PHOTOS : ಭೋವಿ ಗುರುಪೀಠದಲ್ಲಿ ಶಿವಧ್ಯಾನ ಮಾಡಿದ ಸಚಿವ ಬಿ ಶ್ರೀರಾಮುಲು

ಚಿತ್ರದುರ್ಗ ಭೋವಿ ಗುರುಪೀಠದಲ್ಲಿ ಇಮ್ಮಡಿ‌ ಸಿದ್ದರಾಮೇಶ್ವರ ಶ್ರೀಗಳ ಜೊತೆಯಲ್ಲಿ ಲಿಂಗಪೂಜಿ ಮೂಲಕ‌ ಶಿವಧ್ಯಾನ ಮಾಡಿದ್ದಾರೆ. ನಿನ್ನೆ ತಡರಾತ್ರಿ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಮಾಡಿದ್ದ ಆರೋಗ್ಯ ಸಚಿವ ಶ್ರೀರಾಮುಲು, ಇಂದು ಬೆಳಗ್ಗೆ ಚಿತ್ರದುರ್ಗದ ಭೋವಿ ಗುರುಪೀಠಕ್ಕೆ ಬೇಟಿ ನೀಡಿ ಸಿದ್ದರಾಮೇಶ್ವರ ಶ್ರೀಗಳ ಆಶೀರ್ವಾದ ಪಡೆದರು. ಬಳಿಕ ಮಠದಲ್ಲಿ ಪ್ರತಿ ನಿತ್ಯದಂತೆ ಇಂದು ಕೂಡ ಭೋವಿ ಗುರುಪೀಠದಲ್ಲಿ ಲಿಂಗ ಪೂಜೆ ಮಾಡಿದರು. ಪೂಜೆಯಲ್ಲಿ ಇಮ್ಮಡಿ‌ ಸಿದ್ದರಾಮೇಶ್ವರ ಸ್ವಾಮೀಜಿಗಳು ಭಾಗಿಯಾಗಿದರು. ಶ್ರೀರಾಮುಲು ಅವರ ಪೂಜೆಯಲ್ಲಿ ಬಳ್ಳಾರಿ ಮೂಲದ ಅರ್ಚಕರ ಮಂತ್ರ ಘೋಷಗಳೊಂದಿಗೆ ಸಚಿವವರು ಶಿವಧ್ಯಾನ ಮಾಡಿದರು.

First published: