ಅಂದಹಾಗೆ, ಶಾಸಕ ಜಮೀರ್ ಅಹ್ಮದ್ ಅವರು ಈ ರೀತಿ ಹಣ ಹಂಚಿಕೆ ಮಾಡುತ್ತಿರುವುದು ಇದೇ ಮೊದಲೇನು ಅಲ್ಲ. ಈ ಹಿಂದೆಯೂ ಶಾಸಕರು ಹಲವು ಬಾರಿ ಹಣ ಹಂಚಿಕೆ ಮಾಡಿದ್ದಾರೆ. ಈ ಕುರಿತ ವಿಡಿಯೋಗಳನ್ನು ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸಹಾಯ ಕೋರಿ ಯಾವುದೇ ಸಾಮಾನ್ಯ ವ್ಯಕ್ತಿ ಜಮೀರ್ ಅವರ ಬಳಿ ತೆರಳಿದರು ಜಮೀರ್ ಅವರು ತಮ್ಮ ಕೈಲಿ ಎಷ್ಟಿದೆಯೋ ಅಷ್ಟು ಹಣವನ್ನು ಹಿಂದು ಮುಂದು ನೋಡದರೆ ಹಂಚಿಕೆ ಮಾಡಿರುವುದನ್ನು ಹಲವು ಸಂದರ್ಭದಲ್ಲಿ ನೋಡಿದ್ದೇವೆ.