ಕಳೆದ ಎರಡ್ಮೂರು ತಿಂಗಳಿನಿಂದ ರಾಜ್ಯದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿರುರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ನಮ್ಮ ರಾಮಸ್ಮರಣೆ ಬೇರೆ ಅವರಿಗೆ ತೊಂದರೆ ಆಗದಂತೆ ಇರಲಿ ಎಂದು ಬೆಳಗ್ಗೆ ಮನವಿ ಮಾಡಿಕೊಂಡಿದ್ದಾರೆ.
2/ 8
ಈ ಎಲ್ಲ ಬೆಳವಣಿಗೆಗಳ ನಡುವೆ ಕಲಬುರಗಿಯಲ್ಲಿ ಶ್ರೀರಾಮ ನವಮಿ ಅಂಗವಾಗಿ ಶೋಭಾಯಾತ್ರೆ ಭಾವಕ್ಯತೆಗೆ ಸಾಕ್ಷಿಯಾಗಿದೆ. ಶೋಭಾಯಾತ್ರೆಯಲ್ಲಿ ಭಾಗಿಯಾಗಿರುವ ಹಿಂದೂಗಳಿಗೆ ಮುಸ್ಲಿಮರು ತಂಪು ಪಾನೀಯ ವಿತರಿಸಿದ್ದಾರೆ.
3/ 8
ಶೋಭಾಯಾತ್ರೆ ಹಿನ್ನೆಲೆ ಕಲಬುರಗಿ ನಗರದ ಖಾದ್ರಿ ಚೌಕ್ ನ ಹಸನ್ ಖಾದ್ರಿ ದರ್ಗಾ ಮುಂದೆ ಮುಸ್ಲಿಂ ಬಾಂಧವರಿಂದ ಜ್ಯೂಸ್, ತಂಪು ಪಾನೀಯ ವ್ಯವಸ್ಥೆ ಮಾಡಲಾಗಿತ್ತು.
4/ 8
ಶ್ರೀರಾಮನ ಭಕ್ತರಿಗಾಗಿ ಜ್ಯೂಸ್, ತಂಪು ಪಾನೀಯ ವ್ಯವಸ್ಥೆ ಮಾಡಿದ ಮುಸ್ಲಿಂ ಭಾಂಧವರು ಸಾಲಾಗಿ ನಿಂತು ವಿತರಣೆ ಮಾಡಿದ್ದಾರೆ.
5/ 8
ಕಳೆದ ನಾಲ್ಕೈದು ವರ್ಷಗಳಿಂದ ಈ ಭಾಗದ ಮುಸ್ಲಿಂ ಸಮುದಾಯದ ಜನರು ರಾಮ ನವಮಿಯಂದು ತಂಪು ಪಾನೀಯ, ಜ್ಯೂಸ್ ವ್ಯವಸ್ಥೆ ಮಾಡಿಕೊಂಡು ಬರುತ್ತಿದ್ದಾರೆ. ಅದೇ ರೀತಿ ಈ ವರ್ಷವೂ ಈ ಪದ್ಧತಿ ಮುಂದುವರಿದಿದೆ.
6/ 8
ಇನ್ನೂ ಬಿಸಿಲಿನಲ್ಲಿ ಯಾತ್ರೆಯಲ್ಲಿ ಭಾಗಿಯಾಗಿದ್ದ ಶ್ರೀರಾಮನ ಭಕ್ತರು ತಂಪು ಪಾನೀಯ ಕುಡಿಯುವ ಮೂಲಕ ಕೂಲ್ ಕೂಲ್ ಆದರು.
7/ 8
ಇನ್ನೂ ತುಮಕೂರಿನ ಭದ್ರಮ್ಮ ಸರ್ಕಲ್ ನಲ್ಲಿ ಕಾಂಗ್ರೆಸ್ ಹಿಂದೂ, ಮುಸ್ಲಿಮರು ಕೇಸರಿ ಶಾಲ್ ಧರಿಸಿ ಶೋಭಾಯಾತ್ರೆಯಲ್ಲಿ ಭಾಗಿಯಾದವರಿಗೆ ಪಾನಕ ಮತ್ತು ಮಜ್ಜಿಗೆಯನ್ನು ವಿತರಿಸಿದರು.
8/ 8
ಈ ವರ್ಷ ರಾಮನವಮಿಯಂದು ರವಿ ಪುಷ್ಯಯೋಗವು ರೂಪುಗೊಳ್ಳುತ್ತಿದ್ದು, ಇದು 24 ಗಂಟೆಗಳ ಕಾಲ ನಡೆಯಲಿದೆ. ಪುಷ್ಯ ನಕ್ಷತ್ರವು ಏಪ್ರಿಲ್ 10 ರ ಭಾನುವಾರದಂದು ಸೂರ್ಯೋದಯದೊಂದಿಗೆ ಪ್ರಾರಂಭವಾಗುತ್ತದೆ.