Rohini sindhuri: ಚಾಮುಂಡೇಶ್ವರಿ ಉತ್ಸವದಲ್ಲಿ ದೇವರ ಪಲ್ಲಕ್ಕಿ ಎಳೆದು ಗಮನಸೆಳೆದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಗಳು
Rohini sindhuri Family: ದಸರಾಗೆ ಮುನ್ನ ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ಆಗಮಿಸಿದ್ದ ರೋಹಿಣಿ ಸಿಂಧೂರಿ ನಾಡಹಬ್ಬವನ್ನು ಯಶಸ್ವಿಯಾಗಿ ಆಚರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ತರುವಲ್ಲಿ ಕೂಡ ಯಶಸ್ವಿಯಾಗಿದ್ದಾರೆ. ತಮ್ಮ ಮುಂದಿದ್ದ ಎರಡು ಸವಾಲುಗಳನ್ನು ಪೂರೈಸಿದ ಅವರು, ಚಾಮುಂಡೇಶ್ವರಿ ಉತ್ಸವದ ಪಲ್ಲಕ್ಕಿ ಆಚರಣೆಯಲ್ಲಿ ಕುಟುಂಬ ಸಮೇತ ಭಾಗಿಯಾಗಿದ್ದಾರೆ. ಈ ವೇಳೆ ತಮ್ಮ ಪುಟ್ಟ ಮಗಳೊಂದಿಗೆ ದೇವರ ಪಲ್ಲಕ್ಕಿ ಎಳೆದು ಗಮನ ಸೆಳೆದರು.
News18 Kannada | October 27, 2020, 3:59 PM IST
1/ 7
ವಿಜಯದಶಮಿ ಬಳಿಕ ಚಾಮುಂಡಿ ಬೆಟ್ಟದಲ್ಲಿ ಪಲ್ಲಕ್ಕಿ ಉತ್ಸವ ನಡೆಯುತ್ತಿದೆ.
2/ 7
ಈ ಉತ್ಸವದಲ್ಲಿ ತಮ್ಮ ಕುಟುಂಬ ಸಮೇತ ಭಾಗಿಯಾದ ರೋಹಿಣಿ ಸಿಂಧೂರಿ ಪಲ್ಲಕ್ಕಿ ಎಳೆದು ದೇವರ ಸೇವೆಯಲ್ಲಿ ಭಾಗಿಯಾದರು.
3/ 7
ಈ ಸೇವೆಯಲ್ಲಿ ರೋಹಿಣಿ ಸಿಂಧೂರಿ ಅವರ ತಾಯಿ ಕೂಡ ಭಾಗಿಯಾದರು
4/ 7
ಈ ವೇಳೆ ಎಲ್ಲರ ಗಮನಸೆಳೆದಿದ್ದು ರೋಹಿಣಿ ಸಿಂಧೂರಿಯವರ ಮಗಳು
5/ 7
ದಸರಾ ಯಶಸ್ವಿಯಾಗಿ ಆಚರಣೆಯಾದ ಹಿನ್ನಲೆ ಅವರು ಈ ಸೇವೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
6/ 7
ರೋಹಿಣಿ ಸಿಂಧೂರಿಯವರ ಜೊತೆ ಅವರ ಪತಿ ಕೂಡ ಸೇವೆ ಸಲ್ಲಿಸಿದರು.
7/ 7
ನಿನ್ನೆ ಜಂಬೂಸವಾರಿ ಮೆರವಣಿಗೆ ಮುಗಿಯುತ್ತಿದ್ದಂತೆ ಸಂಜೆ ಬೆಟ್ಟಕ್ಕೆ ತೆರಳಿದ್ದ ರೋಹಿಣಿ ಕುಟುಂಬ ಈ ಸೇವೆಯಲ್ಲಿ ಭಾಗಿಯಾಗಿದ್ದಾರೆ.