ಮೈಸೂರು ಯುವ ದಸರಾ ಉದ್ಘಾಟನೆ ಬ್ಯಾಡ್ಮಿಂಟನ್​​​​ ತಾರೆ ಪಿ ವಿ ಸಿಂಧುಗೆ ಅಧಿಕೃತ ಆಹ್ವಾನ

ಈ ಬಾರಿಯ ಮೈಸೂರು ಯುವ ದಸರಾ ಮಹೋತ್ಸವಕ್ಕೆ ಬ್ಯಾಡ್ಮಿಂಟನ್​ ತಾರೆ ವಿಶ್ವಚಾಂಪಿಯನ್​ ಪಿ.ವಿ. ಸಿಂಧು ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್​​ ನಲ್ಲಿರುವ ಅವರ ನಿವಾಸದಲ್ಲಿ ಸದಸ್ಯ ಪ್ರತಾಪ್​ ಸಿಂಹ ಕಾರ್ಯಕ್ರಮ ಉದ್ಘಾಟಿಸಲು ಆಗಮಿಸುವಂತೆ ಸಿಂಧು ಅವರನ್ನು ಅಧಿಕೃತವಾಗಿ ಆಹ್ವಾನಿಸಿದರು. ಅಕ್ಟೋಬರ್​ 1ರಂದು ಯುವ ದಸರಾ ಪ್ರಾರಂಭಗೊಳ್ಳಲಿದೆ. ಇದನ್ನು ಉದ್ಘಾಟಿಸಲು ಬರುವಂತೆ ಕೋರಿ ಸಿಎಂ ಬಿ.ಎಸ್​. ಯಡಿಯೂರಪ್ಪ ನಾಲ್ಕು ದಿನಗಳ ಹಿಂದೆ ಪತ್ರ ಬರೆದಿದ್ದರು. ಸಂಸದ ಪ್ರತಾಪ್​ ಸಿಂಹ ಹಾಗೂ ಮೈಸೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಷ್ಯಂತ್​ ಒಟ್ಟಾಗಿ ಸಿಂಧು ಅವರನ್ನು ಭೇಟಿಯಾಗಿ ಹೂಗುಚ್ಛ ನೀಡಿ ಆಹ್ವಾನಿಸಿದ್ದಾರೆ.

First published: