B R Shetty: 3.15 ಬಿಲಿಯನ್ ಡಾಲರ್ ಆಸ್ತಿ, ಬುರ್ಜ್ ಖಲೀಫಾದಲ್ಲಿ ಎರಡಂತಸ್ತು...ಸಾಮಾನ್ಯ ಮನುಷ್ಯ ಅಷ್ಟೊಂದು ಶ್ರೀಮಂತ ಆಗಿದ್ದು ಹೇಗೆ?

B R Shetty Richness Story: ಬುರ್ಜ್ ಕಲೀಫಾದಲ್ಲಿ ಒಂದು ಅಡಿ ಜಾಗ ಕೊಳ್ಳೋದೇ ಸಾಮಾನ್ಯರಿಗೆ ಕನಸಾಗಿರುವಾಗ ಬಿ ಆರ್ ಶೆಟ್ಟಿ ಸಲೀಸಾಗಿ ಎರಡು ಅಂತಸ್ತುಗಳನ್ನೇ ಕೊಂಡುಬಿಟ್ಟರು. 100 ಮತ್ತು 140ನೇ ಅಂತಸ್ತು ಸಂಪೂರ್ಣವಾಗಿ ಈ ಶೆಟ್ಟರ ಹೆಸರಿನಲ್ಲಿದೆ. ಇದಕ್ಕಾಗಿ ಅವರು ನೀಡಿದ್ದು ಬರೋಬ್ಬರಿ 25 ಮಿಲಿಯನ್ ಡಾಲರ್ ಗಳು ಅಂದರೆ 184 ಕೋಟಿಗೂ ಅಧಿಕ ಹಣ!

First published:

  • 15

    B R Shetty: 3.15 ಬಿಲಿಯನ್ ಡಾಲರ್ ಆಸ್ತಿ, ಬುರ್ಜ್ ಖಲೀಫಾದಲ್ಲಿ ಎರಡಂತಸ್ತು...ಸಾಮಾನ್ಯ ಮನುಷ್ಯ ಅಷ್ಟೊಂದು ಶ್ರೀಮಂತ ಆಗಿದ್ದು ಹೇಗೆ?

    ಬಿ ಆರ್ ಶೆಟ್ಟಿ ಒಂದು ಸಲ ಇಡೀ ಜಗತ್ತು ಅಚ್ಚರಿಯಿಂದ ನೋಡಿದ ಸಿರಿವಂತ. ಜಗತ್ತಿನ ಟಾಪ್ ಬಿಲಿಯನೇರ್​ಗಳ ಪಟ್ಟಿಯಲ್ಲಿ ಹೆಸರು ಪಡೆದಿದ್ದ ಕನ್ನಡಿಗ. ಅಷ್ಟು ಸಿರಿವಂತ ನಂತರ ಎಲ್ಲವನ್ನೂ ಕಳೆದುಕೊಂಡಿದ್ದು ಕೂಡಾ ಅಷ್ಟೇ ಕುತೂಹಲಕರ ವಿಚಾರ. ಬವಗುತ್ತು ರಘುರಾಮ ಶೆಟ್ಟಿ ತನ್ನ ಸಿರಿಯ ಬದುಕನ್ನು ಕಳೆದುಕೊಂಡಿದ್ದು ಹೇಗೆ, ಅಷ್ಟು ಸುಲಭಕ್ಕೆ ಅಷ್ಟೆಲ್ಲಾ ಸಂಪತ್ತು ನಷ್ಟವಾಗಿದ್ದರ ಬಗ್ಗೆ ರೋಚಕ ವಿಚಾರಗಳು ಇಲ್ಲಿದೆ. (Image Credit: CNBC-TV18)

    MORE
    GALLERIES

  • 25

    B R Shetty: 3.15 ಬಿಲಿಯನ್ ಡಾಲರ್ ಆಸ್ತಿ, ಬುರ್ಜ್ ಖಲೀಫಾದಲ್ಲಿ ಎರಡಂತಸ್ತು...ಸಾಮಾನ್ಯ ಮನುಷ್ಯ ಅಷ್ಟೊಂದು ಶ್ರೀಮಂತ ಆಗಿದ್ದು ಹೇಗೆ?

    ಬಿ ಆರ್ ಶೆಟ್ಟಿಗೆ ಐಶಾರಾಮಿ ಕಾರುಗಳ ಬಗ್ಗೆ ವಿಪರೀತ ಒಲವು. ವಿಂಟೇಜ್ Morris Minor 1000 ಮತ್ತು ಅನೇಕ ಮಾಡೆಲ್ ಗಳ Rolls Royce ಕಾರುಗಳನ್ನೂ ಇವರು ಹೊಂದಿದ್ದರು. Silver Spirit ಮತ್ತು Phantom ಸೀರೀಸ್ ನ ಕಾರುಗಳು ಕೂಡಾ ಇವರ ಬಳಿ ಇತ್ತು. ಯುಎಇನಲ್ಲಿ Mercedes-Maybach M600 ಹೊಂದಿದ್ದ ಕೆಲವೇ ಕೆಲವರಲ್ಲಿ ಶೆಟ್ಟಿ ಕೂಡಾ ಒಬ್ಬರಾಗಿದ್ದರು. (Image Credit: Cartoq)

    MORE
    GALLERIES

  • 35

    B R Shetty: 3.15 ಬಿಲಿಯನ್ ಡಾಲರ್ ಆಸ್ತಿ, ಬುರ್ಜ್ ಖಲೀಫಾದಲ್ಲಿ ಎರಡಂತಸ್ತು...ಸಾಮಾನ್ಯ ಮನುಷ್ಯ ಅಷ್ಟೊಂದು ಶ್ರೀಮಂತ ಆಗಿದ್ದು ಹೇಗೆ?

