MLC Election: ವಿಧಾನ ಪರಿಷತ್ ಚುನಾವಣೆ, ಮತದಾನ ಆರಂಭ; 49 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

ವಿಧಾನ ಪರಿಷತ್ ಚುನಾವಣೆಗೆ ಮತದಾನ ಆರಂಭಗೊಂಡಿದ್ದು, ಜೂನ್ 15 ರಂದು ಮತ ಎಣಿಕೆ ನಡೆಯಲಿದೆ. ಎಲ್ಲಾ ಮತದಾನ ಕೇಂದ್ರಗಳಲ್ಲಿ ಮತದಾನ ಆರಂಭಗೊಂಡಿದ್ದು, 607 ಮತಗಟ್ಟೆಗಳಲ್ಲಿ 2,84,922 ಶಿಕ್ಷಕರು ಮತ್ತು ಪದವೀಧರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

First published:

  • 18

    MLC Election: ವಿಧಾನ ಪರಿಷತ್ ಚುನಾವಣೆ, ಮತದಾನ ಆರಂಭ; 49 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

    ಇನ್ನು ಚುನಾವಣಾ ಕಣದಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ 49 ಅಭ್ಯರ್ಥಿಗಳ ಭವಿಷ್ಯ ಇಂದು ಮತಪೆಟ್ಟಿಗೆಗೆ ಸೇರಲಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ. ವಾಯುವ್ಯ ಪದವೀಧರ ಕ್ಷೇತ್ರವೊಂದರಲ್ಲಿ ಮಾತ್ರ ಜೆಡಿಎಸ್ ಸ್ಪರ್ಧೆ ಮಾಡಿಲ್ಲ.

    MORE
    GALLERIES

  • 28

    MLC Election: ವಿಧಾನ ಪರಿಷತ್ ಚುನಾವಣೆ, ಮತದಾನ ಆರಂಭ; 49 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

    ಜುಲೈ ನಾಲ್ಕರಂದು ಬಿಜೆಪಿಯ ಹಣಮಂತ ನಿರಾಣಿ, ಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡ, ಬಿಜೆಪಿಯ ಅರುಣ್ ಶಹಾಪುರ  ಮತ್ತು ಮತ್ತು ಜೆಡಿಎಸ್‌ ನ ಬಸವರಾಜ ಹೊರಟ್ಟಿ ಅವರ ಅವಧಿ ಅಂತ್ಯಗೊಳ್ಳಲಿದೆ. ಈ ಹಿನ್ನೆಲೆ ಚುನಾವಣೆ ನಡೆಯುತ್ತಿದೆ.

    MORE
    GALLERIES

  • 38

    MLC Election: ವಿಧಾನ ಪರಿಷತ್ ಚುನಾವಣೆ, ಮತದಾನ ಆರಂಭ; 49 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

    ವಿಧಾನ ಪರಿಷತ್ ನಲ್ಲಿ ಬಹುಮತ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರಕ್ಕೆ ಈ ಚುನಾವಣೆ ಮಹತ್ವದಾಗಿದೆ. ಇತ್ತ ಬಸವರಾಜ್ ಹೊರಟ್ಟಿ ಈ ಬಾರಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾರೆ.

    MORE
    GALLERIES

  • 48

    MLC Election: ವಿಧಾನ ಪರಿಷತ್ ಚುನಾವಣೆ, ಮತದಾನ ಆರಂಭ; 49 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

    ವಾಯವ್ಯ ಶಿಕ್ಷಕ ಕ್ಷೇತ್ರದ ಚುನಾವಣಾ ಕಣದಲ್ಲಿ ಅರುಣ ಶಹಪುರ (ಬಿಜೆಪಿ), ಪ್ರಕಾಶ್ ಹುಕ್ಕೇರಿ (ಕಾಂಗ್ರೆಸ್) ಮತ್ತು ಚಂದ್ರಶೇಖರ್ ಲೋಣ (ಜೆಡಿಎಸ್) ಇದ್ದಾರೆ.

    MORE
    GALLERIES

  • 58

    MLC Election: ವಿಧಾನ ಪರಿಷತ್ ಚುನಾವಣೆ, ಮತದಾನ ಆರಂಭ; 49 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

    ಪಕ್ಷೇತರ ಅಭ್ಯರ್ಥಿಗಳಾಗಿ ನಿಂಗಪ್ಪ ಬನ್ನೂರು,. ಶ್ರೀಕಾಂತ್ ಪಾಟೀಲ್, ಬಸಪ್ಪ ಮನಿಗಾರ, ಜಯಪಾಲ್ ದೇಸಾಯಿ, ಅಪ್ಪಾಸಾಹೇಬ್ ಕರುಣೆ, ಚಂದ್ರಶೇಖರ್ ಗಡಸಿ, ಸಂಗಮೇಶ್ ಚಿಕ್ಕನರಗುಂದ ಮತ್ತು ಶ್ರೇಣೀಕ್ ಜಾಂಗಟೆ ಕಣದಲ್ಲಿದ್ದಾರೆ.

    MORE
    GALLERIES

  • 68

    MLC Election: ವಿಧಾನ ಪರಿಷತ್ ಚುನಾವಣೆ, ಮತದಾನ ಆರಂಭ; 49 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

    ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಎಂಎಲ್ ಸಿ ಎಂವಿ ರವಿಶಂಕರ್, ಕಾಂಗ್ರೆಸ್‌ ನಿಂದ ಮಧು ಜಿ ಮಾದೇಗೌಡ ಮತ್ತು ಜೆಡಿಎಸ್‌ ನಿಂದ ಎಚ್‌ ಕೆ ರಾಮು ಕಣದಲ್ಲಿದ್ದಾರೆ.

    MORE
    GALLERIES

  • 78

    MLC Election: ವಿಧಾನ ಪರಿಷತ್ ಚುನಾವಣೆ, ಮತದಾನ ಆರಂಭ; 49 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

    ಚುನಾವಣೆ ನಡೆಯುವ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಂದು ವಿಶೇಷ ಸಾಂದರ್ಭಿಕ ರಜೆ ಘೋಷಣೆ ಮಾಡಲಾಗಿದೆ.

    MORE
    GALLERIES

  • 88

    MLC Election: ವಿಧಾನ ಪರಿಷತ್ ಚುನಾವಣೆ, ಮತದಾನ ಆರಂಭ; 49 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

    ಬೆಳಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಈ ಹಿಂದೆ ನಾಲ್ಕು ಗಂಟೆವರೆಗೆ ಮತದಾನ ನಡೆಯುತ್ತಿತ್ತು. ಅಭ್ಯರ್ಥಿಗಳ ಮನವಿ ಮೇರೆ ಮತದಾನದ ಅವಧಿಯನ್ನು ಒಂದು ಗಂಟೆ ವಿಸ್ತರಿಸಲಾಗಿದೆ.

    MORE
    GALLERIES