ಈ ಬಾರಿ ಯೋಗಾಭ್ಯಾಸದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಭಾಗಿಯಾಗಿದ್ದು ವಿಶೇಷವಾಗಿತ್ತು. ಹಿಜಾಬ್ (Hijab), ಬುರ್ಖಾ (Burqa) ಧರಿಸಿ ಬಂದ ವಿದ್ಯಾರ್ಥಿನಿಯರು ಯೋಗಾಭ್ಯಾಸದಲ್ಲಿ ಭಾಗಿಯಾದರು.
2/ 7
ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಗೋಲಗುಮ್ಮಟ ಮೈದಾನಕ್ಕೆ ಬಂದಿದ್ದರು. ಇದೇ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಗಿಯಾಗಿದ್ದರು.
3/ 7
ಆಯುಷ್ ಮಂತ್ರಾಲಯ ನವದೆಹಲಿ, ಆಯುಷ್ ಇಲಾಖೆ ಬೆಂಗಳೂರು, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಹಯೋಗದಲ್ಲಿ ಆಯೋಜನೆ ಮಾಡಲಾಗಿತ್ತು.
4/ 7
ವಿಜಯಪುರ ನಗರದ ಮುಸ್ಲಿಂ ಯುವಕನೋರ್ವ ಯೋಗವನ್ನುಯ್ಯೂಟುಬ್ ಮೂಲಕ ಕಲಿತಿದ್ದಾರೆ. ತಾನು ಕಲಿತ ಯೋಗವನ್ನು ಇಡೀ ನಾಡಿನಾದ್ಯಂತ ಪಸರಿಸುವ ಕಾಯಕದಲ್ಲಿ ತೊಡಗಿದ್ದಾರೆ. ನಗರದ ಅಜರುದ್ದಿನ್ ಬೊಮ್ಮನಹಳ್ಳಿ ಎಂಬ ಯುವಕ ವಿಜಯಪುರ ನಗರದ ರವೀಂದ್ರನಾಥ ಠಾಗೋರ್ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದುಕೊಂಡಿದ್ದಾರೆ.
5/ 7
ಅಜರುದ್ದಿನ್ ಅವರಿಗೆ ಹೈಸ್ಕೂಲ್ ಮಟ್ಟದಲ್ಲಿ ಯೋಗ ಕಲಿಯುವ ಆಸಕ್ತಿ ಬಂದಿತ್ತು. ಯುಟ್ಯೂಬ್ ನಲ್ಲಿ ನೋಡಿ ಯೋಗಾಭ್ಯಾಸ ಕರಗತ ಮಾಡಿಕೊಂಡಿದ್ದಾರೆ.
6/ 7
2016 ರಲ್ಲಿ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ನಾಲ್ಕನೇ ಸ್ಥಾನ ಪಡದಿದ್ದರು. ಒಂದು ವೇಳೆ ಮೂರನೇ ಸ್ಥಾನದಲ್ಲಿ ಒಂದು ಸ್ಥಾನ ಪಡೆದಿದ್ದರೂ ಅಂತರರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಬ ಹುದಾಗಿತ್ತು.
7/ 7
ಸದ್ಯ ವಿಜಯಲಕ್ಷ್ಮಿ ಸರ್ವೊತ್ತಮ ದೇಶಪಾಂಡೆ ಶಿಕ್ಷಣ ಮತ್ತು ಸಾಮಾಜಿಕ ಸಂಸ್ಥೆಯಲ್ಲಿ ವಿಕಲಚೇತನ ಹಾಗೂ ಬುದ್ಧಿಮಾಂದ್ಯ ಮಕ್ಕಳಿಗೆ ಯೋಗ ಹೇಳಿಕೊಡುತ್ತಿದ್ದಾರೆ. ಬೇರೆ ಬೇರೆ ಶಾಲೆಗಳಿಗೂ ತೆರಳಿ ಯೋಗಪಾಠ ಮಾಡುತ್ತಿದ್ದಾರೆ.