Netravati River: ನೇತ್ರಾವತಿಯಲ್ಲಿ ನೀರಿಲ್ಲ, ಮಂಗಳೂರಿನಲ್ಲಿ ಹಾಹಾಕಾರ!

Mangaluru News: ಚುನಾವಣೆ ಮುಗಿಯುತ್ತಿದ್ದಂತೆ ಮಂಗಳೂರಿನ ಜಲಕ್ಷಾಮ ಎದುರಾಗುವ ಆತಂಕ ಶುರುವಾಗಿದೆ.

First published:

  • 19

    Netravati River: ನೇತ್ರಾವತಿಯಲ್ಲಿ ನೀರಿಲ್ಲ, ಮಂಗಳೂರಿನಲ್ಲಿ ಹಾಹಾಕಾರ!

    ಜೀವಜಲ ಬತ್ತಿದೆ. ಪರ್ಯಾಯ ವ್ಯವಸ್ಥೆ ಕಾಣದಾಗಿದೆ.. ಪರಿಣಾಮ ಮೂರು ನಾಲ್ಕು ದಿನಗಳಿಗೊಮ್ಮೆ ನೀರು ಕಾಣುವಂತಾಗಿದೆ. ಇದ್ಯಾವುದೋ ಬಾಗಲಕೋಟೆ, ಕಲಬುರಗಿ ಜಿಲ್ಲೆಯ ಕಥೆಯಲ್ಲ. ಬದಲಿಗೆ ಕಡಲ ನಗರಿ ಎನಿಸಿಕೊಂಡಿರುವ ಮಂಗಳೂರು ನಗರದ ಸದ್ಯದ ಪರಿಸ್ಥಿತಿ. ಬಿಸಿಲ ಬೇಗೆಗೆ ನೆತ್ತಿ ಸುಡುತ್ತಿದ್ದರೆ ಹನಿ ನೀರಿಗೆ ಹಾಹಾಕಾರ ಶುರುವಾಗಿದೆ.

    MORE
    GALLERIES

  • 29

    Netravati River: ನೇತ್ರಾವತಿಯಲ್ಲಿ ನೀರಿಲ್ಲ, ಮಂಗಳೂರಿನಲ್ಲಿ ಹಾಹಾಕಾರ!

    ಚುನಾವಣೆ ಬಿಸಿಯಲ್ಲಿ ಜನ ನೇತ್ರಾವತಿ ಒಡಲು ಬರಿದಾಗಿದ್ದು, ಬಂಟ್ವಾಳದಲ್ಲಿರುವ ತುಂಬೆ ಡ್ಯಾಂನಲ್ಲಿ ನೀರು ಇಳಿಕೆ ಆಗುತ್ತಿರೋದನ್ನು ಮರೆತಂತಿದೆ.

    MORE
    GALLERIES

  • 39

    Netravati River: ನೇತ್ರಾವತಿಯಲ್ಲಿ ನೀರಿಲ್ಲ, ಮಂಗಳೂರಿನಲ್ಲಿ ಹಾಹಾಕಾರ!

    ಮಂಗಳೂರು ಮಹಾನಗರ ಪಾಲಿಕೆ ಪ್ರಕಾರ ಎರಡು ದಿನಕ್ಕೊಮ್ಮೆ ರೇಶನಿಂಗ್ ಪದ್ಧತಿಯಲ್ಲಿ ನೀರು ಕೊಡುತ್ತಿದ್ದರೂ, ಸಮಸ್ಯೆ ಜಟಿಲವಾಗುತ್ತಿದ್ದಂತೆ ನೀರು ಮನೆ ತಲುಪಲು ಮೂರು ನಾಲ್ಕು ದಿನಗಳು ಹಿಡಿಯುತ್ತಿದೆ.

    MORE
    GALLERIES

  • 49

    Netravati River: ನೇತ್ರಾವತಿಯಲ್ಲಿ ನೀರಿಲ್ಲ, ಮಂಗಳೂರಿನಲ್ಲಿ ಹಾಹಾಕಾರ!

    ಇಡೀ ಮಂಗಳೂರು ಮಹಾನಗರ ನೀರಿಗಾಗಿ ಆಶ್ರಯಿಸಿರುವುದು ನೇತ್ರಾವತಿ ನದಿಗೆ ಅಡ್ಡಲಾಗಿ ಬಂಟ್ವಾಳದಲ್ಲಿ ಕಟ್ಟಲಾದ ತುಂಬೆ ಜಲಾಶಯವನ್ನು. ಸದ್ಯ ತುಂಬೆ ಡ್ಯಾಂ ನೀರು ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದೆ.

    MORE
    GALLERIES

  • 59

    Netravati River: ನೇತ್ರಾವತಿಯಲ್ಲಿ ನೀರಿಲ್ಲ, ಮಂಗಳೂರಿನಲ್ಲಿ ಹಾಹಾಕಾರ!

