ಆತ್ಮಹತ್ಯೆಗೂ ಮುನ್ನ ಹೆತ್ತ ಮಗುವನ್ನೇ ನೀರಿನ ಬಕೆಟ್ನಲ್ಲಿ ಮುಳುಗಿಸಿ ಕೊಲೆ ಮಾಡಿದ ತಾಯಿ; ನಂಜನಗೂಡಲ್ಲಿ ದಾರುಣ ಘಟನೆ
ಹೆತ್ತ ತಾಯಿಯೇ ಎರಡು ವರ್ಷದ ಕಂದಮ್ಮನನ್ನು ನೀರು ತುಂಬಿದ ಬಕೆಟ್ನಲ್ಲಿ ಮುಳುಗಿಸಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ (Nanjangudu) ನಡೆದಿದೆ. ಮಗು ಸಾವನ್ನಪ್ಪಿದ ಬಳಿಕ ತಾಯಿ ಕೂಡ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. (ವರದಿ;- ದಿವ್ಯೇಶ್ ಜಿವಿ)
ನಂಜನಗೂಡು ತಾಲ್ಲೂಕಿನ ಗಟ್ಟವಾಡಿ ಗ್ರಾಮದ ಅನ್ನಪೂರ್ಣ ಸಾವನ್ನಪ್ಪಿದ ತಾಯಿಯಾಗಿದ್ದು, ಎರಡು ವರ್ಷದ ಗಂಡು ಮಗು ಮೋಕ್ಷಿತ್ ಕೂಡ ಸಾವನ್ನಪ್ಪಿದ್ದಾನೆ
2/ 5
ಗಟ್ಟವಾಡಿ ಗ್ರಾಮದ ಮಹದೇವ ಪ್ರಸಾದ್ ಅಲಿಯಾಸ್ ರಚ್ಚು ಎಂಬುವರ 22 ವರ್ಷದ ಅನ್ನಪೂರ್ಣ ಮದುವೆಯಾಗಿದ್ದರು. ಮುದ್ದಾದ ಗಂಡು ಮಗು ಕುಟುಂಬದ ಸಂಭ್ರಮವನ್ನು ಹೆಚ್ಚಿಸಿತು.
3/ 5
ಆದರೆ, ಇತ್ತೀಚೆಗೆ ಗಂಡ ಹೆಂಡತಿ ನಡುವೆ ಹೊಂದಾಣಿಕೆ ಕೊರತೆ ಎದುರಾಗಿತ್ತು. ದಾಂಪತ್ಯ ಜೀವನದಲ್ಲಿ ಉಂಟಾದ ಕಲಹ ಕಡೆಗೆ ಎರಡು ಜೀವಗಳ ಬಲಿ ಪಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
4/ 5
ಮೂಲತಃ ಚಾಮರಾಜನಗರ ಜಿಲ್ಲೆ ಉಮ್ಮತ್ತೂರು ಗ್ರಾಮದವಾಗಿದ್ದ ಅನ್ನಪೂರ್ಣ ಕಳೆದೆರಡು ವರ್ಷದ ಹಿಂದೆ ಮಹದೇವ ಜೊತೆ ವಿವಾಹ ಆಗಿದ್ದರು. ಮಹದೇವ ಪ್ರಸಾದ್ ಕೃಷಿಕರಾಗಿದ್ದರು.
5/ 5
ಪ್ರಕರಣ ಬೆಳಕಿಗೆ ಬಂದ ನಂತರ ಸ್ಥಳಕ್ಕೆ ನಂಜನಗೂಡಿನ ಡಿವೈಎಸ್ಪಿ ಗೋವಿಂದ ರಾಜು ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ ತಳವಾರ ದೊಡ್ಡಕವಲಂದೆ ಪಿಎಸ್ ಐ ಮಹೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿ ಪ್ರಕರಣ ದಾಖಲಿಸಿದ್ದಾರೆ