Vijayapura Mangaluru Trains: ವಿಜಯಪುರ-ಮಂಗಳೂರು ರೈಲು ಸೆಪ್ಟೆಂಬರ್ 30 ರವರೆಗೆ ವಿಸ್ತರಣೆ!
ವಿಜಯಪುರ-ಮಂಗಳೂರು-ವಿಜಯಪುರ ರೈಲ್ವೇ ಓಡಾಟವನ್ನು ಸೆಪ್ಟಂಬರ್ ಅಂತ್ಯದವರೆಗೂ ವಿಸ್ತರಿಸಲು ನೈಋತ್ಯ ರೈಲ್ವೇ ವಲಯವು ನಿರ್ಧರಿಸಿದೆ. ಹೀಗಾಗಿ ಗುಮ್ಮಟ ನಗರಿಯಿಂದ ಕರಾವಳಿಗೆ ಸಂಪರ್ಕ ಇನ್ನೂ ಎರಡೂವರೆ ತಿಂಗಳ ಕಾಲ ಮುಂದುವರೆಯಲಿದೆ.
ಕೋವಿಡ್ ಕಾರಣದಿಂದ ಸ್ಥಗಿತವಾಗಿದ್ದ ವಿಜಯಪುರ-ಮಂಗಳೂರು ರೈಲು ಆರಂಭವಾಗಿದ್ದು, ಇದೀಗ ಅದನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಸಾರ್ವಜನಿಕರ ಬೇಡಿಕೆಗೆ ಮೇರೆಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ನೈಋತ್ಯ ರೈಲ್ವೇ ವಲಯವು ತಿಳಿಸಿದೆ.
2/ 10
ಹೀಗಾಗಿ ದಾವಣಗೆರೆ ವಯಾ ಸಂಚರಿಸುತ್ತಿದ್ದ ವಿಜಯಪುರ-ಮಂಗಳೂರು-ವಿಜಯಪುರ ವೇಗದೂತ ರೈಲು ಸೆಪ್ಟೆಂಬರ್ ಅಂತ್ಯದವರೆಗೂ ದಿನಂಪ್ರತಿ ಸಂಚರಿಸಲಿದೆ. ಈ ಕುರಿತು ರೈಲ್ವೇ ಬೋರ್ಡ್ ಗೆ ವರದಿಯನ್ನು ಸಲ್ಲಿಸಿದ್ದಾಗಿಯೂ ನೈಋತ್ಯ ರೈಲ್ವೆ ವಿಭಾಗದ ಅಧಿಕಾರಿ ಅನೀಶ್ ಹೆಗ್ಡೆ ತಿಳಿಸಿದ್ದಾರೆ.
3/ 10
ವಿಜಯಪುರದಿಂದ ಮಂಗಳೂರು ನಡುವೆ ಓಡಾಡುವ ಈ ರೈಲಿನಿಂದಾಗಿ ಹಲವು ಲಾಭಗಳಿದ್ದವು. ಉತ್ತರ ಕರ್ನಾಟಕ ಭಾಗದ ಮಂದಿ ಸುಲಭವಾಗಿ ಕರಾವಳಿ ಭಾಗದ ಜೊತೆಗೆ ಸಂಪರ್ಕ ಪಡೆಯಬಹುದಾಗಿದೆ.
4/ 10
ಹೀಗಾಗಿ ಮಂಗಳೂರಿನ ಆಸ್ಪತ್ರೆ, ಕಾಲೇಜುಗಳಿಗೆ ತೆರಳುವವರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಅದಲ್ಲದೇ ಕರಾವಳಿಗೆ ಪ್ರವಾಸ, ಧಾರ್ಮಿಕ ಕ್ಷೇತ್ರಗಳಿಗೆ ಆಗಮಿಸುವವರಿಗೂ ಈ ರೈಲ್ವೆ ಬಹಳಷ್ಟು ಅನುಕೂಲ.
