Demand for Red Boiled Rice: ಕರಾವಳಿ ಭಾಗದ ಜನಕ್ಕೆ ಪಡಿತರದಲ್ಲಿ ಕೆಂಪು ಕುಚ್ಚಲಕ್ಕಿ ವಿತರಣೆ ಸದ್ಯಕ್ಕಿಲ್ಲ, ಕಾರಣವೇನು?
distribution of red boiled rice: ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿ (coastal districts) ಜನ ದೈನಂದಿನ ಆಹಾರ ಕೆಂಪು ಕುಚ್ಚಲಕ್ಕಿ. ಹೀಗಾಗಿ ಈ ಭಾಗದ ಜನರಿಗೆ ಪಡಿತರ ವ್ಯವಸ್ಥೆಯಡಿ (ration card) ಕೆಂಪು ಕುಚ್ಚಲಕ್ಕಿಯನ್ನೇ ಕೊಡುವುದಾಗಿ ಜನಪ್ರತಿನಿಧಿಗಳು ಘೋಷಿಸಿ ತಿಂಗಳುಗಳೇ ಉರುಳುತ್ತಿವೆ. ಆದರೆ ಅಕ್ಕಿ ಮಾತ್ರ ವಿತರಣೆಯಾಗಿಲ್ಲ.
ದಕ್ಷಿಣ ಕನ್ನಡ, ಉಡುಪಿಯ ಜನಕ್ಕೆ ಬಿಳಿ ಅಕ್ಕಿ ರುಚಿಸದು. ಸ್ಥಳೀಯ ಆಹಾರ ಪದ್ಧತಿಯಂತೆ ಪಡಿತರ ವಿತರಿಸುವ ಉದ್ದೇಶದಿಂದ ಈ ಭಾಗದಲ್ಲಿ ಕೆಂಪು ಕುಚ್ಚಲಕ್ಕಿ ನೀಡುವ ಯೋಜನೆಗೆ ಆಹಾರ ಇಲಾಖೆ ಮುಂದಾಗಿತ್ತು. ಆದರೆ ಯೋಜನೆ ಕೈಗೂಡುವುದು ತಡವಾಗುತ್ತಲೇ ಇದೆ.
2/ 5
ಕರಾವಳಿ ಜಿಲ್ಲೆಗಳಲ್ಲಿ ವಾರ್ಷಿಕ ಸರಾಸರಿ 12 ಲಕ್ಷ ಕ್ವಿಂಟಾಲ್ ಕೆಂಪು ಕುಚ್ಚಲಕ್ಕಿಗೆ ಬೇಡಿಕೆ ಇದೆ. ಈ ಬೇಡಿಕೆ ಪೂರೈಸಲು 20 ಲಕ್ಷ ಕ್ವಿಂಟಾಲ್ ಅಕ್ಕಿಯ ಅವಶ್ಯಕತೆ ಇದೆ. ಹೀಗಾಗಿ MO4, ಜಯ, ಅಭಿಲಾಷ, ಭದ್ರ ಕಜೆ, ಜ್ಯೋತಿ ತಳಿಯ ಅಕ್ಕಿಯನ್ನು ಖರೀದಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
3/ 5
ಆದರೆ ಈ ತಳಿಯ ಅಕ್ಕಿಗಳು ಉಡುಪಿ, ದಕ್ಷಿಣ ಕನ್ನಡ ಭಾಗದಲ್ಲಿ ಅಗತ್ಯ ಪ್ರಮಾಣದಲ್ಲಿ ಬೆಳೆಯುತ್ತಿಲ್ಲ. ಹೀಗಾಗಿ ಮಂಡ್ಯ, ಮೈಸೂರು, ಬೆಳಗಾವಿ ಭಾಗದಲ್ಲಿ ಬೆಳೆದಿರುವ ಅಕ್ಕಿಯನ್ನು ಖರೀದಿಸಬೇಕಾಗಿದೆ. ಆದರೆ ಈ ಬಗ್ಗೆಯೂ ಸ್ಪಷ್ಟತೆ ಇಲ್ಲ.
4/ 5
ಪ್ರಸ್ತುತ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಬಿಳಿ ಬಣ್ಣದ ಬಾಯಿಲ್ಡ್ ರೈಸ್ ವಿತರಿಸಲಾಗುತ್ತಿದೆ. ಆದರೆ ಈ ಭಾಗದ ರೇಷನ್ ಕಾರ್ಡುದಾರರಿಗೆ ಈ ಅಕ್ಕಿ ರುಚಿಸುತ್ತಿಲ್ಲ. ಗ್ರಾಮೀಣ ಭಾಗದ ಜನ ಈ ಅಕ್ಕಿ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ.
5/ 5
ಕೆಂಪು ಕುಚ್ಚಲಕ್ಕಿ ವಿತರಿಸಲು ಅಗತ್ಯ ಪ್ರಮಾಣದ ದಾಸ್ತಾನು ಇಲ್ಲ. ಹೀಗಾಗಿ ಕೆಂಪು ಕುಚ್ಚಲಕ್ಕಿ ವಿತರಣೆ ತಡವಾಗುತ್ತಿದೆ ಎಂದು ಆಹಾರ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ. ಆದಷ್ಟು ಬೇಗ ವ್ಯವಸ್ಥೆ ಮಾಡುವ ಭರವಸೆಯನ್ನು ನೀಡಿದ್ದಾರೆ.