ಹೊಸ ವರ್ಷದ ಸಂಭ್ರಮ: ರಾಜ್ಯಾದ್ಯಂತ ಸಂಭ್ರಮಾಚರಣೆಯ ಚಿತ್ರಗಳು
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಕಳೆಗಟ್ಟಿತ್ತು. ನಗರದ ಪ್ರತಿಷ್ಠಿತ ನವೀನ್ ಹೋಟೆಲ್ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆದವು. ವಿವಿಧ ಕಲಾ ತಂಡಗಳಿಂದ ಹಾಡು, ಕುಣಿತ, ಸಂಗೀತ ಜೋರಾಗಿತ್ತು. ಹೊಸ ವರ್ಷ ಸಂಭ್ರಮಕ್ಕೆ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಆಗಮಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮನರಂಜಿಸಿದರು.ಇದರ ಜತೆಗೆ ಮೈಸೂರು, ಬಳ್ಳಾರಿ, ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಹೊಸ ವರ್ಷವನ್ನು ಸಡಗರ ಸಂಭ್ರಮದಿಂದ ಆಚರಿಸಿದರು ಇದರ ಕೆಲವು ಚಿತ್ರಗಳು ಇಲ್ಲಿವೆ ..