Mocha Cyclone: ಮತ್ತೆ ಕೆರಳಿದ ಮೋಖಾ; ಈ ಜಿಲ್ಲೆಗಳಿಗೆ ಆತಂಕವೋ ಆತಂಕ!

Rain Alert: ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಮೋಚಾ ಚಂಡಮಾರುತದ ಪರಿಣಾಮದಿಂದಾಗಿ ಮಳೆಯಾಗುತ್ತಿದೆ. ಮಳೆ ಕಡಿಮೆ ಆಯ್ತು ಅನ್ನೋವಷ್ಟರಲ್ಲಿ ಶಾಂತವಾಗಿದ್ದ ಮೋಖಾ ಚಂಡಮಾರುತ ಕೆರಳಿದೆ.

First published:

  • 19

    Mocha Cyclone: ಮತ್ತೆ ಕೆರಳಿದ ಮೋಖಾ; ಈ ಜಿಲ್ಲೆಗಳಿಗೆ ಆತಂಕವೋ ಆತಂಕ!

    ಮೋಖಾ ಸೈಕ್ಲೋನ್ ಪರಿಣಾಮ ಮುಂದಿನ ಮೂರು ದಿನ ರಾಜ್ಯದ ಈ ಭಾಗದಲ್ಲಿ ಗುಡುಗು-ಸಿಡಿಲು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    MORE
    GALLERIES

  • 29

    Mocha Cyclone: ಮತ್ತೆ ಕೆರಳಿದ ಮೋಖಾ; ಈ ಜಿಲ್ಲೆಗಳಿಗೆ ಆತಂಕವೋ ಆತಂಕ!

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಮಳೆ ಅಬ್ಬರಿಸಲಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ವರುಣನ ಆರ್ಭಟ ಹೆಚ್ಚಾಗಲಿದೆ.

    MORE
    GALLERIES

  • 39

    Mocha Cyclone: ಮತ್ತೆ ಕೆರಳಿದ ಮೋಖಾ; ಈ ಜಿಲ್ಲೆಗಳಿಗೆ ಆತಂಕವೋ ಆತಂಕ!

    ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲೂ ಮಳೆ ಸಾಧ್ಯತೆಗಳಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ಕೊಟ್ಟಿದೆ. ಕಳೆದ ಕೆಲ ದಿನಗಳಿಂದ ಸಿಡಿಲು ಬಡಿದು ಜನರು ಸಾವನ್ನಪ್ಪುತ್ತಿರುವ ವರದಿಗಳು ಬಂದಿವೆ.

    MORE
    GALLERIES

  • 49

    Mocha Cyclone: ಮತ್ತೆ ಕೆರಳಿದ ಮೋಖಾ; ಈ ಜಿಲ್ಲೆಗಳಿಗೆ ಆತಂಕವೋ ಆತಂಕ!

    ಇಂದು ಮತ್ತು ನಾಳೆ ಮೋಖಾ ಚಂಡಮಾರುತ ತೀವ್ರಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    MORE
    GALLERIES

  • 59

    Mocha Cyclone: ಮತ್ತೆ ಕೆರಳಿದ ಮೋಖಾ; ಈ ಜಿಲ್ಲೆಗಳಿಗೆ ಆತಂಕವೋ ಆತಂಕ!

    ಗಾಳಿಯ ವೇಗೆ 1 ಗಂಟೆಗೆ 130 ಕಿ.ಮೀ ತಲುಪಬಹುದು ಎಂದು ಎಚ್ಚರಿಸಿದೆ. ಮೋಖಾ ತೀವ್ರಗೊಳ್ಳುತ್ತಿರುವ ಸೂಚನೆ ಹಿನ್ನೆಲೆ ಪಶ್ಚಿಮ ಬಂಗಾಳಕ್ಕೆ ಎನ್‌ಡಿಆರ್‌ಎಫ್ ತಂಡಗಳು ಆಗಮಿಸಿವೆ. ಪ್ರವಾಸಿಗರು ಮತ್ತು ಮೀನುಗಾರರಿಗೆ ಮೇ 12 ಮತ್ತು 13 ರಂದು ಸಮುದ್ರಕ್ಕೆ ಇಳಿಯದಂತೆ ಸೂಚನೆಗಳನ್ನು ನೀಡಲಾಗಿದೆ.

