ನಿನ್ನೆ ನಡೆದ ಮಂಡ್ಯ ಜಿ.ಪಂ. ಸ್ಥಾಯಿ ಸಮಿತಿ ಚುನಾವಣೆಯ ದೃಶ್ಯಗಳು

ಇನ್ನು ಮಂಡ್ಯ ಜಿ. ಪಂ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ಥಾಯಿ ಸಮಿತಿ ಸದಸ್ಯ ಸ್ಥಾನ ಗಳಿಗೆ ಚುನಾವಣೆ ನಡೆದಿತ್ತು. ಇಲ್ಲಿವರೆಗೂ ಪ್ರತಿ ಸಲವೂ ನಡೆದ ಸ್ಥಾಯಿ ಸಮಿತಿ ಆಯ್ಕೆ ಅವಿರೋಧವಾಗಿಯೇ ನಡೆಯುತ್ತಿತ್ತು. ಆಡಳಿತ ರೂಢ ಪಕ್ಷದ ಅಧ್ಯಕ್ಷೆ ಮತ್ತು ಸದಸ್ಯರ ನಡುವಿನ ಪ್ರತಿಷ್ಠೆಯಿಂದಾಗಿ ಈ ಸಲ ಚುನಾವಣೆ ನಡೆಸಬೇಕಾಗಿ ಬಂದಿತ್ತು.

First published:

  • 17

    ನಿನ್ನೆ ನಡೆದ ಮಂಡ್ಯ ಜಿ.ಪಂ. ಸ್ಥಾಯಿ ಸಮಿತಿ ಚುನಾವಣೆಯ ದೃಶ್ಯಗಳು

    ಪ್ರತಿಷ್ಠೆಯ ಕಣವಾಗಿದ್ದ ಮಂಡ್ಯ ಜಿಲ್ಲಾ ಪಂಚಾಯತ್ ನ ವಿವಿಧ ಸ್ಥಾಯಿ ಸಮಿತಿಗಳ ಚುನಾವಣೆ ಸುಸೂತ್ರವಾಗಿ ಮುಕ್ತಾಯವಾಗಿದೆ.

    MORE
    GALLERIES

  • 27

    ನಿನ್ನೆ ನಡೆದ ಮಂಡ್ಯ ಜಿ.ಪಂ. ಸ್ಥಾಯಿ ಸಮಿತಿ ಚುನಾವಣೆಯ ದೃಶ್ಯಗಳು

    . ಅತೀ ಹೆಚ್ಚು ಸ್ಥಾನಗಳನ್ನ ಗೆಲ್ಲುವ ಮೂಲಕ ಜೆಡಿಎಸ್​ ಮಂಡ್ಯ ಜಿಪಂನಲ್ಲಿ ಮತ್ತೆ ಮೇಲುಗೈ ಸಾಧಿಸಿದ್ರೆ, ಆಪರೇಷನ್ ಕಮಲಕ್ಕೆ ಕೈ ಹಾಕಿದ್ದ ಬಿಜೆಪಿ ತೀವ್ರ ಮುಖಭಂಗ ಅನುಭವಿಸುವಂತಾಗಿದೆ.

    MORE
    GALLERIES

  • 37

    ನಿನ್ನೆ ನಡೆದ ಮಂಡ್ಯ ಜಿ.ಪಂ. ಸ್ಥಾಯಿ ಸಮಿತಿ ಚುನಾವಣೆಯ ದೃಶ್ಯಗಳು

    ಮಂಡ್ಯ ಜಿಲ್ಲಾ ಪಂಚಾಯತ್​ನ 5 ವಿವಿಧ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆದಿತ್ತು. ಒಟ್ಟು 33 ಸ್ಥಾನಗಳಿಗೆ ನಿನ್ನೆ ಚುನಾವಣೆ ನಿಗದಿಯಾಗಿತ್ತು. ಒಟ್ಟು 33 ಸ್ಥಾನಗಳಿಗೆ ಜೆಡಿಎಸ್ ನ 33 ಹಾಗೂ ಬಿಜೆಪಿ ಬೆಂಬಲಿತ ಕಾಂಗ್ರೆಸ್, ಪಕ್ಷೇತರ ಸದಸ್ಯರು ಸೇರಿ 33 ಮಂದಿ ನಾಮಪತ್ರ ಸಲ್ಲಿಸಿದ್ದರು.

