ದಾವಣಗೆರೆಯಲ್ಲಿ ಪಿಯು ಪರೀಕ್ಷೆ ಆರಂಭಕ್ಕೂ ಮುನ್ನ ಸಾವನ್ನಪ್ಪಿದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಯುವಕ ಆತ್ಮಹತ್ಯೆಗೆ ಮೊಬೈಲ ಗೇಮಿಂಗ್ ಹುಚ್ಚು ಕಾರಣ ಎಂದು ತಿಳಿದು ಬಂದಿದೆ.
2/ 8
ಕಳೆದ ಏಪ್ರಿಲ್ 23ರಂದು ದಾವಣಗೆರೆಯಲ್ಲಿ ಮನೆಯೊಂದರ ಕಾಂಪೌಂಡ್ನಿಂದ ಬಿದ್ದು ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಪ್ರಕರಣ ಅನೇಕ ಅನುಮಾನಗಳನ್ನು ಹುಟ್ಟು ಹಾಕಿತ್ತು.
3/ 8
ಈ ಪ್ರಕರಣ ತನಿಖೆಗೆ ನಡೆಸಿದ ಪೊಲೀಸರಿಗೆ ಯುವಕನ ಆತ್ಮಹತ್ಯೆಗೆ ಕಾರಣ ಮೊಬೈಲ್ ಗೀಳು ಎಂಬುದು ಪತ್ತೆ ಆಗಿದೆ. ಯುವಕ ಸಾಯುವ ಮುನ್ನ ಗೇಮಿಂಗ್ ವಿಡಿಯೋ ವೀಕ್ಷಣೆ ಮಾಡಿದ್ದು ತನಿಖೆಯಲ್ಲಿ ತಿಳಿದು ಬಂದಿದೆ.
4/ 8
ಇನ್ನು ಪ್ರಕರಣ ಸಂಬಂಧ ಯುವಕನ ಡೆತ್ ನೋಟ್ ಕೂಡ ಲಭ್ಯವಾಗಿದೆ. ಡೆತ್ ನೋಟ್ನಲ್ಲಿ ತನ್ನ ಸಾವಿಗೆ ಯಾರು ಕಾರಣರಲ್ಲ ಎಂದು ತಿಳಿಸಿದ್ದಾನೆ.
5/ 8
ಯುವಕ ಮೊಬೈಲ್ ಗೇಮಿಂಗ್ ಹುಚ್ಚು ಹಿಡಿಸಿಕೊಂಡಿದ್ದ. ಮೊಬೈಲ್ನಲ್ಲಿ ಭಯಾನಕ ಗೇಮ್ವೊಂದನ್ನು ಆಡುತ್ತಿದ್ದು ಈ ಸಂಬಂದ ಆತ ದೇಹದ ವಿವಿಧ ಕಡೆ ಚಾಕುವಿನಿಂದ ಇರಿದುಕೊಂಡಿದ್ದ.
6/ 8
ಸಾವಿಗೂ ಮುನ್ನ ಕೂಡ ಈತ ವಿಡಿಯೋ ನೋಡಿ ಕೈ ಕೊಯ್ದುಕೊಂಡಿದ್ದಾನೆ. ಬಳಿಕ ವಿಡಿಯೋ ನೋಡಿಕೊಂಡು ಮನೆಯ ಎರಡನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ.
7/ 8
ಯುವಕನ ಡೆತ್ನೋಟ್ ಹಾಗೂ ಮೊಬೈಲ್ ಅನ್ನು ಕೂಡ ವಶಕ್ಕೆ ಪಡೆಯಲಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
8/ 8
ಪ್ರಕರಣ ಸಂಬಂದ ಪೊಲೀಸರು ತನಿಖೆ ಮುಂದುವರೆಸಿದ್ದು, ಮೊಬೈಲ್ ಗೇಮಿಂಗ್ ಶಂಕೆ ಬಗ್ಗೆ ಇನ್ನಷ್ಟು ತನಿಖೆ ನಡೆಸಲಾಗುವುದು ಎಂದಿದ್ದಾರೆ.