5/ 10
ಜೊತೆಗೆ, ಕರಾವಳಿಯಿಂದ ಗುಮ್ಮಟ ನಗರಿಗೆ ಪ್ರವಾಸಕ್ಕೆ ತೆರಳುವವರಿಗೂ ಈ ರೈಲು ಹೆಚ್ಚು ಸಹಕಾರಿಯಾಗಿದೆ.
6/ 10
ವಿಜಯಪುರ-ಮಂಗಳೂರು-ವಿಜಯಪುರ ಎಕ್ಸ್ ಪ್ರೆಸ್ ರೈಲು ದಾವಣಗೆರೆ ಮಾರ್ಗವಾಗಿ ಮಂಗಳೂರು ತಲುಪುತ್ತದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಂಗಳೂರಿಗೆ ಆಗಮಿಸುವ ದಾವಣಗೆರೆಯ ಮಂದಿಗೂ ರೈಲ್ವೇ ಇಲಾಖೆಯ ಈ ನಿರ್ಧಾರ ಖುಷಿ ಕೊಟ್ಟಿದೆ.
7/ 10
ಮಾತ್ರವಲ್ಲದೇ ಬಾಗೇವಾಡಿ, ಆಲಮಟ್ಟಿ, ಬಾದಾಮಿ, ಹಾವೇರಿ, ಹರಿಹರ, ದಾವಣಗೆರೆ, ಅರಸೀಕೆರೆ, ಕಡೂರು, ಸಕಲೇಶಪುರ, ಪುತ್ತೂರು ಮಾರ್ಗವಾಗಿ ಮಂಗಳೂರು ತಲುಪುತ್ತದೆ.
8/ 10
ಈ ರೈಲು ವಿಜಯಪುರದಿಂದ ಸಾಯಂಕಾಲ 6.35 ಕ್ಕೆ ಹೊರಟರೆ, ಮಧ್ಯರಾತ್ರಿ 2 ಗಂಟೆಗೆ ದಾವಣಗೆರೆ ತಲುಪುತ್ತದೆ. ಮಧ್ಯಾಹ್ನ 12.40ಕ್ಕೆ ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣವನ್ನು ತಲುಪುತ್ತದೆ.
9/ 10
ಅದೇ ರೀತಿ ಮಂಗಳೂರಿನಿಂದ ಹೊರಡುವ ರೈಲು ವಾರದ ಪ್ರತಿದಿನವೂ ಮಧ್ಯಾಹ್ನ 2.45ಕ್ಕೆ ಹೊರಟು ಮರುದಿನ ಬೆಳಿಗ್ಗೆ 9.35ಕ್ಕೆ ವಿಜಯಪುರ ತಲುಪುತ್ತದೆ.
10/ 10
ಟಿಕೆಟ್ ದರವು ಕನಿಷ್ಟ ₹287 ರಿಂದ ಆರಂಭವಾಗಿ ವಿವಿಧ ಕ್ಲಾಸ್ ಗಳಿಗೆ ಸಂಬಂಧಿಸಿ ಬದಲಾವಣೆಗೊಳ್ಳುತ್ತದೆ. ಸಾರ್ವಜನಿಕರು ರೈಲ್ವೇ ಸಂಬಂಧಿತ ಹೆಚ್ಚಿನ ಮಾಹಿತಿ ಹಾಗೂ ಹಲವು ಸೌಲಭ್ಯಗಳಿಗಾಗಿ ಸಹಾಯವಾಣಿ ಸಂಖ್ಯೆ 139 ಸಂಪರ್ಕಿಸಬಹುದಾಗಿದೆ. ಇಲ್ಲದೇ ‘ರೈಲ್ವೇ ಮದದ್‘ ಆ್ಯಪ್ ಮೂಲಕವೂ ಮಾಹಿತಿ ಪಡೆಯಬಹುದಾಗಿದೆ.
First published:
110