R Ashok-Renukacharya: ಸಚಿವ ಆರ್.ಅಶೋಕ್ ಎತ್ತಿನ ಬಂಡಿ ಮೆರವಣಿಗೆಗೆ ರೇಣುಕಾಚಾರ್ಯನೇ ಸಾರಥಿ
ದಾವಣಗೆರೆ: ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ಜಿಲ್ಲೆಯ ಸೊರಹೊನ್ನೆ ಗ್ರಾಮಕ್ಕೆ ಆಗಮಿಸಿದ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಪೂರ್ಣಕುಂಭ ಹಾಗೂ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಸ್ವಾಗತಿಸಲಾಯ್ತು.
ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರೇ ಎತ್ತಿನ ಬಂಡಿಗೆ ಸಾರಥಿ ಆಗಿದ್ದರು. ಹಸಿರು ಟವೆಲ್ ತಲೆಗೆ ಸುತ್ತಿಕೊಂಡಿದ್ದ ಶಾಸಕರು ಗ್ರಾಮಸ್ಥರತ್ತ ಕೈ ಬೀಸುತ್ತಾ ಸಾಗಿದರು.
2/ 7
ಆರ್.ಅಶೋಕ್ ಕಾರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪುಷ್ಪವೃಷ್ಟಿ ಸುರಿಸಿದರು. ಆರ್. ಅಶೋಕ್ ನಂತರ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಪೂರ್ಣಕುಂಬ ಹಾಗೂ ಎತ್ತಿನ ಬಂಡಿ ಮೂಲಕ ಸ್ವಾಗತಿಸಿಕೊಳ್ಳಲಾಯ್ತು.
3/ 7
ಇಲ್ಲಿಯೂ ಎಂ.ಪಿ.ರೇಣುಕಾಚಾರ್ಯ ಅವರೇ ಸಾರಥಿ ಆಗಿದ್ದರು. ಅಪಾರ ಸಂಖ್ಯೆಯಲ್ಲಿ ಜನರು ಸೇರುವ ಮೂಲಕ ಎಲ್ಲ ಕೊರೊನಾ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು.
4/ 7
ಒಂದು ತಿಂಗಳಲ್ಲಿಯೇ ಕೊರೊನಾದಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು ಎಂದು ಆರ್.ಅಶೋಕ್ ಭರವಸೆ ನೀಡಿದರು. ಬಿಪಿಎಲ್ ಕಾರ್ಡ್ ಇದ್ದವರಿಗೆ 1.50 ಲಕ್ಷ ಹಾಗೂ ಎಪಿಎಲ್ ಕಾರ್ಡ್ ದಾರರಿಗೆ ಕೇಂದ್ರದಿಂದ 50 ಸಾವಿರ ಪರಿಹಾರ ವಿತರಣೆ ಮಾಡಲಾಗುತ್ತದೆ. 923 ಕಂದಾಯ ಗ್ರಾಮಗಳಿಗೆ ನೋಟಿಪಿಕೇಷನ್ ನೀಡಲಾಗಿದೆ ಎಂದು ತಿಳಿಸಿದರು
5/ 7
ಇನ್ನೂ ಒಂದೂವರೆ ವರ್ಷ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರೇ ಮುಂದುವರಿಯಲಿದ್ದಾರೆ. ಮುಂದಿನ ಅವಧಿಯಲ್ಲಿ ನಿಮ್ಮ ನೇತೃತ್ವದಲ್ಲಿ ಸರ್ಕಾರ ನೆಡೆಯಲಿ ಎಂದು ಆರ್.ಅಶೋಕ್ ಸೊರೆಹೊನ್ನೆ ಗ್ರಾಮದಲ್ಲಿ ಹೇಳಿದರು. ಆರ್.ಅಶೋಕ್ ಅವರ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದರು.
6/ 7
ಬಿಜೆಪಿ ಸರ್ಕಾರ ಒಂದು ಮನೆಯನ್ನು ಕಟ್ಟಿಲ್ಲ. ಇದು ಡೋಂಗಿ ಸರ್ಕಾರ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಮುಖ್ಯಮಂತ್ರಿಗಳು, ನಮ್ಮ ಅವಧಿಯಲ್ಲಿ 4 ಲಕ್ಷ ಮನೆ ಕಟ್ಟುತ್ತೇವೆ ನಮ್ಮ ಮಕ್ಕಳು ಅಂತರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನಡೆಸುವಂತೆ ಶಿಕ್ಷಣ ನೀತಿ ತಂದಿದ್ದೇವೆ ಎಂದರು.
7/ 7
ಯಡಿಯೂರಪ್ಪನವರು ಭಾಗ್ಯ ಲಕ್ಷ್ಮೀ ಬಾಂಡ್, ಮಕ್ಕಳಿಗೆ ಸೈಕಲ್, ಸೇರಿ ಹಲವು ಯೋಜನೆ ನೀಡಿದ್ದಾರೆ. ಅವರ ಮಾರ್ಗದರ್ಶನದಲ್ಲೇ ಸರ್ಕಾರ ನಡೆಯುತ್ತಿದೆ ಎಂದು ಬಿಎಸ್ ವೈ ಯೋಜನೆಗಳನ್ನ ಸಿಎಂ ಬೊಮ್ಮಾಯಿ ಹಾಡಿ ಹೊಗಳಿದರು.