23 ವರ್ಷದ ಅಶ್ವಿನಿ ಮೃತ ಯುವತಿ. ಮೈಸೂರು ನಗರದ ಬಿಳಿಕೆರೆ ಸಮೀಪದ ಕೆರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಗರ್ಭಿಣಿ ಆಶ್ವಿನಿ ಶವ ಪತ್ತೆಯಾಗಿದೆ.
2/ 8
ಪ್ರಮೋದ್ ಎಂಬಾತನನ್ನು ಪ್ರೀತಿಸುತ್ತಿದ್ದ ಅಶ್ವಿನಿ, ಕುಟುಂಬಸ್ಥರು ಒಪ್ಪಿಸಿ ಜೂನ್ 13, 2021ರಂದು ಮದುವೆಯಾಗಿದ್ದರು. ಪ್ರಮೋದ್ ಮೈಸೂರು ತಾಲೂಕಿನ ನಿವಾಸಿ.
3/ 8
ಕೆಲ ದಿನಗಳ ಹಿಂದೆ ಪತಿ ಜೊತೆ ಮನಸ್ತಾಪ ಮಾಡಿಕೊಂಡಿದ್ದ ಅಶ್ವಿನಿ ತವರು ಮನೆ ಸೇರಿದ್ದಳು. ಭಾನುವಾರ ವಿಜಯನಗರದಲ್ಲಿರುವ ಪತ್ನಿಯ ಮನೆಗೆ ಪ್ರಮೋದ್ ಬಂದಿದ್ದಾನೆ. ಪತ್ನಿಯನ್ನು ಹೊರಗೆ ಕರೆದುಕೊಂಡು ಹೋಗಿದ್ದಾನೆ.
4/ 8
ಮಧ್ಯಾಹ್ನ ಹೋದ ಮಗಳು ರಾತ್ರಿಯಾದರೂ ಬರದಿದ್ದಾಗ ಕುಟುಂಬಸ್ಥರು ಆತಂಕಗೊಂಡು ಅಶ್ವಿನಿಗೆ ಫೋನ್ ಮಾಡಿದ್ದಾರೆ. ಆದ್ರೆ ಅಶ್ವಿನಿ ಕಾಲ್ ರಿಸೀವ್ ಮಾಡಿರಲಿಲ್ಲ.
5/ 8
ಇಬ್ಬರು ಕಾಲ್ ರಿಸೀವ್ ಮಾಡದ ಹಿನ್ನೆಲೆ ಕುಟುಂಬಸ್ಥರು ರಾತ್ರಿಯೇ ಮಗಳನ್ನು ಹುಡುಕಾಡಲು ಆರಂಭಿಸಿದ್ದಾರೆ.
6/ 8
ಸೋಮವಾರ ಬೆಳಗ್ಗೆ ಕೆರೆಯ ಬಳಿ ಶವ ಪತ್ತೆಯಾಗಿರುವ ವಿಷಯ ತಿಳಿದು ಅಶ್ವಿನಿ ಪೋಷಕರು ದೌಡಾಯಿಸಿದ್ದಾರೆ. ಅದು ತಮ್ಮ ಮಗಳು ಅಶ್ವಿನಿ ಎಂದು ಗುರುತಿಸಿದ್ದಾರೆ.
7/ 8
ನಮ್ಮ ಮಗಳನ್ನು ಅಳಿಯನೇ ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
8/ 8
ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನು ಪೊಲೀಸರು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.