ಕೆಲವೊಮ್ಮೆ ಮೆಟ್ರೋ ನಿರ್ವಹಣೆ ಕಾರ್ಯದಿಂದ ಸೇವೆಯಲ್ಲಿ ವ್ಯತ್ಯಯ ಉಂಟಾದ್ರೆ ಜನರು ಸಮಸ್ಯೆಗೆ ಒಳಗಾಗುತ್ತಾರೆ. ಇದರ ಜೊತೆಗೆ ಮೆಟ್ರೋ ಸೇವೆಯಲ್ಲಿ ಸಮಸ್ಯೆ ಅಥವಾ ನಿಲ್ದಾಣದಲ್ಲಿ ಮೂಲಸೌಕರ್ಯಗಳ ತೊಂದರೆ ಅನುಭವಿಸಿದಾಗ ದೂರು ಸಲ್ಲಿಸಲು ಸಾರ್ವಜನಿಕರಿಗೆ ಸೂಕ್ತ ವೇದಿಕೆಯ ಕೊರತೆ ಇತ್ತು.
2/ 8
ಸಾರ್ವಜನಿಕ ಸೇವೆಗಳಲ್ಲಿರುವ ಸಂಸ್ಥೆ ಅಥವಾ ಸರ್ಕಾರ ಅವರಿಗೆ ಸಹಾಯವಾಣಿ ಸೇರಿದಂತೆ ದೂರು ಸ್ವೀಕಾರ ಕೇಂದ್ರಗಳನ್ನು ಸ್ಥಾಪಿಸಬೇಕಾದದ್ದು ಕಡ್ಡಾಯವಾಗಿದೆ. ಇದೀಗ ನಮ್ಮ ಮೆಟ್ರೋ ಸಹ ಪ್ರಯಾಣಿಕರ ಸಮಸ್ಯೆ ಆಲಿಸಲು ಹೊಸ ವೇದಿಕೆ ನಿರ್ಮಿಸಿದೆ.
3/ 8
ಈ ವೇದಿಕೆ ಅಂದ್ರೆ ವೆಬ್ ಸೈಟ್ ಗೆ ಕಳೆದ ಮಂಗಳವಾರ ಚಾಲನೆ ನೀಡಲಾಗಿದೆ. ಈ ವೆಬ್ ಸೈಟ್ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಲಭ್ಯವಿದೆ.
4/ 8
ಈ ಹಿಂದೆ ಪ್ರಯಾಣಿಕರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ರೈಲ್ವೆಯಲ್ಲಿ ಪ್ರಯಾಣಿಕರ ಕ್ಷೇಮಾಭಿವೃದ್ಧಿ ಸಂಘದ ಮಾದರಿಯಲ್ಲಿ ಮೆಟ್ರೋ ಪ್ರಯಾಣಿಕರ ಸಂಘ ಸ್ಥಾಪಿಸಬೇಕು ಎಂದು ಮಾಜಿ ನಗರ ಆಯುಕ್ತ ಭಾಸ್ಕರ್ ರಾವ್ ಸಲಹೆಯನ್ನು ನೀ ಡಿದ್ದರು.
5/ 8
ಇದೀಗ ಇಂತಹ ಮಾದರಿಯಲ್ಲಿ ಸೌಲಭ್ಯವೊಂದನ್ನು ನಮ್ಮ ಮೆಟ್ರೋ ಮಂಗಳವಾರ ಲೋಕಾರ್ಪಣೆಗೊಳಿಸಿದೆ. ಈ ವೆಬ್ ಸೈಟ್ ನಲ್ಲಿ ಪ್ರಯಾಣಿಕರ ದೂರುಗಳಿಗಾಗಿಯೇ ಪ್ರತ್ಯೇಕ ವಿಭಾಗವನ್ನು ತೆರೆಯಲಾಗಿದೆ.
6/ 8
ಈ ಕುರಿತು ಐಟಿ, ಸಾಮಾಜಿಕ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ದಿವ್ಯಾ ಹೊಸೂರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದಾರೆ.
7/ 8
ವೆಬ್ ಸೈಟ್ ಗೆ ಚಾಲನೆ ನೀಡಲಾಗಿದ್ದು, ಇದರಲ್ಲಿ ಹಲವು ಪ್ರಯಾಣಿಕ ಸ್ನೇಹಿ ವೈಶಿಷ್ಟಗಳಿವೆ. ಇದು ಮೊದಲೇ ಹಂತವಾಗಿದ್ದು, ಮುಂದಿನ ದಿನಗಳಲ್ಲಿ ವೆಬ್ ಸೈಟ್ ನಲ್ಲಿ ಇನ್ನು ಹಲವು ಸುಧಾರಣೆಗಳು ಆಗಲಿವೆ ಎಂದು ತಿಳಿಸಿದ್ದಾರೆ.
8/ 8
ಈ ವೆಬ್ ಸೈಟ್ ನಲ್ಲಿ ಪ್ರತಿ ನಿಲ್ದಾಣದಿಂದ ಮೊದಲ ರೈಲು ಮತ್ತು ಕೊನೆಯ ರೈಲುಗಳ ಮಾಹಿತಿ ಇರಲಿದೆ. ನಿಲ್ದಾಣಗಳ ನಡುವಿನ ಪ್ರಯಾಣದ ದರದ ಮಾಹಿತಿಯನ್ನು ವೆಬ್ ಸೈಟ್ ಮುಖಾಂತರ ಪ್ರಯಾಣಿಕರು ತಿಳಿದುಕೊಳ್ಳಬಹುದಾಗಿದೆ. ಪ್ರಯಾಣಿಕರು ಬಳಕೆ ಮಾಡಬಹುದಾದ ವೆಬ್ ಸೈಟ್ ಲಿಂಕ್ ಈ ರೀತಿಯಾಗಿದೆ. www.bmrc.co.in