ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಘಟನೆ ನಡೆದಿದೆ ದೇವರಳ್ಳಿ ಗ್ರಾಮದ ತಿಮ್ಮೇಶ್ ಮತ್ತು ಲಕ್ಷ್ಮಿ ದಂಪತಿಯ ನವಜಾತ ಶಿಶು ಸಾವನ್ನಪ್ಪಿದೆ. ವೈದ್ಯರು ಇಲ್ಲದ ಸಂದರ್ಭದಲ್ಲಿ ಸಾಕಮ್ಮ ಎಂಬ ನರ್ಸ್ ಹೆರಿಗೆ ಮಾಡಿದ್ದಾರೆ. ಗಂಡು ಮಗುವಾಯಿತು ಅಂತ ಖುಷಿಯಲ್ಲಿದ್ದ ತಂದೆ ತಾಯಿಗಳು ಕ್ಷಣ ಮಾತ್ರದಲ್ಲಿ ದುಃಖದ ಮಡುವಿನಲ್ಲಿದ್ದಾರೆ. ಘಟನೆಗೆ ನರ್ಸ್ ಬೇಜಾವಬ್ದಾರಿತನ ಕಾರಣ ಎಂದು ಗ್ರಾಮಸ್ಥರು ಆಸ್ಪತ್ರೆ ಮುಂದೆ ಜಮಾಯಿಸಿ ಗಲಾಟೆ ನಡೆಸಿದ್ದಾರೆ.