Konaje Kallu: ಮಂಗಳೂರಿನ ದಿ ಬೆಸ್ಟ್ ಟ್ರೆಕ್ಕಿಂಗ್ ಪ್ಲೇಸ್ ಕೊಣಾಜೆ ಕಲ್ಲು! ಫೋಟೋಸ್ ನೋಡಿ

ಮಂಗಳೂರಿನ ಪ್ರಮುಖ ಚಾರಣ ಸ್ಥಳಗಳಲ್ಲಿ ಮೂಡಬಿದಿರೆಯ ಕೊಣಾಜೆ ಕಲ್ಲು ಒಂದಾಗಿದೆ. ಇಲ್ಲಿನ ವಿಶೇಷತೆ ಮತ್ತು ಸುಂದರವಾದ ದೃಶ್ಯಗಳು ಇಲ್ಲಿದೆ ನೋಡಿ.

First published:

  • 18

    Konaje Kallu: ಮಂಗಳೂರಿನ ದಿ ಬೆಸ್ಟ್ ಟ್ರೆಕ್ಕಿಂಗ್ ಪ್ಲೇಸ್ ಕೊಣಾಜೆ ಕಲ್ಲು! ಫೋಟೋಸ್ ನೋಡಿ

    ಮಂಗಳೂರು ಒಂದೆಡೆ ಪಶ್ಚಿಮ ಘಟ್ಟಗಳು ಮತ್ತೊಂದೆಡೆ ಕಡಲಿನಿಂದ ಸುತ್ತುವರೆದಿದ್ದು ಚಾರಣಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ಪ್ರಮುಖ ಚಾರಣ ಸ್ಥಳಗಳಲ್ಲಿ ಒಂದು ಜೈನಕಾಶಿ ಮೂಡಬಿದರೆಯ ಕೊಣಾಜೆ ಕಲ್ಲು.

    MORE
    GALLERIES

  • 28

    Konaje Kallu: ಮಂಗಳೂರಿನ ದಿ ಬೆಸ್ಟ್ ಟ್ರೆಕ್ಕಿಂಗ್ ಪ್ಲೇಸ್ ಕೊಣಾಜೆ ಕಲ್ಲು! ಫೋಟೋಸ್ ನೋಡಿ

    ಇದು ಮಂಗಳೂರಿನಿಂದ 36 ಕಿ ಮಿ ದೂರದಲ್ಲಿರುವ ಮೂಡಬಿದರೆಯಿಂದ ಸುಮಾರು 5ರಿಂದ 6 ಕಿ.ಮೀ. ದೂರದಲ್ಲಿ ಬರುವ ನಾರಾವಿ ರಸ್ತೆಯಲ್ಲಿ ಬರುತ್ತದೆ. ಈ ದೈತ್ಯಾಕಾರದ ಬೆಟ್ಟವು 119.28 ಹೆಕ್ಟೇರ್ ಮೀಸಲು ಅರಣ್ಯದಿಂದ ಸುತ್ತುವರೆದಿದೆ. ಕೊಣಾಜೆ ಕಲ್ಲು ಸಮುದ್ರ ಮಟ್ಟದಿಂದ 344 ಮೀಟರ್ ಎತ್ತರದಲ್ಲಿದೆ.

    MORE
    GALLERIES

  • 38

    Konaje Kallu: ಮಂಗಳೂರಿನ ದಿ ಬೆಸ್ಟ್ ಟ್ರೆಕ್ಕಿಂಗ್ ಪ್ಲೇಸ್ ಕೊಣಾಜೆ ಕಲ್ಲು! ಫೋಟೋಸ್ ನೋಡಿ

    ಇಲ್ಲಿ ಬೆಟ್ಟದ ಉತ್ತರ ತುದಿಯಲ್ಲಿ ದೈತ್ಯಾಕಾರದ ಚೂಪಾದ ಕಲ್ಲಿನಿಂದ ಆವೃತವಾದ ಎರಡು ಬಂಡೆಗಳು ಕಾಣಿಸಿಕೊಳ್ಳುತ್ತದೆ. ಈ ಆಕರ್ಷಿಣೀಯವಾದ ಬಂಡೆಗಳನ್ನು ಕೊಣಾಜೆ ಕಲ್ಲು ಎಂದು ಕರೆಯುತ್ತಾರೆ.

    MORE
    GALLERIES

  • 48

    Konaje Kallu: ಮಂಗಳೂರಿನ ದಿ ಬೆಸ್ಟ್ ಟ್ರೆಕ್ಕಿಂಗ್ ಪ್ಲೇಸ್ ಕೊಣಾಜೆ ಕಲ್ಲು! ಫೋಟೋಸ್ ನೋಡಿ

    ಇದು ಚಾರಣಿಗರಿಗೆ ಒಂದು ರೀತಿಯಾದ ಸ್ವರ್ಗದ ಅನುಭವವನ್ನು ನೀಡುತ್ತದೆ. ಮಾತ್ರವಲ್ಲದೆ ಒಂದು ರೀತಿಯಾಗಿ ಆರಾಧನೆಯ ಸ್ಥಳವು ಆಗಿದೆ. ಇಲ್ಲಿ ಆರಾಧ್ಯ ಶಕ್ತಿಗಳಾದ ಕಾಲಭೈರವ ಮತ್ತು ಮಹಾಮಾಯಿಯ ಗುಡಿ ಇದೆ.