    MORE
    GALLERIES

  • 69

    Mocha Cyclone: ಮತ್ತೆ ಕೆರಳಿದ ಮೋಖಾ; ಈ ಜಿಲ್ಲೆಗಳಿಗೆ ಆತಂಕವೋ ಆತಂಕ!

    ಉಡುಪಿಯಲ್ಲಿ ಏಕಾಏಕಿ ಗಾಳಿ ಜೊತೆ ಸಿಡಿಲು ಅಬ್ಬರಿಸಿದೆ ಹಾಗೂ ಸಾಧಾರಣ ಮಳೆ ಸುರಿದಿದೆ. ಕಾಪು ತಾಲೂಕಿನ‌ ಮಜೂರು ಮಸೀದಿ ಬಳಿ ಘಟನೆ ನಡೆದಿದೆ. ಗಾಳಿಯ ತೀವ್ರತೆಗೆ ಚಲಿಸುತ್ತಿದ್ದ ರಿಕ್ಷಾ ಮೇಲೆ  ಮರ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ.

    MORE
    GALLERIES

  • 79

    Mocha Cyclone: ಮತ್ತೆ ಕೆರಳಿದ ಮೋಖಾ; ಈ ಜಿಲ್ಲೆಗಳಿಗೆ ಆತಂಕವೋ ಆತಂಕ!

    ರಿಕ್ಷಾದೊಳಗಿದ್ದ ದಂಪತಿ ಮೃತಪಟ್ಟಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಸ್ಥಳೀಯರು ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಸಿಡಿಲು ಬಡಿದು ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಡ್ಯದ ಮದ್ದೂರು ತಾಲೂಕಿನ ವೈದ್ಯನಾಥಪುರದಲ್ಲಿ ನಡೆದಿದೆ.

    MORE
    GALLERIES

  • 89

    Mocha Cyclone: ಮತ್ತೆ ಕೆರಳಿದ ಮೋಖಾ; ಈ ಜಿಲ್ಲೆಗಳಿಗೆ ಆತಂಕವೋ ಆತಂಕ!

    ಹಾಲು ಉತ್ಪಾದಕ ಸಂಘದ ಸಹಕಾರ ಕಾರ್ಯದರ್ಶಿ ಮಧು ಮೃತ ದುರ್ದೈವಿಯಾಗಿದ್ದಾರೆ. ಪತ್ನಿಯನ್ನ ತವರು ಮನೆಗೆ ಬಿಟ್ಟು ಬರುವಾಗ ಮಾದರಹಳ್ಳಿ ಹಾಗೂ ಹರಳಹಳ್ಳಿ ಗ್ರಾಮದ ನಡುವೆ ಅವಘಡ ನಡೆದಿದೆ. ಮಳೆ ಬರುತ್ತಿದ್ದ ಕಾರಣ ಮರದಡಿ ಬೈಕ್ ನಿಲ್ಲಿಸಿ  ನಿಂತಿದ್ದಾಗ ಮರಕ್ಕೆ ಸಿಡಿಲು ಪಡಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    MORE
    GALLERIES

  • 99

    Mocha Cyclone: ಮತ್ತೆ ಕೆರಳಿದ ಮೋಖಾ; ಈ ಜಿಲ್ಲೆಗಳಿಗೆ ಆತಂಕವೋ ಆತಂಕ!

    ಬೆಂಗಳೂರಿನಲ್ಲಿಯೂ ತಡರಾತ್ರಿ ಸುಮಾರು 20 ನಿಮಿಷಕ್ಕೂ ಅಧಿಕ ಸಮಯ ಗುಡುಗು ಸಹಿತ ಮಳೆಯಾಗಿದೆ. ಆರ್​​ಟಿ ನಗರ, ಯಶವಂತಪುರ, ಹೆಬ್ಬಾಳ, ಯಲಹಂಕ, ಕಾರ್ಪೋರೇಷನ್, ವಿಧಾನಸೌಧ, ಶಿವಾಜಿನಗರ ಸುತ್ತಮುತ್ತ ಮಳೆಯಾಗಿದೆ.

    MORE
    GALLERIES