    ತನ್ನ ಸಿರಿತನದ ಉತ್ತುಂಗದಲ್ಲಿ ಇದ್ದಾಗ ಬಿ ಆರ್ ಶೆಟ್ಟಿ ಗಲ್ಫ್ ಬಿಲಿಯನೇರ್ ಒಬ್ಬನ ಬಳಿ ಪ್ರೈವೇಜ್ ಜೆಟ್ ವಿಮಾನದ ಶೇಕಡಾ 50ರಷ್ಟು ಹಕ್ಕುಗಳನ್ನು ಕೊಂಡಿದ್ದರು. 2014ರಲ್ಲಿ ನಡೆದ ಈ ವಹಿವಾಟಿಗೆ 4.12 ಮಿಲಿಯನ್ ಡಾಲರ್ ಹಣ ಖರ್ಚಾಗಿತ್ತು. (Image Credit: Twitter)

    MORE
    GALLERIES

  • 45

    B R Shetty: 3.15 ಬಿಲಿಯನ್ ಡಾಲರ್ ಆಸ್ತಿ, ಬುರ್ಜ್ ಖಲೀಫಾದಲ್ಲಿ ಎರಡಂತಸ್ತು...ಸಾಮಾನ್ಯ ಮನುಷ್ಯ ಅಷ್ಟೊಂದು ಶ್ರೀಮಂತ ಆಗಿದ್ದು ಹೇಗೆ?

    ಐಶಾರಾಮಿ ಪಾರ್ಟಿಗಳನ್ನು ಮಾಡೋದಕ್ಕಾಗಿಯೇ ಬಿ ಆರ್ ಶೆಟ್ಟಿ ಬುರ್ಜ್ ಕಲೀಫಾದಲ್ಲಿ ಎರಡು ಅಂತಸ್ತುಗಳನ್ನೇ ಖರೀದಿಸಿದ್ದರು. 100 ಮತ್ತು 140ನೇ ಇಡೀ ಫ್ಲೋರ್ ಖರೀದಿಗೆ 25 ಮಿಲಿಯನ್ ಡಾಲರ್ ಗಳು ಅಂದರೆ 184 ಕೋಟಿ ರೂಪಾಯಿಗೂ ಅಧಿಕ ಹಣ ಖರ್ಚು ಮಾಡಿದ್ದರು. ಅವರ ಶ್ರೀಮಂತಿಕೆ ಅಷ್ಟಿತ್ತು. (Image Credit: DNA India)

    MORE
    GALLERIES

  • 55

    B R Shetty: 3.15 ಬಿಲಿಯನ್ ಡಾಲರ್ ಆಸ್ತಿ, ಬುರ್ಜ್ ಖಲೀಫಾದಲ್ಲಿ ಎರಡಂತಸ್ತು...ಸಾಮಾನ್ಯ ಮನುಷ್ಯ ಅಷ್ಟೊಂದು ಶ್ರೀಮಂತ ಆಗಿದ್ದು ಹೇಗೆ?

    ನಂತರ ಸಂಶೋಧನಾ ಸಂಸ್ಥೆಯೊಂದು ಬಿ ಆರ್ ಶೆಟ್ಟಿ ಮತ್ತು ಆತನ ಒಡೆತನದ ಎನ್ಎಂಸಿ ಹೆಲ್ತ್ ಮೋಸ ಮಾಡುತ್ತಿವೆ ಮತ್ತು ನಷ್ಟದಲ್ಲಿದೆ ಎಂದು ಬಹಿರಂಗ ಪಡಿಸಿದ್ದೇ ಆತನ ಇಡೀ ಸಾಮ್ರಾಜ್ಯ ಕುಸಿಯಿತು. MuddyWatersResearch 2020ರಲ್ಲಿ ಮಾಡಿದ ಸಂಶೋಧನೆಯ ಪ್ರಕಾರ 2.7 ಮಿಲಿಯನ್ ಡಾಲರ್ ಗಳಷ್ಟು ಹಣಕ್ಕೆ ಮೂಲವೇ ಇಲ್ಲ ಎಂದು ತಿಳಿಸಿತ್ತು. ಇದರ ನಂತರ ಬಿ ಆರ್ ಶೆಟ್ಟಿ ತನ್ನ ಕಂಪೆನಿ, ಹಣ ಎರಡನ್ನೂ ಕಳೆದುಕೊಂಡು ಯುಎಇಯಿಂದ ಉಚ್ಛಾಟನೆಗೊಂಡರು. ಅಷ್ಟೇ ಅಲ್ಲ, ಮತ್ತೆ ಎಂದೂ ಆ ದೇಶಕ್ಕೆ ಮರಳದಂತೆ ಅಲ್ಲಿನ ಆಡಳಿತ ಶೆಟ್ಟಿ ವಿರುದ್ಧ ಆಜ್ಞೆ ಹೊರಡಿಸಿದೆ. (Image Credit: Facebook)

    MORE
    GALLERIES