    ಮಹಾನಗರ ಪಾಲಿಕೆ ನೀರು ಪೂರೈಕೆಯಲ್ಲಿ ರೇಶನಿಂಗ್ ವ್ಯವಸ್ಥೆ ಅಳವಡಿಸಿಕೊಂಡರೂ, ತುಂಬೆ ಡ್ಯಾಂನಲ್ಲಿ ಪ್ರತಿ ದಿನ ನೀರು ಪೂರೈಸದೇ ಇರದ ಹೊರತಾಗಿಯೂ 4 ಸೆಂಟಿ ಮೀಟರ್ ನಷ್ಟು ಇಳಿಕೆಯಾಗುತ್ತಿದೆ. ಇದು ಸದ್ಯ ಆತಂಕಕ್ಕೆ ಕಾರಣವಾಗಿದೆ.

    MORE
    GALLERIES

  • 69

    Netravati River: ನೇತ್ರಾವತಿಯಲ್ಲಿ ನೀರಿಲ್ಲ, ಮಂಗಳೂರಿನಲ್ಲಿ ಹಾಹಾಕಾರ!

    ನೇತ್ರಾವತಿ ಬತ್ತಿ ಹೋಗಿರುವುದರಿಂದ ಒಳ ಹರಿವು ಸಂಪೂರ್ಣ ನಿಂತಿದ್ದು, ತುಂಬೆ ಜಲಾಶಯ ಡ್ಯಾಂ ಬದಲಿಗೆ ನೀರಿನ ಸಣ್ಣ ಕೊಳದಂತೆ ಭಾಸವಾಗುತ್ತಿದೆ. ಇನ್ನು ಶಂಭೂರಿನಲ್ಲಿರುವ ಎಎಂಆರ್ ಡ್ಯಾಂ ನೀರನ್ನು ಕೂಡಾ ಸಂಪೂರ್ಣವಾಗಿ ತುಂಬೆಗೆ ವರ್ಗಾಯಿಸಲಾಗಿದೆ. ಆದ್ರೆ ಮಹಾನಗರದ ನೀರಿನ ಹಾಹಾಕಾರಕ್ಕೆ ಅದ್ಯಾವುದು ಸಾಲದಾಗಿದೆ.

    MORE
    GALLERIES

  • 79

    Netravati River: ನೇತ್ರಾವತಿಯಲ್ಲಿ ನೀರಿಲ್ಲ, ಮಂಗಳೂರಿನಲ್ಲಿ ಹಾಹಾಕಾರ!

    ಚುನಾವಣೆ ಕಾವು ಏರುತ್ತಿದ್ದಂತೆ, ಇತ್ತ ಮಹಾನಗರದ ಜನರ ಪಾಲಿಗೆ ನೀರಿನ ತತ್ವಾರದ ಬಿಸಿಯೂ ಎದುರಾಗಿದೆ. ನೇರವಾಗಿ ಇದು ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

    MORE
    GALLERIES

  • 89

    Netravati River: ನೇತ್ರಾವತಿಯಲ್ಲಿ ನೀರಿಲ್ಲ, ಮಂಗಳೂರಿನಲ್ಲಿ ಹಾಹಾಕಾರ!

    ಹೀಗಾಗಿ ಸದ್ಯ ಅಂತಹ ಯಾವುದೇ ನಿರ್ಧಾರಕ್ಕೆ ಜಿಲ್ಲಾಡಳಿತ ಬಾರದೇ ಹೋದರೂ, ತುಂಬೆಯ ಸದ್ಯದ ಪರಿಸ್ಥಿತಿ ಪ್ರಕಾರ ಹತ್ತು ದಿನಗಳಿಗಷ್ಟೇ ರೇಶನಿಂಗ್ ಮೂಲಕ ನೀರು ಸಿಗಬಹುದಾಗಿದೆ. ಅದು ಕೂಡಾ ಇಡೀ ಮಹಾನಗರಕ್ಕೆ ಪೂರೈಕೆ ಆಗುತ್ತದೆಯೋ, ಇಲ್ಲವೋ ಅನ್ನೋದು ಇನ್ನೂ ಪ್ರಶ್ನಾರ್ಥಕವಾಗಿದೆ.

    MORE
    GALLERIES

  • 99

    Netravati River: ನೇತ್ರಾವತಿಯಲ್ಲಿ ನೀರಿಲ್ಲ, ಮಂಗಳೂರಿನಲ್ಲಿ ಹಾಹಾಕಾರ!

    ನೀರಿನ ತತ್ವಾರ ಕೆಲವೊಂದು ಕಾಲೇಜ್, ಹೊಟೇಲ್, ವಸತಿ ಸಮುಚ್ಛಯ, ವಾಣಿಜ್ಯ ಸಂಕೀರ್ಣಗಳಿಗೂ ತಟ್ಟಿತ್ತು. ವಿವಿಧ ಧರ್ಮದ ಮುಖಂಡರು ಮಳೆಗಾಗಿ ಅಂದು ದೇವರ ಮೊರೆ ಹೋಗಿದ್ದರು. ಈ ಬಾರಿ ಮತ್ತೆ ಅಂತಹದ್ದೇ ಪರಿಸ್ಥಿತಿ ಎದುರಾಗಿದ್ದು, ಕಡಲನಗರಿಯೇ ಜಲಕ್ಷಾಮಕ್ಕೆ ತತ್ತರಿಸಿ ಹೋಗುತ್ತಿದೆ.

    MORE
    GALLERIES