    MORE
    GALLERIES

  • 47

    ನಿನ್ನೆ ನಡೆದ ಮಂಡ್ಯ ಜಿ.ಪಂ. ಸ್ಥಾಯಿ ಸಮಿತಿ ಚುನಾವಣೆಯ ದೃಶ್ಯಗಳು

    ಅಂತಿಮವಾಗಿ ನಡೆದ ಗೌಪ್ಯ ಮತದಾನದಲ್ಲಿ 32 ಮಂದಿ ಜೆಡಿಎಸ್ ಸದಸ್ಯರು ಭರ್ಜರಿ ಗೆಲುವು ಸಾಧಿಸಿದ್ರೆ, ಬಿಜೆಪಿ ಬೆಂಬಲಿತ ಸದಸ್ಯರೊಬ್ಬರು ಮಾತ್ರ ಗೆಲುವು ಸಾಧಿಸಲಷ್ಟೇ ಸಾಧ್ಯವಾಯಿತು.

    MORE
    GALLERIES

  • 57

    ನಿನ್ನೆ ನಡೆದ ಮಂಡ್ಯ ಜಿ.ಪಂ. ಸ್ಥಾಯಿ ಸಮಿತಿ ಚುನಾವಣೆಯ ದೃಶ್ಯಗಳು

    ಇನ್ನು ಮಂಡ್ಯ ಜಿ. ಪಂ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ಥಾಯಿ ಸಮಿತಿ ಸದಸ್ಯ ಸ್ಥಾನ ಗಳಿಗೆ ಚುನಾವಣೆ ನಡೆದಿತ್ತು. ಇಲ್ಲಿವರೆಗೂ ಪ್ರತಿ ಸಲವೂ ನಡೆದ ಸ್ಥಾಯಿ ಸಮಿತಿ ಆಯ್ಕೆ ಅವಿರೋಧವಾಗಿಯೇ ನಡೆಯುತ್ತಿತ್ತು. ಆಡಳಿತ ರೂಢ ಪಕ್ಷದ ಅಧ್ಯಕ್ಷೆ ಮತ್ತು ಸದಸ್ಯರ ನಡುವಿನ ಪ್ರತಿಷ್ಠೆಯಿಂದಾಗಿ ಈ ಸಲ ಚುನಾವಣೆ ನಡೆಸಬೇಕಾಗಿ ಬಂದಿತ್ತು.

    MORE
    GALLERIES

  • 67

    ನಿನ್ನೆ ನಡೆದ ಮಂಡ್ಯ ಜಿ.ಪಂ. ಸ್ಥಾಯಿ ಸಮಿತಿ ಚುನಾವಣೆಯ ದೃಶ್ಯಗಳು

    ಮತದಾನದ ಹಕ್ಕುಳ್ಳ ಜಿಲ್ಲೆಯ ಶಾಸಕರು, ಸಚಿವರು, ಸಂಸದರು ಹಾಗೂ ಪರಿಷತ್ ಸದಸ್ಯರು , ತಾ.ಪಂ. ಅಧ್ಯಕ್ಷರು ಕೂಡ ಇದೇ ಮೊದಲ ಬಾರಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತ ಚಲಾಯಿಸಿದರು.

    MORE
    GALLERIES

  • 77

    ನಿನ್ನೆ ನಡೆದ ಮಂಡ್ಯ ಜಿ.ಪಂ. ಸ್ಥಾಯಿ ಸಮಿತಿ ಚುನಾವಣೆಯ ದೃಶ್ಯಗಳು

    ಒಟ್ಟಾರೆ ಜಿಲ್ಲೆಯಲ್ಲಿ ಜೆಡಿಎಸ್ ಮಣಿಸಲು BJP ಸಚಿವ, ಸಂಸದೆ, ಜಿ.ಪಂ.ಅಧ್ಯಕ್ಷೆ, ಕಾಂಗ್ರೆಸ್ ಎಲ್ಲರೂ ಒಂದಾದರೂ ಜಿ.ಪಂ.ನಲ್ಲಿ ಹೀನಾಯ ಸೋಲು ಕಂಡಿದೆ. ಈ ಮೂಲಕ ಜಿ.ಪಂ.ನಲ್ಲಿ ಪ್ರಾಬಲ್ಯ ಸಾಧಿಸಲು ಹೊರಟ ಬಿಜೆಪಿಗೆ ತೀವ್ರ ಮುಖಭಂಗವಾಗಿದ್ದಂತೂ ಸುಳ್ಳಲ್ಲ.

    MORE
    GALLERIES