Heart Attack: ಕೇವಲ 25 ವರ್ಷದ ವಿದ್ಯಾರ್ಥಿಗೆ ಹೃದಯಾಘಾತ: ತಿಂಡಿ ತಿನ್ನುವಾಗಲೇ ಹಾರಿತು ಪ್ರಾಣ!
ಮೈಸೂರು: ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪುವ ಯುವಕರ ಸಂಖ್ಯೆ ಹೆಚ್ಚಾಗಿದೆ. 20-45ರವೊಳಗಿನ ಪುರುಷರು ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ನಟ ಪುನೀತ್ ರಾಜ್ ಕುಮಾರ್ ನಿಧನದ ನಂತರ ಹೆಚ್ಚಿನ ಯುವಕರು ಹೃದಯ ತಪಾಸಣೆ ಒಳಗಾದರಾದರೂ, ಸಾವಿನ ಪ್ರಮಾಣ ತಗ್ಗಿಲ್ಲ.
ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಸಾಂಸ್ಕೃತಿಕ ನಗರಿಯ ಯುವಕ, ಕೇವಲ 25 ವರ್ಷದ ಕಾನೂನು ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಇಷ್ಟು ಚಿಕ್ಕ ವಯಸ್ಸಿಗೆ ಹಾರ್ಟ್ ಅಟ್ಯಾಕ್ ನಿಂದ ಮೃತಪಟ್ಟಿರುವುದು ಎಲ್ಲರಿಗೂ ಶಾಕ್ ನೀಡಿದೆ.
2/ 5
ಮೃತ ಯುವಕನನ್ನು ನಂಜಾಪುರ ಗ್ರಾಮದ ನಿತಿನ್ ಕುಮಾರ್(25) ಎಂದು ಗುರುತಿಸಲಾಗಿದೆ. ಹುಣಸೂರಿನ ಟಿಫಾನಿಸ್ ಹೋಂ ಹೋಟೆಲ್ ನಲ್ಲಿ ಉಪಹಾರ ಸೇವಿಸುತ್ತಿದ್ದಾಗ ನಿತಿನ್ ಏಕಾಏಕಿ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾನೆ. (ಸಾಂದರ್ಭಿಕ ಚಿತ್ರ)
3/ 5
ಬೆಳಗಿನ ತಿಂಡಿ ತಿನ್ನುವಾಗ ಹೃದಯಾಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಯುವಕ ಏಕಾಏಕಿ ಕುಸಿದು ಬೀಳುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. (ಸಾಂದರ್ಭಿಕ ಚಿತ್ರ)
4/ 5
ಮೃತ ನಿತಿನ್ ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ನಾಲ್ಕನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ. ಈತನ ಅಕಾಲಿಕ ಸಾವು ಕುಟುಂಬಸ್ಥರು, ಸ್ನೇಹಿತರಿಗೆ ಭಾರೀ ಆಘಾತವನ್ನು ನೀಡಿದೆ. (ಸಾಂದರ್ಭಿಕ ಚಿತ್ರ)
5/ 5
ಇಂಥಹ ಅಕಾಲಿಕ ಸಾವುಗಳೇ ಎಚ್ಚರಿಕೆ ಗಂಟೆಗಳಾಗಿವೆ ಎಂದರೆ ತಪ್ಪಾಗಲಾರದು. ಹೃದಯಾಘಾತ ಎಂಬುವುದು ವ್ಯಾಪಕವಾಗುತ್ತಿದ್ದು, ಯುವ ಜನತೆ ಹೃದಯದ ಆರೋಗ್ಯದತ್ತ ಗಮನ ಹರಿಸುವುದು ಮುಖ್ಯವಾಗಿದೆ.