ಆಸ್ತಿಗಾಗಿ ಮಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಕುಟುಂಬಸ್ಥರು ಆತನ ಕೈ ಕಾಲುಗಳನ್ನು ಕಟ್ಟಿ ಹಾಕಿ ಮೃಗೀಯವಾಗಿ ನಡೆದುಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)
2/ 8
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಎರೆಗೌಡನಹಳ್ಳಿ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ರಕ್ತ ಹೊರ ಬರುವಂತೆ ಹಲ್ಲೆ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)
3/ 8
ನಾಗೇಶ್ ಕುಟುಂಬಸ್ಥರಿಂದ ಹಲ್ಲೆಗೊಳಗಾದ ವ್ಯಕ್ತಿ. ಎರೆಗೌಡನಹಳ್ಳಿ ಗ್ರಾಮದ ಮಹದೇವಗೌಡರ ಹಿರಿಯ ಪುತ್ರ. ಕೊನೆಯ ಮಗನಾಗಿರುವ ನಂಜುಂಡೇಗೌಡನ ಜೊತೆ ಸೇರಿ ತಂದೆ ಮಗನ ಮೇಲೆ ಹಲ್ಲೆ ನಡೆಸಿದ್ದಾನೆ. (ಸಾಂದರ್ಭಿಕ ಚಿತ್ರ)
4/ 8
ಗುದ್ದಲಿ, ಪಿಕಾಸುಗಳಿಂದ ಹಲ್ಲೆ ನಡೆಸಿ, ಕೈ ಕಾಲುಗಳನ್ನು ಕಟ್ಟಿ ಹಾಕಲಾಗಿತ್ತು. ಈ ವಿಷಯವನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)
5/ 8
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ನಾಗೇಶ್ ನನ್ನು ಮುಕ್ತಗೊಳಿಸಿ ತುರ್ತು ವಾಹನದ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. (ಸಾಂದರ್ಭಿಕ ಚಿತ್ರ)
6/ 8
ಸದ್ಯ ಹಲ್ಲೆಗೊಳಗಾದ ನಾಗೇಶ್ ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
7/ 8
ಘಟನೆ ಸಂಬಂಧ ನಾಗೇಶ್ ಮತ್ತು ಅವರ ಪತ್ನಿ ಭಾರತಿ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. (ಸಾಂದರ್ಭಿಕ ಚಿತ್ರ)
8/ 8
ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ತಂದೆಯೇ ಆಸ್ತಿಗಾಗಿ ಮಗನ ಮೇಲೆ ಹಲ್ಲೆ ನಡೆಸಿರೋದನ್ನು ಕಂಡು ಗ್ರಾಮಸ್ಥರು ದಿಗ್ಬ್ರಮೆಗೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)
First published:
18
Mandya: ಆಸ್ತಿಗಾಗಿ ಮಾನವೀಯತೆ ಮರೆತರು: ಮನೆಯ ಹಿರಿಯ ಮಗನಿಗೆ ಹೀಗೆ ಮಾಡೋದಾ?