ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದಲ್ಲಿ ಭಕ್ತರು ಹಾಗೂ ಬೆಂಬಲಿಗರ ಜೊತೆ ಮಾಜಿ ಸಚಿವ ಜನಾರ್ದನ ರೆಡ್ಡಿ ಭಜನೆ ಮಾಡಿದ್ರು.
2/ 7
ಹನುಮಮಾಲೆ ಧರಿಸಿ ಬೆಟ್ಟವನ್ನು ಏರಿದ ಜನಾರ್ದನ ರೆಡ್ಡಿ ಅವರು ಆಂಜನೇಯನ ದರ್ಶನ ಪಡೆದ್ರು. ಬಳಿಕ ಭಜನೆ ಮಾಡಿದ್ರು. ಭಜನೆ ಮಾಡುತ್ತಿದ್ದ ತಂಡ ಸೇರಿಕೊಂಡು ಭಜನೆಯಲ್ಲಿ ಜನಾರ್ದನ ರೆಡ್ಡಿ ಕೂಡ ತಾಳ ಹಾಕಿದ್ರು.
3/ 7
ಮಾಜಿ ಸಚಿವ, ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರ ತಾತ್ಕಾಲಿಕ ವಾಸ್ತವ್ಯಕ್ಕೆ ಗಂಗಾವತಿಯಲ್ಲಿ ಭವ್ಯ ಬಂಗಲೆ ಸಿದ್ಧವಾಗಿದೆ.
4/ 7
ಕನಕಗಿರಿ ರಸ್ತೆಯಲ್ಲಿ ಈ ಭವ್ಯ ಬಂಗಲೆ ನಿರ್ಮಾಣವಾಗಿದ್ದು, ರೆಡ್ಡಿ ಅವರ ಅಲ್ಲೇ ವಾಸ್ತವ್ಯ ಹೂಡಿಲಿದ್ದಾರೆ.
5/ 7
ಇಲ್ಲಿನ ಕನಕಗಿರಿ ರಸ್ತೆಯ ರೈಲ್ವೆ ಮೇಲ್ಸೆತುವೆ ದಾಟಿದ ಬಳಿಕ ಇರುವ ಹೊಸ ಲೇಔಟ್ನಲ್ಲಿ ಉದ್ಯಮಿ ವಿನೋದ್ ಸುರಾನಾ ಎಂಬುವವರಿಗೆ ಸೇರಿದ ಹೊಸ ಬಂಗಲೆಯೊಂದನ್ನು ರೆಡ್ಡಿ ಆಪ್ತರು ಜನಾರ್ದನ ರೆಡ್ಡಿ ಅವರಿಗಾಗಿ ಮೀಸಲಿಟ್ಟಿದ್ದಾರೆ.
6/ 7
ಸೋಮವಾರ ಬೆಳಗ್ಗೆ ನಗರಕ್ಕೆ ಆಗಮಿಸಿರುವ ಜನಾರ್ದನ ರೆಡ್ಡಿ, ಇಡೀ ದಿನ ಹನುಮ ಮಾಲೆ ನಿಮಿತ್ತ ನಗರದಲ್ಲಿ ನಡೆದ ಸಂಕೀರ್ತನಾ ಯಾತ್ರೆ, ಅಂಜನಾದ್ರಿ ಬೆಟ್ಟಕ್ಕೆ ಭೇಟಿ, ಪಂಪಾಸರೋವರ ದರ್ಶನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
7/ 7
ಸೋಮವಾರ ರಾತ್ರಿ ಪಂಪಾ ಸರೋವರಕ್ಕೆ ತೆರಳಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಮಂಗಳವಾರ ಕೊಪ್ಪಳದ ಗಂಗಾವತಿಯಲ್ಲಿರೋ ತಾತ್ಕಾಲಿಕ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಬಳಿಕವಷ್ಟೇ ಅಲ್ಲಿ ವಾಸ ಮಾಡುವುದರ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.