Mangaluru: ನಿಶ್ಚಿತಾರ್ಥ ನಿಗದಿಯಾಗಿದ್ದ ಯುವಕ ಆತ್ಮಹತ್ಯೆಗೆ ಶರಣು

ನವೆಂಬರ್ 25ರಂದು ನಿಶ್ಚಿತಾರ್ಥ ಮಾಡಿಕೊಳ್ಳಬೇಕಿದ್ದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಈಶ್ವರ ಮಂಗಲ ಎಂಬಲ್ಲಿ ಈ ಘಟನೆ ನಡೆದಿದೆ. ಸಂಭ್ರಮ ಮನೆ ಮಾಡಿದ್ದ ನಿವಾಸದಲ್ಲಿ ಸೂತಕದ ಛಾಯೆ ಆವರಿಸಿದೆ.

First published:

  • 15

    Mangaluru: ನಿಶ್ಚಿತಾರ್ಥ ನಿಗದಿಯಾಗಿದ್ದ ಯುವಕ ಆತ್ಮಹತ್ಯೆಗೆ ಶರಣು

    ಸುಳ್ಯಪದವು ನಿವಾಸಿ ರವಿರಾಜ್ ಆತ್ಮಹತ್ಯೆ ಮಾಡಿಕೊಂಡ ಯುವಕ. ರವಿರಾಜ್ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದನು. ನವೆಂಬರ್ 25ರಂದು ನಿಶ್ಚಿತಾರ್ಥ ಹಿನ್ನೆಲೆ ಕೆಲ ದಿನಗಳ ಹಿಂದೆಯೇ ಊರಿಗೆ ಬಂದಿದ್ದನು.

    MORE
    GALLERIES

  • 25

    Mangaluru: ನಿಶ್ಚಿತಾರ್ಥ ನಿಗದಿಯಾಗಿದ್ದ ಯುವಕ ಆತ್ಮಹತ್ಯೆಗೆ ಶರಣು

    ಬಂಟ್ವಾಳದ ಯುವತಿಯೊಂದಿಗೆ ರವಿರಾಜ್ ವಿವಾಹ ನಿಶ್ಚಿತಾರ್ಥ ನಿಗದಿಯಾಗಿತ್ತು. ಈ ನಡುವೆ ನಿನ್ನೆ ಕುಂದಾಪುರದಿಂದ ಮದುವೆ ದಿಬ್ಬಣ ರವಿರಾಜ್ ಮನೆಗೆ ಬಂದಿತ್ತು.

    MORE
    GALLERIES

  • 35

    Mangaluru: ನಿಶ್ಚಿತಾರ್ಥ ನಿಗದಿಯಾಗಿದ್ದ ಯುವಕ ಆತ್ಮಹತ್ಯೆಗೆ ಶರಣು

    ರವಿರಾಜ್ ಕುಂದಾಪುರ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದನು. ಆದ್ರೆ ಈ ವಿಷಯನ್ನು ರವಿರಾಜ್ ಕುಟುಂಬಸ್ಥರಿಂದ ಮುಚ್ಚಿಟ್ಟಿದ್ದನು. ಇತ್ತ ನವೆಂಬರ್ 25ಕ್ಕೆ ನಿಶ್ಚಿತಾರ್ಥ ನಿಗದಿಯಾಗಿದ್ರೆ, ನಿನ್ನೆ ಕುಂದಾಪುರದಿಂದ ಮದುವೆ ದಿಬ್ಬಣ ಬಂದಿದ್ದರಿಂದ ರವಿರಾಜ್ ಆತಂಕಗೊಂಡಿದ್ದನು.

    MORE
    GALLERIES

  • 45

    Mangaluru: ನಿಶ್ಚಿತಾರ್ಥ ನಿಗದಿಯಾಗಿದ್ದ ಯುವಕ ಆತ್ಮಹತ್ಯೆಗೆ ಶರಣು

    ಇಂದು ಏಕಾಏಕಿ ನಿರ್ಮಾಣ ಹಂತದಲ್ಲಿದ್ದ ಸಹೋದರನ ಮನೆಯಲ್ಲಿ ರವಿರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೃತ ದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.

    MORE
    GALLERIES

  • 55

    Mangaluru: ನಿಶ್ಚಿತಾರ್ಥ ನಿಗದಿಯಾಗಿದ್ದ ಯುವಕ ಆತ್ಮಹತ್ಯೆಗೆ ಶರಣು

    ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಭಾವಿ ಪತಿಯ ಕಿರುಕುಳದಿಂದ ಹಸೆಮಣೆ ಏರಬೇಕಿದ್ದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಳು. ಸೆಪ್ಟೆಂಬರ್ 1ರಂದು ಹಾವೇರಿ ಮೂಲದ ಅಭಿನಂದನ್ ಜೊತೆ 25 ವರ್ಷದ ಪವಿತ್ರಾ ನಿಶ್ಚಿತಾರ್ಥ ನಡೆದಿತ್ತು.

    MORE
    GALLERIES