Mysore: ಅಯ್ಯೋ ದುರ್ವಿಧಿಯೇ.. ಅಣ್ಣನ ಮೃತದೇಹ ಕಂಡು ಎದೆಯೊಡೆದುಕೊಂಡು ಪ್ರಾಣ ಬಿಟ್ಟ ತಂಗಿ..!
ಮೈಸೂರು(Brother & Sister Death): ಹುಟ್ಟಿನೊಂದಿಗೆ ಸಾವನ್ನು ಕರೆ ತರುವ ಮನುಷ್ಯ ಒಂದಲ್ಲ ಒಂದು ದಿನ ಸಾವಿನ ಮನೆ ಸೇರಲೇಬೇಕು. ಈ ಕಟುಸತ್ಯ ಗೊತ್ತಿದ್ದರೂ ಸಾವು ಕಣ್ಣಿರನ್ನ ಬೇಡದೆ ಇರಲಾರದು. ಕುಟುಂಬದವರ, ಸಂಬಂಧಿಕರ , ಸ್ನೇಹಿತರ ನಿಧನ ಎಂಥವರನ್ನೂ ತಲ್ಲಣಿಸುವಂತೆ ಮಾಡುತ್ತೆ. ಆದರೆ ಸಾವೇ ಸಾವಿಗೆ ಕಾರಣವಾದ ಘಟನೆ ಸಾಂಸ್ಕೃತಿಕ ನಗರಿಯಲ್ಲಿ ನಡೆದಿದೆ.
ಹುಣಸೂರಿನಲ್ಲಿ ಇಂತಹದೊಂದು ಮನಕಲಕುವ ಘಟನೆ ನಡೆದಿದೆ. ಅಣ್ಣನ ಮೃತದೇಹ ಕಂಡು ತೀವ್ರ ಆಘಾತಕ್ಕೊಳಗಾದ ತಂಗಿಯೂ ಮೃತಪಟ್ಟಿದ್ದಾಳೆ. ಸಾವಿನಲ್ಲಿ ಅಣ್ಣನಿಗೆ ತಂಗಿಯೂ ಜೊತೆಯಾಗಿದ್ದು ಅವರ ಕುಟುಂಬಕ್ಕೆ ದೊಡ್ಡ ಅಘಾತ ನೀಡಿದೆ.
2/ 4
ಕೀರ್ತಿ(28) ಎಂಬಾತ ಅಪಘಾತದಲ್ಲಿ ಮೃತ ಪಟ್ಟಿದನು. ಈತನ ಅಂತ್ಯಕ್ರಿಗೆ ಆಗಮಿಸಿದ ದೊಡ್ಡಪ್ಪನ ಮಗಳು ರಶ್ಮಿ(21), ಮೃತದೇಹ ನೋಡುತ್ತಲೇ ಕುಸಿದು ಬಿದ್ದಿದ್ದಾಳೆ. ತಕ್ಷಣ ರಶ್ಮಿಯನ್ನು ಹುಣಸೂರು ಆಸ್ಪತ್ರೆಗೆ ದಾಖಲಿಸಲಾಯಿತು. (ಸಾಂದರ್ಭಿಕ ಚಿತ್ರ)
3/ 4
ಆದರೆ ಚಿಕಿತ್ಸೆ ಫಲಿಸದೆ ರಶ್ಮಿ ಪ್ರಾಣಬಿಟ್ಟಿದ್ದಾಳೆ. ಸಾವಿನಿಂದ ಮತ್ತೊಂದು ಸಾವು ಸಂಭವಿಸಿದೆ. ಮೊದಲೇ ನೋವಿನಲ್ಲಿದ್ದ ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. (ಸಾಂದರ್ಭಿಕ ಚಿತ್ರ)
4/ 4
ಹುಣಸೂರು ತಾಲೂಕಿನ ಸೋಮನಹಳ್ಳಿ ಗೇಟ್ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಕೀರ್ತಿ ಸ್ಥಳದಲ್ಲೇ ಮೃತಪಟ್ಟಿದ್ದ. ಈತನ ಸಾವಿನ ನೋವಿನಿಂದ ತಂಗಿ ರಶ್ಮಿ ಕೂಡ ಪ್ರಾಣಬಿಟ್ಟಿದ್ದಾಳೆ. (ಸಾಂದರ್ಭಿಕ ಚಿತ್ರ)