ಪೋಷಕರೇ ಮಕ್ಕಳಿಗೆ ಸ್ನಾನ ಮಾಡಿಸುವಾಗ ಇರಲಿ ಎಚ್ಚರ.. ಮೈಸೂರಲ್ಲಿ ಬಿಸಿ ನೀರಿಗೆ ಮಗು ಬಲಿ!

Mysore Baby Death: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಂಥವರ ಮನಸ್ಸು ಕಲಕುವ ಕರುಣಾಜನಕ ಘಟನೆ ನಡೆದಿದೆ. ಯಾರೂ ಊಹಿಸದ ರೀತಿಯಲ್ಲಿ 2 ವರ್ಷದ ಮಗು ಜೀವ ಕಳೆದುಕೊಂಡಿದೆ.

First published:

  • 14

    ಪೋಷಕರೇ ಮಕ್ಕಳಿಗೆ ಸ್ನಾನ ಮಾಡಿಸುವಾಗ ಇರಲಿ ಎಚ್ಚರ.. ಮೈಸೂರಲ್ಲಿ ಬಿಸಿ ನೀರಿಗೆ ಮಗು ಬಲಿ!

    ಈ ಫೋಟೋದಲ್ಲಿ ಮುದ್ದು ಮುದ್ದಾಗಿ ಕಾಣುತ್ತಿರುವ ಈ ಹೆಣ್ಣು ಮಗುವಿನ ಹೆಸರು ಆದ್ಯಾ. ಇನ್ನು 2 ವರ್ಷವಷ್ಟೇ. ಅಂಬೆಗಾಲಿಡುತ್ತಾ ಮನೆಯ ಕಣ್ಮಣಿಯಾಗಿದ್ದ ಮಗು ಇಂದು ಕಣ್ಮರೆಯಾಗಿದೆ.

    MORE
    GALLERIES

  • 24

    ಪೋಷಕರೇ ಮಕ್ಕಳಿಗೆ ಸ್ನಾನ ಮಾಡಿಸುವಾಗ ಇರಲಿ ಎಚ್ಚರ.. ಮೈಸೂರಲ್ಲಿ ಬಿಸಿ ನೀರಿಗೆ ಮಗು ಬಲಿ!

    ತಿಳಿಯದೇ ಮೈ ಮೇಲೆ ಬಿಸಿ ನೀರು ಸುರಿದುಕೊಂಡು 2 ವರ್ಷದ ಆದ್ಯಾ ಪ್ರಾಣ ಬಿಟ್ಟಿದ್ದಾಳೆ. ಮೈಸೂರು ತಾಲೂಕಿನ ದಾಸನಕೊಪ್ಪಲು ಗ್ರಾಮದ ರಾಮು-ಜಯಲಕ್ಷ್ಮೀ ದಂಪತಿಯ ಪುತ್ರಿ ಆದ್ಯಾ ಮೃತಪಟ್ಟಿದ್ದಾಳೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 34

    ಪೋಷಕರೇ ಮಕ್ಕಳಿಗೆ ಸ್ನಾನ ಮಾಡಿಸುವಾಗ ಇರಲಿ ಎಚ್ಚರ.. ಮೈಸೂರಲ್ಲಿ ಬಿಸಿ ನೀರಿಗೆ ಮಗು ಬಲಿ!

    ಮಗುವಿಗೆ ಸ್ನಾನ ಮಾಡಿಸಲು ತಾಯಿ ನೀರು ಕಾಯಿಸಿದ್ದರು. ಬಚ್ಚಲ ಮನೆಗೆ ಮಗುವಿನ ಜೊತೆ ಬಂದಿದ್ದಾರೆ. ಬಿಸಿನೀರಿಗೆ ಬೆರೆಸಲು ತಣ್ಣೀರು ತರಲು ತಾಯಿ ಹೋದಾಗ, ಮಗು ಬಿಸಿಬಿಸಿ ನೀರನ್ನು ಮೈಮೇಲೆ ಹಾಕಿಕೊಂಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 44

    ಪೋಷಕರೇ ಮಕ್ಕಳಿಗೆ ಸ್ನಾನ ಮಾಡಿಸುವಾಗ ಇರಲಿ ಎಚ್ಚರ.. ಮೈಸೂರಲ್ಲಿ ಬಿಸಿ ನೀರಿಗೆ ಮಗು ಬಲಿ!

    ಕುದಿಯುವ ನೀರು ಮೈ ಮೇಲೆ ಬಿದ್ದಿದ್ದೆ ಮಗು ಕಿರುಚಾಡಿದೆ. ಕೂಡಲೇ ಓಡಿ ಬಂದ ತಾಯಿ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾದರೆ ಆದ್ಯಾ ಜೀವ ಬಿಟ್ಟಿದ್ದಾಳೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    MORE
    GALLERIES