ಇದೀಗ ವರುಣ್ ಆಳ್ವ ಅವರಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿ ಗೌರವಿಸಲಾಗಿದೆ. ಗುರುವಾರ ಮಂಗಳೂರು ನಗರ ಪೊಲೀಸ್ ಕಮಿಷನರ್ ವರುಣ್ ಆಳ್ವ ಅವರಿಗೆ 10 ಸಾವಿರ ಬಹುಮಾನ ನೀಡಿ ಗೌರವಿಸಿದರು.
2/ 5
ಬುಧವಾರ ಈ ಘಟನೆ ನಡೆದಿದ್ದು, ವರುಣ್ ಆಳ್ವ ಅವರ ಮಿಂಚಿನ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು, ಜನದಟ್ಟಣೆ ಪ್ರದೇಶದಲ್ಲಿ ಕಳ್ಳನ ಹಡೆಮುರಿ ಕಟ್ಟಿದ ದೃಶ್ಯಗಳನ್ನು ಸಾರ್ವಜನಿಕರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
3/ 5
ರಾಜಸ್ಥಾನದ ಗ್ರಾನೈಟ್ ಕಾರ್ಮಿಕ ಪ್ರೇಮ್ ನಾರಾಯಣ್ ಯೋಗಿ ನೆಹರು ಮೈದಾನದ ಬಳಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಹರೀಶ್ ಪೂಜಾರಿ (32) ಎಂಬಾತ ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದನು.
4/ 5
ಯೋಗಿ ಸಹಾಯಕ್ಕಾಗಿ ಕೂಗಿಕೊಂಡಿದ್ದು, ಸಾರ್ವಜನಿಕರು ಹರೀಶ್ ಪೂಜಾರಿಯನ್ನು ಹಿಂಬಾಲಿಸಲು ಪ್ರಾರಂಭಿಸಿದ್ದರು. ಇದೇ ಸಮಯದಲ್ಲಿ ಆಳ್ವ ಸೇರಿದಂತೆ ಪೊಲೀಸ್ ತಂಡ ಸ್ಥಳದಲ್ಲಿತ್ತು.
5/ 5
ಕೂಡಲೇ ಪೊಲೀಸರು ಮೂರ್ನಾಲ್ಕು ಕಡೆ ವಿಂಗಡನೆಯಾಗಿ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಇದೇ ತಂಡದ 20 ವರ್ಷದ ಶಮಂತ್ ಎಂಬಾತನ್ನು ಸಹ ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ರಾಜೇಶ್ ಪರಾರಿಯಾಗಿದ್ದಾನೆ. ಈ ತಂಡ ನಗರದ ಕಳ್ಳತನ, ದರೋಡೆ ಪ್ರಕರಣಗಳಲ್ಲಿ ಆ್ಯಕ್ಟಿವ್ ಆಗಿತ್ತು.