಳೆಗೆ ಮೈಯೊಡ್ಡಿದ್ದರು.