ಶಾಸಕರು ತಮ್ಮ ಫಾರ್ಮ್ ಹೌಸ್ನಲ್ಲಿ ಆಪ್ತರ ಜೊತೆ ರಾಜಕೀಯ ಬೆಳವಣಿಗೆ ಕುರಿತು ಮಾತನಾಡುತ್ತಿರುವ ವೇಳೆ ಈ ಹೇಳಿಕೆಯನ್ನು ನೀಡಿದ್ದರು.
2/ 7
ಮುಂದಿನ ಚುನಾವಣೆಯಲ್ಲಿ ಪಕ್ಷ ಬದಲಿ ಮಾಡಲ್ಲ. ನಾಲ್ಕು ಬಾರಿ ಶಾಸಕನಾಗಿದ್ದೇನೆ. ಎರಡು ಬಾರಿ ಪಕ್ಷ ನನ್ನನ್ನು ಮಂತ್ರಿ ಮಾಡಿದೆ. ಎಲ್ಲಾ ಅಧಿಕಾರ ನೀಡಿರುವ ಪಕ್ಷ ಬಿಡಲ್ಲ ಎಂದು ಹೇಳಿದ್ದಾರೆ.
3/ 7
ಚುನಾವಣೆ ವೇಳೆ ಹಣ ಪಡೆದು ವೋಟ್ ಹಾಕ್ತಾರೆ. ಮೋದಿ ಮೋದಿ ಎಂದು ಕೂಗುತ್ತಾ ವೋಟ್ ಹಾಕುವ ಮತದಾರರು ಬೆಲೆ ಏರಿಕೆಯನ್ನು ಗಮನಿಸಬೇಕು ಎಂದು ಹೇಳುತ್ತಾ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ್ದರು.
4/ 7
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಶಾಸಕರ ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ದಿಢೀರ್ ಪ್ರತಿಭಟನೆ ನಡೆಸಿದ್ದರು.
5/ 7
ಪ್ರತಿಭಟನೆಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಬೇಷರತ್ ಕ್ಷಮೆ ಕೇಳಿರುವ ವಿಡಿಯೋ ಹೇಳಿಕೆಯನ್ನು ಶಾಸಕರಾದ ಪಿ.ಟಿ.ಪರಮೇಶ್ವರ್ ನಾಯ್ಕ್ ಬಿಡುಗಡೆ ಮಾಡಿದ್ದಾರೆ.
6/ 7
ಬೆಂಬಲಿಗರ ಜೊತೆ ಮಾತನಾಡುವ ಭರದಲ್ಲಿ ಅಸಂಸದೀಯ ಬಳಕೆಯಾಗಿರೋದಕ್ಕೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.
7/ 7
ಇದೇ ವಿಡಿಯೋ ಹೇಳಿಕೆಯಲ್ಲಿ ಡೀಸೆಲ್, ಪೆಟ್ರೋಲ್ ಮತ್ತು ಸಿಲಿಂಡರ್ ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.