ದಲಿತ ಸಮಾಜದ ಯುವಕ ಅಂತಾ ಗೃಹ ಸಚಿವರು ಹೇಳಿದ್ದಾರೆ. ಇದನ್ನು ಸೂಕ್ಷ್ಮವಾಗಿ ಜನ ಗಮನಿಸಬೇಕು. ಪೊಲೀಸರು ಒಂದು ಹೇಳಿಕೆ ಕೊಡುತ್ತಿದ್ದಾರೆ. ಗೃಹ ಸಚಿವರ ಹೇಳಿಕೆ ಅತ್ಯಂತ ಸಣ್ಣತನದ್ದು. ಸಮಾಜದ ಶಾಂತಿ ಕದಡುವ ವೇಳೆ ಗೃಹ ಸಚಿವರಿಗೆ ತಮ್ಮ ಸ್ಥಾನದ ಜವಾಬ್ದಾರಿ ಅರಿವಿಲ್ಲ ಎಂದು ವಾಗ್ದಾಳಿ ನಡೆಸಿದರು.
2/ 9
ನಿನ್ನೆ ನಡೆದಿರೋ ಕೊಲೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ರು ಕ್ರಮ ಜರಿಗಿಸಬೇಕು. ಯಾವುದೇ ಸಮಾಜದವರಾದ್ರು ಕಠಿಣ ಶಿಕ್ಷೆ ಆಗಬೇಕು. ಇಂತಹ ಘಟನೆಗಳಿಗೆ ಇತ್ತೀಚಿನ ಸಿನಿಮಾಗಳೇ ಪ್ರೇರಣೆ. ಸಿನಿಮಾ ನಿರ್ಮಾಪಕರುಗಳು ಎಚ್ಚರಿಕೆ ವಹಿಸಿ. ಇಂತಹ ಘಟನೆಗಳಿಗೆ ಪ್ರೇರಣೆ ನೀಡುವ ಸಿನಿಮಾ ಮಾಡಬೇಡಿ ಎಂದು ಕುಮಾರಸ್ವಾಮಿ ಮನವಿ ಮಾಡಿಕೊಂಡರು.
3/ 9
ಕಾಶ್ಮೀರ ಫೈಲ್ ಗೂ ಇದಕ್ಕೂ ಸಂಬಂಧ ಇಲ್ಲ. ಪ್ರತಿನಿತ್ಯ ಕೊಲೆಗಳಾಗುತ್ತಿವೆ. ಕಾರಣ ಭಾಂದವ್ಯದ ಬಾಡಿಂಗ್ ನಶಿಸಿಹೋಗುತ್ತಿದೆ. ಬಹಳಷ್ಟು ಜನ ಕೊಲೆಯಾಗಿದ್ದಾರೆ. ಆದ್ರೆ ಈ ಯುವಕನ ಕೊಲೆಯನ್ನ ತಿರುಚುವ ಮೂಲಕ ಇದರಲ್ಲೂ ರಾಜಕೀಯ ಮಾಡ್ತಿದ್ದಾರೆ ಎಂದು ಆರೋಪಿಸಿದರು.
4/ 9
ವಿದ್ಯಾರ್ಥಿನಿ ಮುಸ್ಕಾನ್ಗೆ ಅಲ್ಖೈದಾ ಮುಖಂಡನಿಂದ ಮೆಚ್ಚುಗೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಲ್ ಖೈದಾ ಕಟ್ಕೊಂಡು ಕರ್ನಾಟಕಕ್ಕೆ ಎನ್ ಮಾಡಬೇಕು. ಅವರ ಹೇಳಿಕೆಗಳಿಗೆ ನಮ್ಮಲ್ಲಿ ಯಾವುದೇ ಪ್ರಯೋಜನವಿಲ್ಲ. ನಮ್ಮ ಜನ ಅಂತವನ್ನೆಲ್ಲಾ ಪೋಷಿಸಲ್ಲ ಎಂದು ಹೇಳಿದರು.
5/ 9
ಮುಖ್ಯಮಂತ್ರಿಗಳ ಈ ಮೌನ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ.ಹಿಂದೂ ಮುಸ್ಲಿಂ ಮಧ್ಯೆ ಕಂದಕ ತರುವ ಕೆಲಸ ಬಿಜೆಪಿ ಮಾಡುತ್ತಿದೆ. ಮುಸ್ಲಿಂ ಯುವಕರು ಅಂತಾ ಆರೋಪಿಗಳ ಮೇಲೆ ಕನಿಕರ ತೋರಿಸಿ ಎಂದು ಹೇಳುವುದಿಲ್ಲ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
6/ 9
ರಾಜ್ಯದಲ್ಲಿ ಬೇರೆ ಬೇರೆ ಕಾರಣಕ್ಕಾಗಿ ಜನರ ಕೊಲೆಯಾಗಿವೆ. ಆದರೆ ಕೊಲೆ ವಿಚಾರದಲ್ಲಿ ಬಿಜೆಪಿ ಸೆಲೆಕ್ಟಿವ್ ಆಗಿ ಕಾರ್ಯ ಪ್ರವೃತವಾಗುತ್ತದೆ. ಇದು ಸರಿಯಲ್ಲ ಎಂದರು.
7/ 9
ಮಾವು ಮಾರಾಟ ಮಾಡುವವರು ಯಾರು? ಅದು 400-500 ಕೋಟಿ ವ್ಯವಹಾರ. ಏನೂ ವಿಶ್ವ ಹಿಂದೂ ಪರಿಷತ್ ನವರು ಬಂದು ವ್ಯಾಪಾರ ಮಾಡುತ್ತಾರಾ? ವಿಶ್ವ ಹಿಂದೂ ಪರಿಷತ್ ನವರು ರೇಷ್ಮೆ, ಮಾವಿನ ಡೀಲರ್ಸ್ ಗಳಾಗುತ್ತಾರಾ ಎಂದು ಪ್ರಶ್ನಿಸಿದರು.
8/ 9
ನಾಳೆ ಹುಣಸೇ, ಸಪೋಟೋ ಹಣ್ಣಿನ ವ್ಯಾಪಾರಕ್ಕೂ ಧರ್ಮ ಬರುತ್ತೆ?ನೀವು ಬೇಕಾದರೆ ನಾಮ ಹಾಕಿಕೊಂಡು ಓಡಾಡಿ. ನಮ್ಮ ರೈತರಿಗೆ ನಾಮ ಹಾಕಲು ಬರಬೇಡಿ.ನೀವು ರೈತರಿಗೆ ನಾಮ ಹಾಕಿ ಅವರ ಬದುಕು ಹಾಳು ಮಾಡಬೇಡಿ.
9/ 9
ನಾನು ಯಾವುದೇ ಪಕ್ಷದ ಓಲೈಕೆಯಲ್ಲಿಲ್ಲ. ನಾನು ಎರಡು ರಾಜಕೀಯ ಪಕ್ಷಗಳನ್ನು ಈ ರಾಜ್ಯದಿಂದ ಕಿತ್ತಾಕುವ ಸುಪಾರಿಯನ್ನು ಜನರಿಂದ ಪಡೆದಿದ್ದೇನೆ. ನಾನು ಯಾವ ಸಮಾಜದ ಓಲೈಕೆಗೂ ರಾಜಕಾರಣ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.