Namma Metro: ಯುಪಿಎಸ್ ಪರೀಕ್ಷಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ಬಿಎಂಆರ್ಸಿಎಲ್
UPSC ಪರೀಕ್ಷಾರ್ಥಿಗಳಿಗೆ ಮೆಟ್ರೋ ಗುಡ್ ನ್ಯೂಸ್ ನೀಡಿದೆ. ಮೇ 28ರಂದು ಯುಪಿಎಸ್ಸಿ ಪರೀಕ್ಷೆಗಳು ನಡೆಯಲಿವೆ.
1/ 7
ಬೆಂಗಳೂರಿನಂತಹ ಮಹಾನಗರದಲ್ಲಿ ಟ್ರಾಫಿಕ್ ಯಾವಾಗ ಎಲ್ಲಿ ಉಂಟಾಗುತ್ತೆ ಎಂದು ಗೊತ್ತಾಗಲ್ಲ. ಟ್ರಾಫಿಕ್ ತಪ್ಪಿಸಿಕೊಳ್ಳಲು ಜನರು ಮೆಟ್ರೋ ಪ್ರಯಾಣಕ್ಕೆ ಆದ್ಯತೆ ನೀಡುತ್ತಾರೆ.
2/ 7
ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಮೂಲಕ ಸಮಯ ಉಳಿತಾಯ ಆಗುತ್ತೆ ಅನ್ನೋದು ಪ್ರಯಾಣಿಕರ ಪ್ರತಿಕ್ರಿಯೆ ಆಗಿದೆ. ಇತ್ತೀಚೆಗೆ ನಮ್ಮ ಮೆಟ್ರೋ ಕಾಯುವಿಕೆ ಸಮಯಯವನ್ನು ಕಡಿಮೆ ಮಾಡಲಾಗಿದೆ.
3/ 7
ಸಾಮಾನ್ಯವಾಗಿ ನಮ್ಮ ಮೆಟ್ರೋ ಬೆಳಗ್ಗೆ 7 ಗಂಟೆಯಿಂದ ಸಂಚಾರ ಆರಂಭಿಸುತ್ತವೆ. ಇದೀಗ ಯುಪಿಎಸ್ಸಿ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ನೀಡಿದೆ.
4/ 7
UPSC ಪರೀಕ್ಷೆಯಿರುವ ಹಿನ್ನೆಲೆಯಲ್ಲಿ ಮೇ 28 ರಂದು ಬೆಳಗ್ಗೆ 7 ರ ಬದಲು ಒಂದು ಗಂಟೆ ಮುಂಚಿತವಾಗಿ ಸಂಚಾರ ಆರಂಭಿಸಲಿವೆ.
5/ 7
ಮೇ 28ರಂದು ಬೆಳಗ್ಗೆ 6 ಗಂಟೆಯಿಂದಲೇ ಮಟ್ರೋ ಕಾರ್ಯಾಚರಣೆ ನಡೆಸಲಿದೆ ಎಂದು BMRCL ಪ್ರಕಟಣೆ ಹೊರಡಿಸಿದೆ. ಈ ಮೂಲಕ ಪರೀಕ್ಷಾರ್ಥಿಗಳಿಗೆ ನಮ್ಮ ಮೆಟ್ರೋ ಅನುಕೂಲ ಕಲ್ಪಿಸಿದೆ.
6/ 7
ಈ ಹಿಂದೆಯೂ ಮೆಟ್ರೋ ಹಲವು ಪ್ರಮುಖ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸಂಚಾರದ ಸಮಯ ವಿಸ್ತರಣೆ ಮಾಡುವ ಮೂಲಕ ಜನಸ್ನೇಹಿ ಅಂತ ಅನ್ನಿಸಿಕೊಳ್ಳುತ್ತಿದೆ.
7/ 7
ಒಂದು ಗಂಟೆ ಮುಂಚಿತವಾಗಿ ಮೆಟ್ರೋ ಆರಂಭಗೊಳ್ಳುತ್ತಿರುವ ಹಿನ್ನೆಲೆ ಪರೀಕ್ಷಾರ್ಥಿಗಳು ಅವಸರವಿಲ್ಲದೇ ಪರೀಕ್ಷಾ ಕೇಂದ್ರಕ್ಕೆ ತೆರಳಬಹುದು.
First published: