Rain Alert: ಚಂಡಮಾರುತ ಎಫೆಕ್ಟ್; ರಾಜ್ಯದಲ್ಲಿ ಇಂದಿನಿಂದ ನಾಲ್ಕು ದಿನ ಮಳೆಯ ಅಲರ್ಟ್
Mandous Cyclone Effect: ಚಳಿಗಾಲ ಆರಂಭವಾಗಿ ಮಳೆ ಕಡಿಮೆ ಆಯ್ತು ಅನ್ನೋಷ್ಟರಲ್ಲಿಯೇ ವರುಣ ಮತ್ತೆ ರಾಜ್ಯಕ್ಕೆ ಎಂಟ್ರಿ ಕೊಡಲಿದ್ದಾನೆ. ಇಂದು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಭಾಗದಲ್ಲಿ ಮಳೆ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇಂದು ಮ್ಯಾಂಡಸ್ (Mandous) ಚಂಡಮಾರುತ ತಮಿಳುನಾಡು ಮತ್ತು ಪುದುಚೇರಿ ಕರಾವಳಿಗೆ ಅಪ್ಪಳಿಸಲಿದ್ದು, ನೆರೆಯ ಕರ್ನಾಟಕದ ದಕ್ಷಿಣ ಒಳನಾಡು ಭಾಗದಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ಮಳೆಯಾಗಲಿದೆ.
2/ 7
ಮ್ಯಾಂಡಸ್ ಚಂಡಮಾರುತ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ರೂಪಗೊಳ್ಳಲಿದೆ. ಈ ಹಿನ್ನೆಲೆ ತಮಿಳುನಾಡು ಮತ್ತು ಪುದುಚೇರಿ ಭಾಗದಲ್ಲಿ ಎನ್ಡಿಆರ್ಎಫ್ ತಂಡ ಅಲರ್ಟ್ ಆಗಿದೆ.
3/ 7
ಡಿಸೆಂಬರ್ 6ರಂದು ರಾತ್ರಿ 11.30ರ ವೇಳೆಗೆ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ರೂಪಗೊಂಡಿರುವ ಮ್ಯಾಂಡಸ್, ಕಾರೈಕಲ್ನಿಂದ ಸುಮಾರು 840 ಕಿಮೀ ಪೂರ್ವ ಆಗ್ನೇಯಕ್ಕೆ ಮತ್ತು ಚೆನ್ನೈನಿಂದ ಸುಮಾರು 900 ಕಿ ಮೀ ಅಗ್ನೇಯದಲ್ಲಿ ಡಿಪ್ರೆಶನ್ ಆರಂಭಗೊಂಡಿದೆ.
4/ 7
ಮುಂದಿನ ದಿನಗಳಲ್ಲಿ ಚಂಡಮಾರುತ ವೇಗ ಪಡೆದುಕೊಳ್ಳಲಿದ್ದು, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಪುದುಚೇರಿಯ ಕರಾವಳಿಗೆ ಅಪ್ಪಳಿಸಲಿದೆ. ಪರಿಣಾಮ ನಾಳೆಯಿಂದ ಡಿಸೆಂಬರ್ 12ರವರೆಗೂ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
5/ 7
ಇನ್ನು ಡಿಸೆಂಬರ್ 17ರಂದು ದಕ್ಷಿಣ ಒಳನಾಡಿನ ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೊಡಗುಮ ಚಿಕ್ಕಮಗಳೂರಿನಲ್ಲಿ ಅಧಿಕ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಈ ದಿನದಂದು ಯೆಲ್ಲೋ ಅಲರ್ಟ್ ಪ್ರಕಟಿಸಲಾಗಿದೆ
6/ 7
ಇನ್ನುಳಿದಂತೆ ನಾಳೆಯಿಂದ ಉತ್ತರ ಒಳನಾಡಿನ ಬಾಗಲಕೋಟೆ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿಯೂ ಮಳೆಯಾಗಲಿದೆ.
7/ 7
ಇದರ ಜೊತೆ ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿಯೂ ಚಂಡಮಾರುತದ ಎಫೆಕ್ಟ್ ಕಾಣಿಸಿಕೊಳ್ಳಲಿದೆ.