ಬಳ್ಳಾರಿ(ಅ.03): ಅಖಂಡ ಬಳ್ಳಾರಿ ಇಬ್ಬಾಗ ಆಗ್ಬೇಕು, ನೂತನ ಜಿಲ್ಲೆ ವಿಜಯನಗರ(New District Vijayanagar) ರಚನೆಯಾಗಬೇಕು ಎನ್ನುವ ಎರಡು ದಶಕಗಳ ನಿರಂತರ ಹೋರಾಟದ ಕನಸು ಶನಿವಾರ(ಅಕ್ಟೋಬರ್ 2) ಅಧಿಕೃತವಾಗಿ ನನಸಾಯಿತು. ವಿಜಯನಗರ ಸಾಮ್ರಾಜ್ಯ(Vijayanagar Empire)ದ ಗತ ವೈಭವದ ಮೂಲಕ ಸಿಎಂ ಬಸವರಾಜ್ ಬೊಮ್ಮಾಯಿ(CM Basavaraj Bommai) ವಿಜಯನಗರ ಜಿಲ್ಲೆಯನ್ನು ಉದ್ಘಾಟನೆ ಮಾಡಿದರು.
Karnataka Rains Today ಬೆಂಗಳೂರು(ಅ.03):ಈಗಾಗಲೇ ರಾಜ್ಯದಲ್ಲಿ ಶಾಹೀನ್ ಚಂಡಮಾರುತ(Cyclone Shaheen) ಪ್ರಭಾವ ಬೀರಿದ್ದು ಉತ್ತರ ಒಳನಾಡು ಮತ್ತು ಕರಾವಳಿ (Coastal Districts) ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈ ಮಧ್ಯೆ ಅಕ್ಟೋಬರ್ 5 ರಿಂದ ಎರಡು ದಿನ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಮುನ್ಸೂಚನೆ ನೀಡಿದೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್(Yellow Alert) ಘೋಷಣೆ ಮಾಡಲಾಗಿದೆ ಎಂದು ಇಲಾಖೆ ಹೇಳಿದೆ.
Gold Rate on October 03 2021: ನಿನ್ನೆಯಿಂದ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದೆ. ಇದು ಬಂಗಾರ ಪ್ರಿಯರಿಗೆ ಹಾಗೂ ಆಭರಣ ಕೊಳ್ಳುವವರಿಗೆ ಭಾರೀ ನಿರಾಸೆ ಉಂಟು ಮಾಡಿದೆ. ನಿನ್ನೆ 10 ಗ್ರಾಂ ಚಿನ್ನಕ್ಕೆ 980 ರೂಪಾಯಿ ಏರಿಕೆಯಾಗಿತ್ತು. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,470 ರೂ. ಇತ್ತು. ಇಂದು 10 ಗ್ರಾಂ ಚಿನ್ನದ ಬೆಲೆ 45,480 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯೂ ಹೆಚ್ಚಾಗಿದೆ. ನಿನ್ನೆ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 46,470 ರೂ. ಇತ್ತು. ಇಂದು 46,480 ರೂಪಾಯಿಗೆ ಏರಿಕೆಯಾಗಿದೆ.
ಕೊಡಗು(ಅ.3): ಕನ್ನಡ ನಾಡಿನ ಜೀವನದಿ, ಕೊಡಗಿನ ಕುಲದೇವತೆ ಕಾವೇರಿ ಮಾತೆ ತೀರ್ಥರೂಪಿಣಿಯಾಗುವುದನ್ನು ಕಣ್ತುಂಬಿಕೊಳ್ಳಲು ಈ ಬಾರಿಯೂ ಸರ್ಕಾರ(Karnataka Government) ಮತ್ತು ಜಿಲ್ಲಾಡಳಿತ ಸಾಕಷ್ಟು ನಿಯಮಗಳನ್ನು ಜಾರಿ ಮಾಡಿ ಆದೇಶ ಹೊರಡಿಸಿದೆ. ಅಂದರೆ ತೀರ್ಥೋದ್ಭವದಲ್ಲಿ ಭಾಗವಹಿಸಲು ಭಕ್ತರಿಗೆ ಮುಕ್ತ ಅವಕಾಶ ನೀಡಿಲ್ಲ. ಹೌದು, ಕೊಡಗು ಜಿಲ್ಲೆ ಮಡಿಕೇರಿ(Madikeri) ತಾಲ್ಲೂಕಿನ ತಲಕಾವೇರಿ(Tala Kaveri)ಯಲ್ಲಿ ಅಕ್ಟೋಬರ್ 17 ರಂದು ಮಧ್ಯಾಹ್ನ 01 ಗಂಟೆ 11 ನಿಮಿಷಕ್ಕೆ ತೀರ್ಥೋದ್ಭವ(Theerthodbhava) ಸಂಭವಿಸಲಿದೆ. ಈ ವೇಳೆ ಸಾವಿರಾರು ಭಕ್ತರು ಕೊಡಗು(Kodagu) ಜಿಲ್ಲೆ ಜೊತೆಗೆ ಹೊರ ಜಿಲ್ಲೆಗಳಿಂದಲೂ ಭಾಗವಹಿಸುತ್ತಾರೆ. ಆದರೆ ಕೋವಿಡ್ ಸೋಂಕಿನ(Coronavirus) ಮೂರನೆ ಅಲೆಯ(3rd Wave) ಆತಂಕ ಇರುವುದರಿಂದ ಎಲ್ಲಾ ಭಕ್ತರು ತೀರ್ಥೋದ್ಭವದಲ್ಲಿ ಭಾಗವಹಿಸಲು ಮುಕ್ತ ಅವಕಾಶ ನೀಡಿಲ್ಲ.
ಕೋಲ್ಕತಾ, ಅ. 2: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Chief Minister Mamata Banerjee) ಅವರ ಭವಿಷ್ಯ ನಿರ್ಧಾರ ಮಾಡಲಿರುವ ಭವಾನಿಪುರ ಕ್ಷೇತ್ರದ ಉಪ ಚುನಾವಣೆಯ (Bhabanipur By Election) ಮತ ಎಣಿಕೆ (Vote Counting) ಭಾನುವಾರ ನಡೆಯಲಿದೆ. ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (General Election) ನಂದಿಗ್ರಾಮ (Nandigrama) ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಮಮತಾ ಬ್ಯಾನರ್ಜಿ ಅವರು ಪರಾಭಾವಗೊಂಡರೂ ಅವರ ಪಕ್ಷ ತೃಣಮೂಲ ಕಾಂಗ್ರೆಸ್ ಪಕ್ಷ (Trinamool Congress Party) ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದರಿಂದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ವಿಧಾನ ಪರಿಷತ್ (Legislative Council) ಇಲ್ಲದ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಮಮತಾ ಬ್ಯಾನರ್ಜಿ ಈ ಉಪ ಚುನಾವಣೆ ಗೆದ್ದು ವಿಧಾನಸಭೆ (Assembly) ಪ್ರವೇಶಿಸಲೇಬೇಕಿದೆ.