Sriramulu Daughter Marriage: ಯಾವ ಸ್ಟಾರ್ ಸೆಲೆಬ್ರಿಟಿಗಳ ಮದುವೆಗೂ ಕಡಿಮೆ ಇಲ್ಲ ರಾಮುಲು ಮಗಳ ಮದುವೆ; ಇಲ್ಲಿವೆ ಫೋಟೋಸ್
Rakshita Wedding: ಸಚಿವ ಶ್ರೀರಾಮುಲು ಮನೆಯಲ್ಲಿ ಈಗ ಮದುವೆ ಸಂಭ್ರಮ. ಯಾವುದೇ ಅದ್ದೂರಿ ಸ್ಟಾರ್ ಸೆಲೆಬ್ರಿಟಿಗೂ ಕಡಿಮೆ ಇಲ್ಲದಂತೆ ಈ ವಿವಾಹ ನಡೆಯುತ್ತಿದೆ. ಮೂರನೇ ದಿನದ ಅರಿಶಿನ ಕಾರ್ಯದ ವಿವಾಹ ಸಂದರ್ಭದಲ್ಲಿ ವಧು ರಕ್ಷಿತಾ ಸಿಕ್ಕಾಪಟ್ಟೆ ಮಿಂಚುತ್ತಿದ್ದಾರೆ. ಬಾಲಿವುಡ್ ನಟಿ ದಿಪೀಕಾ ಪಡುಕೋಣೆಗೆ ಮೇಕಪ್ ಮಾಡಿದ ಕಲಾವಿದರು ರಕ್ಷಿತಾ ಅಂದ ಹೆಚ್ಚಿಸಲಿದ್ದಾರೆ. ಇನ್ನು ಖ್ಯಾತ ವಸ್ತ್ರವಿನ್ಯಾಸಕ ಸಾನಿಯಾ ಸರ್ದಾರಿಯ ಅವರಿಗೆ ವಿಶೇಷವಾಗಿ ವಸ್ತ್ರ ವಿನ್ಯಾಸ ಮಾಡುತ್ತಿದ್ದಾರೆ. ಬಳ್ಳಾರಿಯ ರಾಮುಲು ಮನೆಯಲ್ಲಿ ನಡೆಯುತ್ತಿರುವ ಮದುವೆ ಕಾರ್ಯಗಳ ಎಕ್ಸ್ಕ್ಲೂಸಿವ್ ಚಿತ್ರಣಗಳು ಇಲ್ಲಿವೆ.
ಸಚಿವ ಶ್ರೀರಾಮುಲು ಅವರ ಮಗಳು ರಕ್ಷಿತಾ ಇದೇ ಮಾರ್ಚ್ 5ರಂದು ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಮಗಳ ಮದುವೆಯನ್ನು 9 ದಿನಗಳ ಕಾಲ ಅದ್ದೂರಿಯಾಗಿ ನೆರವೇರಿಸಲಾಗುತ್ತಿದೆ.
2/ 12
ಮದುವೆಗೆ ಮುನ್ನ ಅರಿಶಿಣ ಶಾಸ್ತ್ರ, ಚಪ್ಪರ ಶಾಸ್ತ್ರಗಳಂತಹ ವಿವಿಧ ಕಾರ್ಯಗಳು ನಡೆಯುತ್ತಿದೆ.
3/ 12
ನೆಂಟರಿಷ್ಟರು, ಸಂಬಂಧಿಗಳು, ಆಪ್ತರಿಂದ ಈಗಾಗಲೇ ಶ್ರೀರಾಮುಲು ಮನೆ ತುಂಬಿದ್ದು, ಮದುವೆ ಕಾರ್ಯಗಳು ಸಾಗುತ್ತಿವೆ.
4/ 12
ವಿವಾಹ ಮುಂಚಿತ ಕಾರ್ಯಗಳು ಬಳ್ಳಾರಿಯ ಅವರ ಸ್ವಗೃಹದಲ್ಲಿ ನಡೆಯುತ್ತಿದ್ದು, ಮಾರ್ಚ್ 5ರಂದು ಮದುವೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.
5/ 12
ಮದುವೆಗಾಗಿ ಅರಮನೆ ಮೈದಾನದಲ್ಲಿ 40 ಏಕರೆ ಅದ್ದೂರಿ ಸೆಟ್ ನಿರ್ಮಿಸಲಾಗಿದೆ.
6/ 12
ಹಂಪಿ ವಿರೂಪಾಕ್ಷ ದೇವಾಲಯದ ಮಾದರಿ ಒಂದು ಸೆಟ್ ಕೂಡ ಮದುವೆಗಾಗಿ ನಿರ್ಮಿಸಲಾಗಿದೆ.
7/ 12
ಸಾನಿಯಾ ಸರ್ದಾರಿಯಾ ವಧು ರಕ್ಷಿತಾಗೆ ವಿಶೇಷವಾಗಿ ವಸ್ತ್ರ ವಿನ್ಯಾಸ ಮಾಡುತ್ತಿದ್ದಾರೆ.
8/ 12
ನಟಿ ದಿಪೀಕಾ ಪಡುಕೋಣೆಗೆ ಮೇಕಪ್ ಮಾಡಿದ ಖ್ಯಾತ ಆರ್ಟಿಸ್ಟ್ಗಳು ರಕ್ಷಿತಾರ ಅಂದವನ್ನು ಹೆಚ್ಚಿಸಲಿದ್ದಾರೆ
9/ 12
ಮಾರ್ಚ್ 4ರಂದು ಅರಮನೆ ಮೈದಾನದಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದ್ದು, ಖ್ಯಾತ ಸಂಗೀತ ನಿರ್ದೇಶಕ ಗುರು ಕಿರಣ್, ಗಾಯಕಿ ಸುಹಾನಾ ಸಯ್ಯದ್ ಸೇರಿದಂತೆ ಹಲವರು ಸಂಗೀತ ರಸಸಂಜೆಯಲ್ಲಿ ಹಾಡಲಿದ್ದಾರೆ