ರಸ್ತೆಯಲ್ಲಿ ಎತ್ತರಕ್ಕೆ ಚೇಂಬರ್ ಪ್ಲೇಟ್ ನಿರ್ಮಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಚೇಂಬರ್ ಪ್ಲೇಟ್ ಮೇಲೆ ಸ್ಕೂಟಿ ಹತ್ತಿಸಿ ಕೆಳಗೆ ಇಳಿಸುವಾಗ ವಾಹನ ನಿಯಂತ್ರಣ ತಪ್ಪಿದ್ದಂತೆ ಕೆಳಗೆ ಬಿದ್ದ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
2/ 7
26 ವರ್ಷದ ವಿವೇಕ್ ಮೃತ ಸವಾರ. ಚೇಂಬರ್ ಪ್ಲೇಟ್ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಮೃತ ವಿವೇಕ್ ಬೆಸ್ಕಾಂ ಉದ್ಯೋಗಿಯಾಗಿದ್ದು, ಮ್ಯೂಸಿಷಿಯನ್ ಆಗಿಯೂ ಗುರುತಿಸಿಕೊಂಡಿದ್ದರು.
3/ 7
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿ ಮೂಲದ ವಿವೇಕ್ ಬೆಂಗಳೂರಿನ ಗಿರಿನಗರದಲ್ಲಿ ವಾಸವಾಗಿದ್ದರು.
4/ 7
ಕೆಲಸದ ನಿಮಿತ್ತ ಪಣತ್ತೂರಿಗೆ ಹೋಗಿದ್ದ ವಿವೇಕ್ ನಿನ್ನೆ ಹಿಂದಿರುಗುವ ವೇಳೆ ಅಪಘಾತ ಸಂಭವಿಸಿದೆ. ಶುಕ್ರವಾರ ಮಧ್ಯಾಹ್ನ ವೈಟ್ ಫೀಲ್ಡ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.
5/ 7
ಮ್ಯೂಸಿಷಿಯನ್ ಆಗಿದ್ದ ವಿವೇಕ್ ದುಬೈ, ಜಪಾನ್ ಸೇರಿದಂತೆ ಹಲವು ಕಡೆ ಕಾರ್ಯಕ್ರಮ ನೀಡ್ತಿದರು. ಕನ್ನಡದ ಹಲವು ವಾಹಿನಿಗಳಲ್ಲೂ ಕಾರ್ಯಕ್ರಮ ನೀಡಿದ್ದರು.
6/ 7
ಮ್ಯೂಸಿಕ್ ಜೊತೆಗೆ ಬೆಸ್ಕಾಂನಲ್ಲೂ ಕೆಲಸ ಮಾಡ್ತಿದ್ರು. ಅರಸೀಕೆರೆಯ ಹಾರನಹಳ್ಳಿ ನಿವಾಸಿಯಾಗಿದ್ದ ವಿವೇಕ್ ಮದುವೆಯಾಗಿ 9 ತಿಂಗಳಾಗಿತ್ತು. ಪತ್ನಿ 6 ತಿಂಗಳ ಗರ್ಭಿಣಿಯಾಗಿದ್ದಾರೆ.
7/ 7
ವಿವೇಕ್ ಸಾವಿಗೆ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ. ಜೆಡಿಎಸ್ ರಾಜ್ಯ ವಕ್ತಾರೆ ನಜ್ಮಾ ನಜೀರ್ ಅವರು ಸಹ ವಿವೇಕ್ ಸಾವಿಗೆ ಕಂಬನಿ ಮಿಡಿದಿದ್ದಾರೆ.