ಪ್ರತಿ ವರ್ಷ ಜೂನ್ 1 ಅಥವಾ ಅದರ ಬಳಿಕ ಕೇರಳದ ಕರಾವಳಿಗೆ ಮುಂಗಾರು ಪ್ರವೇಶ ಆಗುತ್ತಿತ್ತು. ಆದ್ರೆ ಈ ಬಾರಿ ಮೇ 27ಕ್ಕೆ ಕೇರಳಕ್ಕೆ, ಬಳಿಕ 3 ದಿನದಲ್ಲಿ ರಾಜ್ಯಕ್ಕೆ ಮಾನ್ಸೂನ್ ಮಾರುತುಗಳು ಕರ್ನಾಟಕವನ್ನು ಪ್ರವೇಶಿಸಲಿವೆ.
2/ 8
ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮಾನ್ಸೂನ್ ಮಾರುತಗಳ ಪ್ರವೇಶ ಆರಂಭವಾಗಲಿದೆ. ಇದರಿಂದ ಬಿಸಿಲಿನ ಪ್ರಮಾಣ ಸಹ ಇಳಿಕೆಯತ್ತ ಸಾಗಲಿದೆ. ಇದಾದ ಬಳಿಕ ಮಾರುತಗಳು ದಕ್ಷಿಣ ಮತ್ತು ಉತ್ತರ ನಾಡನ್ನು ಪ್ರವೇಶಿಸುತ್ತವೆ.
3/ 8
ಸಾಮಾನ್ಯ ಜನರಿಗೆ ಮಾನ್ಸೂನ್ ಮಳೆ ಬಂದ್ರೆ ಬಿಸಿಲು ಕಡಿಮೆ ಆಗುತ್ತೆ. ಆದರೆ ಈ ಮಳೆ ಕೃಷಿ ವಲಯದಲ್ಲಿ ಪ್ರಮುಖ ಪಾತ್ರವನ್ನ ವಹಿಸುತ್ತದೆ. ಮಾನ್ಸೂನ್ ಮಳೆಯ ಜೊತೆಯಲ್ಲಿ ಕೃಷಿ ಚಟುವಟಿಕೆಗಳು ಪ್ರಾರಂಭಗೊಳ್ಳುತ್ತವೆ.
4/ 8
ಇನ್ನೂ ಈ ವರ್ಷ ಉತ್ತಮ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದ್ದು, ರೈತ ವರ್ಗ ಸಂತಸದಲ್ಲಿದೆ. ಕಳೆದ ವರ್ಷ ಅಕಾಲಿಕ ಮಳೆ ರೈತರನ್ನ ಸಂಕಷ್ಟಕ್ಕೆ ದೂಡಿತ್ತು.
5/ 8
ದೆಹಲಿ-ಎನ್ಸಿಆರ್, ಯುಪಿ, ಮಧ್ಯಪ್ರದೇಶ, ಬಿಹಾರ, ಪಂಜಾಬ್ ಮತ್ತು ಹರಿಯಾಣ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಅತಿಯಾದ ತಾಪಮಾನ ದಾಖಲಾಗುತ್ತಿದೆ. ಈ ಭಾಗದ ಜನರು ಮಳೆಯ ನಿರೀಕ್ಷೆಯಲ್ಲಿದ್ದಾರೆ.
6/ 8
ಸಾಮಾನ್ಯವಾಗಿ ಜೂನ್ 1ರಿಂದ ಮುಂಗಾರು ಆರಂಭವಾಗುತ್ತಿತ್ತು. ಈ ಬಾರಿ 4 ದಿನ ಮುಂಚಿತವಾಗಿಯೇ ಮುಂಗಾರು ಆರಂಭವಾಗಲಿದೆ. ಹವಾಮಾನ ಇಲಾಖೆಯ ಪ್ರಕಾರ ಮೇ 20ರಂದು ಮಾನ್ಸೂನ್ ಮಾರುತುಗಳ ಕೇರಳ ಪ್ರವೇಶಿಸುವ ಸಾಧ್ಯತೆಗಳಿವೆ.
7/ 8
2010 ರ ನಂತರ ಇದೇ ಮೊದಲ ಬಾರಿಗೆ ಮುಂಗಾರು ಸ್ವಲ್ಪ ಮುಂಚಿತವಾಗಿ ಆಗಮಿಸಲಿದೆ. ಕಳೆದ ವರ್ಷ ಜೂನ್ 3 ರಂದು ಮಾನ್ಸೂನ್ ಮಾರುತಗಳ ಕೇರಳವನ್ನು ಪ್ರವೇಶಿಸಿದ್ದವು.
8/ 8
2020ರಲ್ಲಿ ಜೂನ್ 1 ಮತ್ತು 2019ರಲ್ಲಿ ಜೂನ್ 8ರಂದು ಕೇರಳದ ಕರಾವಳಿಯನ್ನು ಮಾನ್ಸೂನ್ ಮಾರುತಗಳು ತಲುಪಿದ್ದವು. ಈ ವರ್ಷ ಉತ್ತರ ಭಾರತದ ರಾಜ್ಯದಲ್ಲಿ ಜೂನ್ 15ಕ್ಕೂ ಮುಂಚೆಯೇ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.