ದಸರಾ ಸಂಭ್ರಮ 2019: ಅಂಬಾರಿ ಹೊತ್ತು ಸಾಂಸ್ಕೃತಿಕ ನಗರಿಯಲ್ಲಿ ತಾಲೀಮು ನಡೆಸಿದ ಅರ್ಜುನ

Mysore Dasara 2019: ಸಾಂಸ್ಕೃತಿಕ ನಗರಿ ಅರಮನೆಯಲ್ಲಿ ದಸರಾ ಸಂಭ್ರಮ ಮೇಳೈಸಿದ್ದು, ದಿನನಿತ್ಯ ಗಜಪಡೆಗಳು ತಾಲೀಮು ನಡೆಸುತ್ತಿವೆ. ಇನ್ನು ಇಂದು ಕೂಡ ಗಜಪಡೆ ತಾಲೀಮು ನಡೆಸಿದ್ದು, ಇಂದು 650 ಕೆಜಿ ಅಂಬಾರಿ ಹೊರುವ ಮುನ್ನ ಇಂದು ಅದೇ ತೂಕದ ಮರದ ಅಂಬಾರಿ ಹೊತ್ತು ಅರ್ಜುನ ತಾಲೀಮು ನಡೆಸಿದ. ದಸರಾಗೂ ಮುನ್ನ ಅಂಬಾರಿ ಹೊರುವ ಹಿನ್ನೆಲೆ ಪೂಜಾಪುನಸ್ಕಾರಗಳನ್ನು ಕೂಡ ಇದೇ ವೇಳೆ ನಡೆಸಲಾಯಿತು. ಗಾಂಭೀರ್ಯದಿಂದ ಹೆಜ್ಜೆ ಹಾಕಿದ ಅರ್ಜುನನಿಗೆ ಇತರೆ ಆನೆಗಳು ಜೊತೆಯಾದವು.

First published: