ಈ ಗ್ರಾಮದ ಸಣ್ಣೆಗೌಡ ಎಂಬವರು ಕಳೆದ ಎರಡು ವರ್ಷಗಳ ಹಿಂದೆ ಮಂಡ್ಯದ ಮದ್ದೂರು ತಾಲೂಕಿನ ವಳಗೆರಹಳ್ಳಿ ಗ್ರಾಮದ ಸೋಮಣ್ಣ ಎಂಬುವವರ ಹತ್ತಿರ ಒಂದು ಲಕ್ಷದ ಐದು ಸಾವಿರ ಕೊಟ್ಟು ಈ ವಿಶೇಷ ಬಂಡೂರು ತಳಿಯ ಟಗರನ್ನ ಖರೀದಿಸಿದ್ದರು. ಅಂದಿನಿಂದ ಇಂದಿನ ವರೆಗೂ ಸಣ್ಣಪ್ಪನವರು ವಿಶೇಷ ಕಾಳಜಿಯಿಂದ ಈ ಟಗರನ್ನ ಸಾಕಿದ್ದರು. ಈಗಾಗಿ ಎರಡು ವರ್ಷಗಳ ಬಳಿಕ ಈಗ ಈ ಟಗರು ದುಬಾರಿ ಬೆಲೆಗೆ ಮಾರಾಟವಾಗಿದೆ.