ಮಳೆಯಿಂದಾಗಿ ಮೈಸೂರು ಚಾಮುಂಡಿ ಬೆಟ್ಟದಲ್ಲಿ ಭೂಕುಸಿತ

ಕಳೆದರೆಡು ದಿನಗಳಿಂದ ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಸುರಿಯುತ್ತಿರುವ ಮಳೆಗೆ ಚಾಮುಂಡಿ ಬೆಟ್ಟದಲ್ಲಿನ ರಸ್ತೆ ಕುಸಿದಿದೆ. ಬೆಟ್ಟದ ವ್ಯೂ ಪಾಯಿಂಟ್ ಬಳಿ ರಸ್ತೆ ಕುಸಿದಿದ್ದು ಮುಂಜಾಗ್ರತಾ ಕ್ರಮವಾಗಿ ಆ ಭಾಗದಲ್ಲಿ ಪೊಲೀಸ್ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಇದೀಗ ಮಳೆಯಿಂದಾಗಿ ರಸ್ತೆ ಕುಸಿದು ಬ್ಯಾರಿಕೇಡ್ ಹಳ್ಳಕ್ಕೆ ಬಿದ್ದಿದೆ. ಇನ್ನು ಮಳೆಯಿಂದಾಗಿ ಚಾಮುಂಡೇಶ್ವರಿ ಬೆಟ್ಟದಿಂದ ಕೆಳಕ್ಕೆ ನಿರಂತರವಾಗಿ ಮಳೆ ನೀರು ಸುರಿಯುತ್ತಿದೆ.

First published: