ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಕ್ಷೇತ್ರದಲ್ಲಿ ನಾನಾ ಬದಲಾವಣೆಗಳಾಗುತ್ತಿವೆ. ಅದರಲ್ಲೂ ವಿಶೇಷವಾಗಿ ಟಿಕೆಟ್ ಘೋಷಣೆ ಬಳಿಕ ವಂಚಿತರ ಬಂಡಾಯ ಪಕ್ಷದ ನಾಯಕರನ್ನು ಚಿಂತೆಗೀಡು ಮಾಡಿದೆ. ಸದ್ಯ ಕಾಂಗ್ರೆಸ್ ಮೊಳಕಾಲ್ಮೂರಲ್ಲಿ ಸಮಸ್ಯೆ ಎದುರಿಸುತ್ತಿದ್ದು, ಇದರ ನಿವಾರಣೆಗೆ ಡಿಕೆಶಿ ಯತ್ನಿಸಿದ್ದಾರೆ. ಹೀಗಿದ್ದರೂ ಟಿಕೆಟ್ ವಂಚಿತ ನಾಯಕ ಈಗ ಕೆಪಿಸಿಸಿ ಅಧ್ಯಕ್ಷನಿಗೇ ತಿರುಗೇಟು ನೀಡಿದ್ದಾರೆ.
ಹೌದು ಕಾಂಗ್ರೆಸ್ ಈಗಾಗಲೇ ತನ್ನ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ. ಆದರೆ ಈ ಪಟ್ಟಿ ಮೊಳಕಾಲ್ಮೂರು ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ.ಯೊಗೀಶ್ ಬಾಬುಗೆ ಭಾರೀ ನಿರಾಸೆ ಹುಟ್ಟಿಸಿದೆ.
2/ 7
ಇದರ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ ಬಂಡಾಯ ಸಾರಿದ್ದ ಡಾ.ಯೊಗೀಶ್ ಬಾಬು ಗ್ರಾಮ ಪಂಚಾಯತಿವಾರು ಅಭಿಪ್ರಾಯ ಕೇಳಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಇದು ಕಾಂಗ್ರೆಸ್ ನಾಯಕರನ್ನು ಚಿಂತೆಗೀಡು ಮಾಡಿತ್ತು.
3/ 7
ಆದರೆ ಇಂದು ಶುಕ್ರವಾರ ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಟ್ವೀಟ್ ಒಂದನ್ನು ಮಾಡಿ ಮೊಳಕಾಲ್ಮೂರಿನಲ್ಲಿ ಬಂಡಾಯ ಶಮನವಾಗಿರುವುದಾಗಿ ಪೋಸ್ಟ್ ಹಾಕಿದ್ದಾರೆ. ಅಲ್ಲದೇ ಇದರೊಂದಿಗೆ ಅವರು ಡಾ.ಯೊಗೀಶ್ ಬಾಬು ಜೊತೆಗಿರುವ ಫೋಟೋಗಳನ್ನೂ ಶೇರ್ ಮಾಡಿದ್ದಾರೆ.
4/ 7
ಆದರೀಗ ಡಿಕೆಶಿ ಪೋಸ್ಟ್ ಸುಳ್ಳೆಂದಿರುವ ಡಾ.ಯೊಗೀಶ್ ಬಾಬು ಬೇರೊಂದು ವಿಚಾರದ ಚರ್ಚೆಗೆಂದು ಅವರು ಕರೆದಿದ್ದರು. ಆ ಫೋಟೋಗಳನ್ನೇ ಹಾಕಿ ಸಂಧಾನ ಯಶಸ್ವಿ ಎಂದು ಹಾಕಿರುವುದಾಗಿ ಕಿಡಿ ಕಾರಿದ್ದಾರೆ.
5/ 7
ಇನ್ನು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಯೋಗೀಶ್ ಬಾಬು ಮುಂದಿನ ನಿರ್ಧಾರ ಕೈಗೊಳ್ಳಲು ಬೆಂಬಲಿಗರ ಸಭೆ ನಡೆಸಿದ್ದರು. ಈ ವೇಳೆ ಗದ್ಗದಿತರಾದ ಯೋಗೀಶ್ ಬಾಬು ನಿಮ್ಮ ಅಭಿಮಾನ, ಪ್ರೀತಿ ಬಾಂಧವ್ಯ ಸದಾ ಹೀಗೆ ಇರಲಿ ಎಂದಿದ್ದಾರೆ
6/ 7
2018ರ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸಚಿವ ಶ್ರೀರಾಮುಲು ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯೋಗೀಶ್ ಬಾಬು, ಈ ಬಾರಿ ಟಿಕೆಟ್ ಸಿಗುವ ಭರವಸೆಯಲ್ಲಿದ್ದರು.
7/ 7
ಆದರೆ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಸೇರಿದ ಕೂಡ್ಲಿಗಿ ಮಾಜಿ ಶಾಸಕ ಎನ್‌ವೈ ಗೋಪಾಲಕೃಷ್ಣ ಅವರಿಗೆ ಕಾಂಗ್ರೆಸ್ ನಾಯಕರು ಮಣೆ ಹಾಕಿದ್ದಾರೆ. ಹೀಗಾಗಿ ಮೊಳಕಾಲ್ಮೂರು ಕ್ಷೇತ್ರಕ್ಕೂ ಕಾಂಗ್ರೆಸ್ ಬಂಡಾಯದ ಬೆಂಕಿ ಹಬ್ಬಿದೆ.