ಕಿಡಿಗೇಡಿಯೊಬ್ಬನ ಸಾಮಾಜಿಕ ಜಾತಲಾಣದಲ್ಲಿ ಹಾಕಿದ ಪೋಸ್ಟ್ ನಿಂದಾಗಿ ಹುಬ್ಬಳ್ಳಿ ಉದ್ವಿಗ್ನಗೊಂಡಿತ್ತು. ಕಲ್ಲು ತೂರಾಟದಲ್ಲಿ ಹಲವು ಪೊಲೀಸ್ ಜೀಪ್ ಗಳು ಜಖಂಗೊಂಡು, ಹಲವು ಪೊಲೀಸರು ಗಾಯಗೊಂಡಿದ್ರು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.