Mangaluru: ಯುವಕ-ಯುವತಿಯನ್ನು ಹಿಂಬಾಲಿಸಿ ನೈತಿಕ ಪೊಲೀಸ್ ಗಿರಿ; ಆರು ಜನರ ಬಂಧನ

ಮಂಗಳೂರು (Mangaluru): ಯುವಕ-ಯುವತಿಯನ್ನು ಹಿಂಬಾಲಿಸಿ ನೈತಿಕ ಪೊಲೀಸ್ ಗಿರಿ (Moral Policing) ಮಾಡಿದ್ದ ಆರು ಜನರನ್ನು ಪೊಲೀಸರು (Police) ಬಂಧಿಸಿದ್ದಾರೆ. ಯುವಕ ಮತ್ತು ಯುವತಿ ಕೇರಳ ಮೂಲದವರಾಗಿದ್ದು, ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.

First published:

  • 15

    Mangaluru: ಯುವಕ-ಯುವತಿಯನ್ನು ಹಿಂಬಾಲಿಸಿ ನೈತಿಕ ಪೊಲೀಸ್ ಗಿರಿ; ಆರು ಜನರ ಬಂಧನ

    ಮಂಗಳೂರು ಹೊರವಲಯದ ಸುರತ್ಕಲ್ ಬಳಿ ನೈತಿಕ ಪೊಲೀಸ್ ಗಿರಿ ಘಟನೆ ನಡೆದಿದೆ. ಪ್ರಕರಣದ ಬೆನ್ನಲ್ಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಷಯ ತಿಳಿಯುತ್ತಲೇ ಮಧ್ಯರಾತ್ರಿಯೇ ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಎನ್‌.ಶಶಿಕುಮಾರ್ ಭೇಟಿ ನೀಡಿದ್ದರು.

    MORE
    GALLERIES

  • 25

    Mangaluru: ಯುವಕ-ಯುವತಿಯನ್ನು ಹಿಂಬಾಲಿಸಿ ನೈತಿಕ ಪೊಲೀಸ್ ಗಿರಿ; ಆರು ಜನರ ಬಂಧನ

    ಪ್ರಹ್ಲಾದ್, ಪ್ರಶಾಂತ್, ಗುರು ಪ್ರಸಾದ್, ಪ್ರತೀಶ್, ಭರತ್, ಸುಖೇಶ್ ಬಂಧಿತ ಆರೋಪಿಗಳು. ಕ್ರಿಶ್ವಿಯನ್ ಯುವತಿ, ಯಾಸೀನ್ ಎಂಬಾತನ ಬೈಕ್ ನಲ್ಲಿ ಡ್ರಾಪ್ ತೆಗೆದುಕೊಂಡಿದ್ದರು. ಇಬ್ಬರನ್ನು ಕಂಡ ಆರು ಜನ ಹಿಂಬಾಲಿಸಿ, ಸುರತ್ಕಲ್ ನ ಕಲ್ಯಾಣಿ ಸಿಟಿ ಪರ್ಲ್ ಅಪಾರ್ಟ್ಮೆಂಟ್ ಬಳಿ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ.

    MORE
    GALLERIES

  • 35

    Mangaluru: ಯುವಕ-ಯುವತಿಯನ್ನು ಹಿಂಬಾಲಿಸಿ ನೈತಿಕ ಪೊಲೀಸ್ ಗಿರಿ; ಆರು ಜನರ ಬಂಧನ

    ಇದೇ ವೇಳೆ ಅನ್ಯಧರ್ಮದ ಯುವಕನ ಜೊತೆ ಸುತ್ತಾಡುತ್ತೀಯಾ ಎಂದು ಬೆದರಿಕೆ ಸಹ ಹಾಕಿದ್ದಾರೆ. ಯುವತಿ ತಾನು ವಾಸವಿದ್ದ ಅಪಾರ್ಟ್ ಮೆಂಟ್ ಖಾಲಿ ಮಾಡಿ ಮತ್ತೊಂದು ಫ್ಲ್ಯಾಟ್ ಗೆ ಶಿಫ್ಟ್ ಆಗಿದ್ದಳು. ಶಿಫ್ಟ್ ಗೆ ಹಿನ್ನೆಲೆ ಯಾಸೀನ್ ಆಕೆಗೆ ಸಹಾಯ ಮಾಡಿದ್ದನು.

    MORE
    GALLERIES

  • 45

    Mangaluru: ಯುವಕ-ಯುವತಿಯನ್ನು ಹಿಂಬಾಲಿಸಿ ನೈತಿಕ ಪೊಲೀಸ್ ಗಿರಿ; ಆರು ಜನರ ಬಂಧನ

    ಶಿಫ್ಟಿಂಗ್ ಕೆಲಸ ಮುಗಿದ ಬಳಿಕ ಯುವತಿಯನ್ನು ಡ್ರಾಪ್ ಮಾಡಲು ತೆರಳಿದ್ದನು . ಈ ವೇಳೆ ಆರು ಜನರ ಗುಂಪು ನೈತಿಕ ಪೊಲೀಸಗಿರಿ ಹೆಸರಿನಲ್ಲಿ ದಾಳಿ ನಡೆಸಿದೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    MORE
    GALLERIES

  • 55

    Mangaluru: ಯುವಕ-ಯುವತಿಯನ್ನು ಹಿಂಬಾಲಿಸಿ ನೈತಿಕ ಪೊಲೀಸ್ ಗಿರಿ; ಆರು ಜನರ ಬಂಧನ

    ಸದ್ಯ ಬಂಧಿತ ಆರೋಪಿಗಳು ಪೊಲೀಸರ ವಶದಲ್ಲಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಕೆಲ ದಿನಗಳ ಹಿಂದೆ  ಮುಸ್ಲಿಂ ಯುವತಿ ಹಿಂದೂ ಯುವಕನ ಬೈಕ್ ನಲ್ಲಿ ಡ್ರಾಪ್ ಪಡೆದುಕೊಂಡಿದ್ದಕ್ಕೆ ಕೆಲ ಯುವಕರು ಪ್ರಶ್ನಿಸಿ ವಿಡಿಯೋ ಮಾಡಿದ್ದರು.

    MORE
    GALLERIES