Mangaluru: ಮುಂಬೈ ಪ್ರಯಾಣ ತುಂಬಾ ಸುಲಭ, ಶುರುವಾಯ್ತು ವಿಶೇಷ ರೈಲು

ಮಂಗಳೂರಿನಿಂದ ಮುಂಬೈಗೆ ಹೊರಡುವ ಮಂದಿ ಈ ವಿಶೇಷ ರೈಲಿನಲ್ಲಿ ಆರಾಮದಾಯಕ ಪ್ರಯಾಣ ಬೆಳೆಸಬಹುದಾಗಿದೆ.

First published:

  • 18

    Mangaluru: ಮುಂಬೈ ಪ್ರಯಾಣ ತುಂಬಾ ಸುಲಭ, ಶುರುವಾಯ್ತು ವಿಶೇಷ ರೈಲು

    ಮಂಗಳೂರು ಹಾಗೂ ವಾಣಿಜ್ಯ ನಗರಿ ಮುಂಬೈಗೂ ಹತ್ತಿರದ ಸಂಬಂಧ. ರಾಜ್ಯದ ಕರಾವಳಿಯ ಅದೆಷ್ಟೋ ಮಂದಿ ಇಂದಿಗೂ ಮಾಯಾ ನಗರಿ ಮುಂಬೈಯಲ್ಲಿ ನೆಲೆಸಿದ್ದಾರೆ. ವಾಣಿಜ್ಯ, ವ್ಯಾಪಾರ, ವಹಿವಾಟು, ಮನರಂಜನೆ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Mangaluru: ಮುಂಬೈ ಪ್ರಯಾಣ ತುಂಬಾ ಸುಲಭ, ಶುರುವಾಯ್ತು ವಿಶೇಷ ರೈಲು

    ಮಂಗಳೂರಿನಿಂದ ಮುಂಬೈಗೆ ತೆರಳುವ ಪ್ರಯಾಣಿಕರಿಗೆ ಶುಭಸುದ್ದಿ. ಮಂಗಳೂರು ಜಂಕ್ಷನ್​ನಿಂದ ವಿಶೇಷ ರೈಲುವೊಂದನ್ನು ಭಾರತೀಯ ರೈಲ್ವೆ ಇಲಾಖೆ ಘೋಷಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Mangaluru: ಮುಂಬೈ ಪ್ರಯಾಣ ತುಂಬಾ ಸುಲಭ, ಶುರುವಾಯ್ತು ವಿಶೇಷ ರೈಲು

    ಇದರಿಂದಾಗಿ ಕರಾವಳಿಗರ ಪಾಲಿಗೆ ಮುಂಬೈ ಇನ್ನಷ್ಟು ಹತ್ತಿರವಾಗಲಿದೆ. ವಿಶೇಷ ಅಂದ್ರೆ, ಘೋಷಿಸಲಾದ ನೂತನ ವಿಶೇಷ ರೈಲು ಮಂಗಳೂರಿನಿಂದ ಮುಂಬೈ ನಡುವಿನ ಏಕಮುಖ ರೈಲು ಆಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Mangaluru: ಮುಂಬೈ ಪ್ರಯಾಣ ತುಂಬಾ ಸುಲಭ, ಶುರುವಾಯ್ತು ವಿಶೇಷ ರೈಲು

    ಮಂಗಳೂರು ಜಂಕ್ಷನ್​ನಿಂದ ಹೊರಡುವ ಈ ವಿಶೇಷ ರೈಲು ಮುಂಬೈಯ ಲೋಕಮಾನ್ಯ ತಿಲಕ್ ಟರ್ಮಿನಸ್ವರೆಗಿನ ಸೇವೆಯನ್ನು ಒದಗಿಸಲಿದೆ. ಏಪ್ರಿಲ್ 8 ತಾರೀಕಿನಂದು ಓಡಾಟ ನಡೆಸಲಿರುವ ಈ ವಿಶೇಷ ರೈಲು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Mangaluru: ಮುಂಬೈ ಪ್ರಯಾಣ ತುಂಬಾ ಸುಲಭ, ಶುರುವಾಯ್ತು ವಿಶೇಷ ರೈಲು

    ಏಪ್ರಿಲ್ 8 ರ ಸಂಜೆ 6.10ಕ್ಕೆ ಹೊರಡುವ ಏಕಮುಖ ಸಂಚಾರದ ಮಂಗಳೂರು-ಮುಂಬೈ ವಿಶೇಷ ರೈಲು ಮರುದಿನ ಅಂದರೆ ಎಪ್ರಿಲ್ 9 ರ ಮಧ್ಯಾಹ್ನ 1.15ಕ್ಕೆ ಮುಂಬೈ ತಲುಪಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Mangaluru: ಮುಂಬೈ ಪ್ರಯಾಣ ತುಂಬಾ ಸುಲಭ, ಶುರುವಾಯ್ತು ವಿಶೇಷ ರೈಲು

    ಈ ವಿಶೇಷ ರೈಲು ಹಲವು ನಿಲ್ದಾಣದಲ್ಲಿ ನಿಲುಗಡೆಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Mangaluru: ಮುಂಬೈ ಪ್ರಯಾಣ ತುಂಬಾ ಸುಲಭ, ಶುರುವಾಯ್ತು ವಿಶೇಷ ರೈಲು

    ಕರ್ನಾಟಕದ ಸುರತ್ಕಲ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರಸ್ತೆ, ಬೈಂದೂರು, ಭಟ್ಕಳ, ಮುರುಡೇಶ್ವರ, ಕುಮಟಾ, ಕಾರವಾರ ಹಾಗೂ ಗೋವಾ ರಾಜ್ಯದ ಮಡಗಾಂವ್, ಕರ್ಮಾಲಿ ಹಾಗೂ ಮಹಾರಾಷ್ಟ್ರದ ಕುಡಾಲ್, ಕಂಕಾವಿ, ರತ್ನಗಿರಿ, ಸಂಗಮೇಶ್ವರ ರಸ್ತೆ, ಸವರ್ದ, ಚಿಪ್ಳೂನ್, ಖೇಡ್, ವೀರ್, ರೋಹಾ, ಪನ್ವೆಲ್ ಮತ್ತು ಠಾಣೆ ಸೇರಿದಂತೆ ಈ ರೈಲು ಮಾರ್ಗದುದ್ದಕ್ಕೂ ಹಲವಾರು ನಿಲುಗಡೆಗಳನ್ನು ಹೊಂದಿರುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Mangaluru: ಮುಂಬೈ ಪ್ರಯಾಣ ತುಂಬಾ ಸುಲಭ, ಶುರುವಾಯ್ತು ವಿಶೇಷ ರೈಲು

    ಈ ವಿಶೇಷ ರೈಲು ಒಂದು ಎಸಿ 2-ಟೈರ್ ಕೋಚ್, ಒಂದು ಎಸಿ 3-ಟೈರ್ ಕೋಚ್, ಆರು ಸ್ಲೀಪರ್ ಕ್ಲಾಸ್ ಕೋಚ್ಗಳು, ಒಂಬತ್ತು ಸಾಮಾನ್ಯ ಎರಡನೇ ದರ್ಜೆಯ ಕೋಚ್​ಗಳು ಮತ್ತು ಎರಡು ಲಗೇಜ್-ಕಮ್-ಬ್ರೇಕ್ ವ್ಯಾನ್ ಕೋಚ್​ಗಳನ್ನು ಒಳಗೊಂಡಿರುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES