ಆಸ್ಪತ್ರೆಯಲ್ಲಿಯೇ (Hospital) ಮಹಿಳಾ ಸಿಬ್ಬಂದಿ (Woman Staff) ಜೊತೆ ಕುಚ್ ಕುಚ್ ನಡೆಸಿದ್ದ ವೈದ್ಯ ರತ್ನಾಕರ್ ಎಂಬಾತನನ್ನ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಡಾ.ರತ್ನಾಕರ್ ಮಂಗಳೂರು (Mangaluru) ಜಿಲ್ಲಾ ಕುಷ್ಠರೋಗ ನಿವರಣಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದನು.
ಡಾ ರತ್ನಾಕರ್ ರನ್ನು ಸೇವೆಯಿಂದ ಅಮಾನತುಗೊಳಿಸಿರುವ ಆದೇಶ ಪ್ರತಿ ಲಭ್ಯವಾಗಿದೆ. ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಎಂ.ಕುಮಾರಸ್ವಾಮಿ ಅಮಾನತು ಆದೇಶ ಹೊರಡಿಸಿದ್ದಾರೆ. ಲೈಂಗಿಕ ಕಿರುಕುಳ ಅಧಿನಿಯಮ 2013, ಕರ್ನಾಟಕ ನಾಗರಿಕ ಸೇವಾ ನಿಯಮ 1957 ರನ್ವರ ಅಮಾನತು ಮಾಡಲಾಗಿದೆ.
2/ 5
ಮಹಿಳಾ ಆಂತರಿಕ ದೂರು ಸಮಿತಿಗೆ ಸ್ವೀಕೃತಗೊಂಡಿದ್ದ ದೂರು ಆಧರಿಸಿ ಕ್ರಮಕೈಗೊಳ್ಳಲಾಗಿದೆ. ದೂರು ದಾಖಲಿಸಿದ್ದ ಮಹಿಳಾ ಸಿಬ್ಬಂದಿ ತನಿಖೆಗೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ಮಹಿಳಾ ಸಿಬ್ಬಂದಿ ಹೇಳಿಕೆಯನ್ನು ಗಂಭೀರವಾಗಿ ಪರಿಗಿಣಸಿದ ಸಮಿತಿ ಆಮಾನತು ಆದೇಶ ಹೊರಡಿಸಿದೆ.
3/ 5
ಉಡುಪಿ ಜಿಲ್ಲಯ ಕುಂದಾಪುರ ಮೂಲದ ಡಾ.ರತ್ನಾಕರ್ ತನ್ನ ಸ್ಥಾನವನ್ನ ಬಂಡವಾಳವನ್ನಾಗಿ ಮಾಡಿಕೊಂಡಿದ್ದನು. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಜೊತೆ ಡಾ. ರತ್ನಾಕರ್ ಆಸ್ಪತ್ರೆ ಆವರಣದಲ್ಲಿ ರಾಸಲೀಲೆಯಲ್ಲಿ ತೊಡಗಿಕೊಳ್ಳುತ್ತಿದ್ದನು. ಸರಸ ಸಲ್ಲಾಪದಲ್ಲಿ ತೊಡಗಿರುವ ವಿಡಿಯೋಗಳು ವೈರಲ್ ಆಗಿದ್ದವು.
4/ 5
ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆವಿ ರಾಜೇಂದ್ರ ನೀಡಿದ ವರದಿಯಂರೆ ರತ್ನಾಕರ್ ಅಮಾನತುಗೊಳಿಸಲಾಗಿತ್ತು. ಆದ್ರೆ ಸರ್ಕಾರದ ಆದೇಶಕ್ಕೆ ತಡೆ ತಂದಿದ್ದ ರತ್ನಾಕರ್ ಅದೇ ಹುದ್ದೆಯಲ್ಲಿ ಮುಂದುವರಿದಿದ್ದನು.
5/ 5
ಇನ್ನು ರತ್ನಾಕರ್ ಇಲಾಖೆಯ ಹಣದಲ್ಲಿ ಎಲ್ಲ ಸಿಬ್ಬಂದಿಗೆ ಚಹ, ತಿಂಡಿ ಪಾರ್ಟಿ ಕೊಡಿಸುತ್ತಿರುವ ಆರೋಪ ಸಹ ಕೇಳಿ ಬಂದಿದೆ, ಇದೇ ಹಣದಲ್ಲಿ ಕೆಲವೊಮ್ಮೆ ಬಾಡೂಟ ಆಯೋಜನೆ ಮಾಡಿರುವ ಮಾತುಗಳ ಸಹ ಕೇಳಿ ಬಂದಿವೆ.