    MORE
    GALLERIES

  • 58

    Konaje Kallu: ಮಂಗಳೂರಿನ ದಿ ಬೆಸ್ಟ್ ಟ್ರೆಕ್ಕಿಂಗ್ ಪ್ಲೇಸ್ ಕೊಣಾಜೆ ಕಲ್ಲು! ಫೋಟೋಸ್ ನೋಡಿ

    ಕೊಣಾಜೆ ಕಲ್ಲಿನ ಸುತ್ತಮುತ್ತಲಿನ ಪ್ರದೇಶವು ಪಶ್ಚಿಮ ಘಟ್ಟದ ಮಿನಿ ಜಲಾಶಯವಾಗಿದೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ಇಲ್ಲಿನ ಪ್ರದೇಶವು ದಟ್ಟ ಮಂಜಿನಿಂದ ಆವೃತವಾಗಿರುತ್ತದೆ. ಈ ಪ್ರದೇಶವನ್ನು ರಾಷ್ಟ್ರೀಯ ಹಾಟ್ ಸ್ಪಾಟ್ (National Ecological Hotspot) ಎಂದು ಕರೆಯಬೇಕೆಂಬುದು ಇಲ್ಲಿಗೆ ಧಾವಿಸುವ ಪ್ರಕೃತಿ ಪ್ರೇಮಿಗಳ ಆಶಯವಾಗಿದೆ.

    MORE
    GALLERIES

  • 68

    Konaje Kallu: ಮಂಗಳೂರಿನ ದಿ ಬೆಸ್ಟ್ ಟ್ರೆಕ್ಕಿಂಗ್ ಪ್ಲೇಸ್ ಕೊಣಾಜೆ ಕಲ್ಲು! ಫೋಟೋಸ್ ನೋಡಿ

    ಅರಬ್ಬೀ ಸಮುದ್ರದಿಂದ ಬಂದ ನಾವಿಕರಿಗೆ ದೈತ್ಯಾಕಾರದ ಈ ಬಂಡೆಗಳು ಕತ್ತೆಯ ಕಿವಿಗಳಂತೆ ಕಾಣುತ್ತಿತ್ತು ಎಂದು ಹೇಳಲಾಗುತ್ತದೆ ಮತ್ತು ಈ ಕಾರಣದಿಂದಾಗಿ ಕೊಣಾಜೆ ಕಲ್ಲಿಗೆ ಕತ್ತೆ ಕಿವಿ ಎಂದೂ ಕರೆಯುತ್ತಿದ್ದರು ಎಂದು ಸ್ಥಳಿಯರು ಹೇಳುತ್ತಾರೆ.

    MORE
    GALLERIES

  • 78

    Konaje Kallu: ಮಂಗಳೂರಿನ ದಿ ಬೆಸ್ಟ್ ಟ್ರೆಕ್ಕಿಂಗ್ ಪ್ಲೇಸ್ ಕೊಣಾಜೆ ಕಲ್ಲು! ಫೋಟೋಸ್ ನೋಡಿ

    ಈ ಸ್ಥಳದ ಸುತ್ತಲಿನ ಪ್ರದೇಶವು ವಿವಿಧ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ನೆಲೆಯಾಗಿದೆ. ಮತ್ತು ಈ ಬೆಟ್ಟದ ನಿಂತಾಗ ಸುತ್ತಲಿನ ಪರಿಸರ ಕೃಷಿ ಭೂಮಿಯ ಪ್ರಮುಖವಾಗಿ ಅಡಿಕೆ ಬೆಳೆಯ ವಿಹಂಗ ನೋಟವನ್ನು ಆನಂದಿಸಬಹುದು.

    MORE
    GALLERIES

  • 88

    Konaje Kallu: ಮಂಗಳೂರಿನ ದಿ ಬೆಸ್ಟ್ ಟ್ರೆಕ್ಕಿಂಗ್ ಪ್ಲೇಸ್ ಕೊಣಾಜೆ ಕಲ್ಲು! ಫೋಟೋಸ್ ನೋಡಿ

    ಸಂಜೆ ಬಿಸಿಲಿನ ತಾಪ ಕಮ್ಮಿಯಾಗಿರುವ ವೇಳೆ ಬೆಟ್ಟ ಹತ್ತಲು ಸೂಕ್ತ ಸಮಯ. ಸೂರ್ಯಾಸ್ತದ ಸಂಭ್ರಮ ಸವಿಯಲು ಕೊಣಾಜೆಕಲ್ಲು ಒಳ್ಳೆಯ ಜಾಗವಾಗಿದೆ. ಇಲ್ಲಿ ಟ್ರೆಕ್ಕಿಂಗ್ ಕೈಗೊಳ್ಳುವುದಾದರೆ ಮೂಡಬಿದ್ರೆಯಲ್ಲಿ ಸಾಕಷ್ಟು ಸಂಖ್ಯೆಯ ಲಾಡ್ಜ್‌ಗಳು, ಹೋಟೆಲ್, ರೆಸ್ಟೋರೆಂಟ್‌ಗಳು ನಿಮ್ಮ ಬಜೆಟ್‌ಗೆ ತಕ್ಕ ಹಾಗೆ ಲಭ್ಯವಾಗುತ್ತವೆ.

    MORE
    GALLERIES