ಬೆಂಗಳೂರಿನ ಎಂಇಜಿ ಗ್ರೂಪ್ ಯೋಧರಿಂದ ಅಲಸೂರು ಕೆರೆ ಸ್ವಚ್ಛತೆ

ರಾಜಕಾಲುವೆ ಮೂಲಕ ಕಲುಷಿತ ನೀರು ಸೇರ್ಪಡೆಗೊಂಡು ಹೀನ ಸ್ಥಿತಿ ತಲುಪಿರುವ ಬೆಂಗಳೂರಿನ ಹೃದಯ ಭಾಗದಲ್ಲಿರುವ ಅಲಸೂರು ಕೆರೆಯು ರಾಜಕಾಲುವೆ ಮೂಲಕ ಹರಿದು ಬರುವ ಚರಂಡಿ ನೀರಿನಿಂದ ಕಲುಷಿತಗೊಂಡಿದೆ. ಹೂಳು ಮತ್ತು ಗಿಡಗಂಟೆಗಳು ಬೆಳೆದು ಹಾಳಾಗುತ್ತಿದೆ. ಆದರೆ, ಅಲಸೂರು ಕೆರೆ ಸಮೀಪದಲ್ಲೇ ಇರುವ ಭಾರತೀಯ ಯೋಧರು ಈ ಪರಿಸ್ಥಿತಿಯನ್ನು ಸುಮ್ಮನೆ ನೋಡಿಕೊಂಡು ಇರಲಾಗದೆ ಸ್ವತಃ ತಾವೇ ಕೆರೆಗಳಿದು ಸ್ವಚ್ಛತಾ ಕಾರ್ಯ ನಡೆಸಿದರು. ಎಂಇಜಿ ವಿಂಗ್​ನ 1 ಸಾವಿರಕ್ಕೂ ಹೆಚ್ಚು ಯೋಧರು ಅಕ್ಟೋಬರ್ 10ರಂದು ಬೆಳಗ್ಗೆ 7ರಿಂದ ಮಧ್ಯಾಹ್ನ 2ಗಂಟೆಯವರೆಗೂ ಸತತವಾಗಿ ಸ್ವಚ್ಛತಾ ಕಾರ್ಯದಲ್ಲಿ ಸಮರೋಪಾದಿಯಾಗಿ ಪಾಲ್ಗೊಂಡರು. ಎಂಇಜಿ ಗ್ರೂಪ್ ಯೋಧರು ಅಲಸೂರು ಕೆರೆಯಲ್ಲಿ ಈ ಹಿಂದೆಯೂ ಹಲವು ಬಾರಿ ಇಂಥ ಸ್ವಚ್ಛತಾ ಕಾರ್ಯವನ್ನು ಮಾಡಿದ್ದರು. ಕೆರೆ ಈಗಲೂ ಜೀವಂತವಾಗಿರಲು ಈ ಯೋಧರ ಶ್ರಮವೂ ಒಂದು ಕಾರಣ ಎಂದು ನ್ಯೂಸ್18 ಕನ್ನಡದ ವರದಿಗಾರ ಶ್ಯಾಮ್ ಎಸ್. ಹೇಳುತ್ತಾರೆ. ಯೋಧರ ಈ ಕೈಂಕರ್ಯದ ಒಂದಷ್ಟು ಫೋಟೋಗಳು ಈ ಕೆಳಗಿವೆ.

First published: