Belagavi Politics: ‘ಮತ’ಪ್ರಮಾಣ; ತೆಂಗಿನಕಾಯಿ ಮೇಲೆ ಆಣೆ ಮಾಡಿಸ್ಕೊಂಡು ಮಿಕ್ಸರ್ ಗ್ರೈಂಡರ್ ಹಂಚಿಕೆ
Gift Politics: ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿಯಲ್ಲಿ ಮತದಾರರನ್ನು ಸೆಳೆಯಲು ರಾಜಕೀಯ ನಾಯಕರು ಪ್ರಯತ್ನಿಸುತ್ತಿದ್ದಾರೆ. ಇದರ ಭಾಗವಾಗಿ ಸಣ್ಣ ಸಣ್ಣ ನೆಪಗಳಲ್ಲಿ ಮತದಾರರಿ ಗಿಫ್ಟ್ ಗಳನ್ನು ನೀಡಲಾಗುತ್ತಿದೆ.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಿಕ್ಸರ್ ಗ್ರೈಂಡರ್ಗಳನ್ನು ಮತದಾರರಿಗೆ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
2/ 8
ಮಿಕ್ಸರ್ ಗ್ರೈಂಡರ್ ನೀಡುವ ಮುನ್ನ ಮತದಾರರ ಕಡೆಯಿಂದ ತೆಂಗಿನಕಾಯಿ ಮೇಲೆ ಆಣೆ ಮಾಡಿಸಿಕೊಳ್ಳಲಾಗುತ್ತಿದೆ. ಮಿಕ್ಸರ್ ಗ್ರೈಂಡರ್ ಹಂಚಿಕೆಯ ವಿಡಿಯೋಗಳು ವೈರಲ್ ಆಗ್ತಿವೆ.
3/ 8
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬೆಂಬಲಿಗರು ತೆಂಗಿನಕಾಯಿ ಮೇಲೆ ಆಣೆ ಪ್ರಮಾಣ ಮಾಡಿಸಿ ಮಿಕ್ಸರ್ ಗ್ರೈಂಡರ್ ನೀಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಧನಂಜಯ ಜಾಧವ್ ಆರೋಪ ಮಾಡಿದ್ದಾರೆ.
4/ 8
ಧನಂಜಯ ಜಾಧವ್ ಬೆಳಗಾವಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆಣೆ ಪ್ರಮಾಣ ಮಾಡಿಸುವವರನ್ನು ತರಾಟೆಗೆ ತಗೆದುಕೊಳ್ಳುವ ವಿಡಿಯೋ ಧನಂಜಯ್ ಜಾಧವ್ ಬಿಡುಗಡೆ ಮಾಡಿದ್ದಾರೆ. (ಧನಂಜಯ್ ಜಾಧವ್ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ)
5/ 8
ಧನಂಜಯ್ ಜಾಧವ್ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆಣೆ ಪ್ರಮಾಣ ಮಾಡಿಸುವವರನ್ನು ತರಾಟೆಗೆ ತಗೆದುಕೊಳ್ಳುವ ವಿಡಿಯೋ ಧನಂಜಯ್ ಜಾಧವ್ ಬಿಡುಗಡೆ ಮಾಡಿದ್ದಾರೆ.
6/ 8
ಅಷ್ಟೇ ಅಲ್ಲದೇ ಮಹಿಳೆಯರು ಮಿಕ್ಸರ್ ಗ್ರೈಂಡರ್ ಒಯ್ಯುತ್ತಿರುವ ವಿಡಿಯೋವನ್ನು ಧನಂಜಯ್ ಜಾಧವ್ ರಿಲೀಸ್ ಮಾಡಿದ್ದಾರೆ.
7/ 8
ನಿಜವಾದ ಅಭಿವೃದ್ಧಿ ಮಾಡಿದ್ರೆ ಆಣೆ ಪ್ರಮಾಣ ಏಕೆ ಮಾಡಿಡುತ್ತಿದ್ದೀರಿ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಚೇಲಾಗಳು ಪ್ರತಿ ಮನೆಗೆ ತೆರಳಿ ಆಣೆ ಮಾಡಿಸುತ್ತಿದ್ದಾರ. 'ಇದಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಜನರು ವಿರೋಧ ಮಾಡುತ್ತಿದ್ದಾರೆ ಎಂದು ಧನಂಜಯ್ ಜಾಧವ್ ಹೇಳಿದ್ದಾರೆ.
8/ 8
ನಮಗೆ ವೋಟ್ ಹಾಕಬೇಕು ಅಂತಾ ಆಣೆ ಮಾಡಿಸುತ್ತಿದ್ದಾರೆ. ಈ ರೀತಿಯ ನೀಚ ರಾಜಕಾರಣ ವಿರೋಧ ಮಾಡುತ್ತಿದ್ದೇನೆ. ಇನ್ನೂರು ವಸ್ತು ನೀಡಿ ವೋಟ್ ಹಾಕಬೇಕೆಂದು ಆಣೆ ಮಾಡಿಸುತ್ತಿದ್ದೀರಾ ಎಂದು ಕಿಡಿಕಾರಿದ್ದಾರೆ.