WhatsApp Group Warns: ಹಿಜಾಬ್, ಬುರ್ಕಾ ತೆಗೆದರೆ ಥಳಿಸಲಾಗುವುದು: ಮಂಗಳೂರಿನ ವಾಟ್ಸಾಪ್ ಗ್ರೂಪ್ನಲ್ಲಿ ಬೆದರಿಕೆ
ರಾಜ್ಯದಲ್ಲಿ ತಲೆ ಎತ್ತಿದ ಹಿಜಾಬ್ ವಿವಾದ ವಿಶ್ವ ಮಟ್ಟದಲ್ಲಿ ಸುದ್ದಿಯಾಗಿದ್ದು, ನಮಗೆಲ್ಲಾ ತಿಳಿದೇ ಇದೆ. ಈಗ ಮಂಗಳೂರಿನಲ್ಲಿ ಹೊಸ ವಿವಾದವೊಂದು ಸದ್ದು ಮಾಡುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ, ಹಿಜಾಬ್ ತೆಗೆಯುವ ಮುಸ್ಲಿಂ ಯುವತಿಯರನ್ನು ಟಾರ್ಗೆಟ್ ಮಾಡಲಾಗ್ತಿದೆ.
ಮುಸ್ಲಿಂ ಡಿಫೆನ್ಸ್ ಫೋರ್ಸ್ ಹೆಸರಿನ ವಾಟ್ಸಾಪ್ ಗ್ರೂಪ್ ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಮತ್ತು ಹಿಜಾಬ್ ತೆಗೆದಿರುವ ಮುಸ್ಲಿಂ ಹುಡುಗಿಯರ ವಿರುದ್ಧ ಕ್ರಮ ಜರುಗಿಸುವುದಾಗಿ ಬೆದರಿಕೆ ಹಾಕಲಾಗಿದೆ.
2/ 6
ಕನ್ನಡದಲ್ಲಿ ಮೆಸೇಜ್ ಮಾಡಲಾಗಿದೆ. ಮಾಲ್ ನೆಲಮಾಳಿಗೆಯಲ್ಲಿ ಅನೇಕರು ಬುರ್ಖಾ ಧರಿಸಿ ಅನುಚಿತವಾಗಿ ವರ್ತಿಸುವುದನ್ನು ನೋಡಿದ್ದೇವೆ. ನಮ್ಮ ಕಾರ್ಯಕರ್ತರು ಈಗಾಗಲೇ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನು ಮತ್ತೆ ನೋಡಿದರೆ, ನಿಮ್ಮ ಮೇಲೆ ಹಲ್ಲೆ ಮಾಡಬೇಕಾಗುತ್ತೆ ಎಂದು ಬೆದರಿಸಲಾಗಿದೆ. (ಸಾಂದರ್ಭಿಕ ಚಿತ್ರ)
3/ 6
ಮುಸ್ಲಿಂ ಹೆಣ್ಣು ಮಕ್ಕಳು ಕಾಲೇಜು ಮತ್ತು ಇತರ ಸಾರ್ವಜನಿಕ ಸ್ಥಳಗಳಿಗೆ ಹೋದಾಗಲೆಲ್ಲಾ ಪೋಷಕರು ನಿಗಾ ಇಡುವಂತೆ ವಾಟ್ಸಾಪ್ ಗ್ರೂಪ್ ನಲ್ಲಿ ತಾಕೀತು ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)
4/ 6
ಎಂಡಿಎಫ್ ಕಾರ್ಯಕರ್ತರು ಮಂಗಳೂರಿನಲ್ಲಿ ಮುಸ್ಲಿಂ ಹುಡುಗಿಯರು ಯಾವುದೇ ‘ದುಷ್ಕೃತ್ಯದ ಬಗ್ಗೆ ನಿಗಾ ವಹಿಸುತ್ತಿದ್ದಾರೆ ಎಂದು ಸಂದೇಶಗಳು ಬಹಿರಂಗಪಡಿಸಿವೆ. ಬುರ್ಖಾ ಧರಿಸದಿದ್ದರೆ ಅವರನ್ನು ಥಳಿಸಲಾಗುವುದು ಎಂದು ಎಚ್ಚರಿಸಲಾಗಿದೆ. (ಸಾಂದರ್ಭಿಕ ಚಿತ್ರ)
5/ 6
ಘಟನೆಯ ಕುರಿತು ಪ್ರತಿಕ್ರಿಯಿಸಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಮುಸ್ಲಿಂ ರಕ್ಷಣಾ ಪಡೆಗೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬೆದರಿಕೆ ಸಂದೇಶಗಳ ಮೇಲೆ ನಿಗಾ ವಹಿಸಲಾಗಿದೆ.
6/ 6
ಸೆಲ್ಫಿ ಮತ್ತು ಫೋಟೋಗಳಿಗಾಗಿ ತಮ್ಮ ಮಕ್ಕಳು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಬುರ್ಖಾಗಳನ್ನು ತೆಗೆಯದಂತೆ ನೋಡಿಕೊಳ್ಳುವಂತೆ ಪೊಲೀಸರು ಪೋಷಕರಿಗೆ ಸಲಹೆ ನೀಡಿದ್ದಾರೆ, ಏಕೆಂದರೆ ಅವರ ಮೇಲೆ ಮುಸ್ಲಿಂ ಗುಂಪಿನ ಸದಸ್ಯರು ದಾಳಿ ಮಾಡಬಹುದು ಎಂದಿದ್ದಾರೆ. (ಸಾಂದರ್ಭಿಕ ಚಿತ್ರ)