ಮಹಿಳೆಯನ್ನು ಕೊಂದು ಶವ ಹೊರಗೆ ಎಸೆದು ಮನೆಯಲ್ಲಿ ನಿದ್ದೆಗೆ ಜಾರಿದ ಭೂಪ
Chikkaballapur: ವ್ಯಕ್ತಿಯೋರ್ವ ಮಹಿಳೆ(Woman)ಯನ್ನು ಕೊಂದು, ನಂತರ ಶವವನ್ನು ಹೊರಗೆ ಹಾಕಿ ಮನೆಯಲ್ಲಿ ನಿದ್ದೆಗೆ (Sleep) ಜಾರಿದ್ದಾನೆ. ಈ ಘಟನೆ ಚಿಕ್ಕಬಳ್ಳಾಪುರ ನಗರದ ನಕ್ಕಲಕುಂಟೆ ಬಡವಾಣೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ನರಸಿಂಹಪ್ಪ ಮಹಿಳೆಯನ್ನು ಕೊಲೆಗೈದ ಆರೋಪಿ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಮೃತ ಮಹಿಳೆಯ ಹೆಸರು ಅಂಜಿನಮ್ಮ ಎಂದು ತಿಳಿದು ಬಂದಿದೆ. ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ.
2/ 5
ಅನೈತಿಕ ಸಂಬಂಧ ಹಿನ್ನೆಲೆ ಅಂಜಿಮ್ಮಳನ್ನು ನರಸಿಂಹಪ್ಪ ಮನೆಗೆ ಕರೆಸಿಕೊಂಡಿದ್ದನು ಎಂದು ಹೇಳಲಾಗುತ್ತಿದೆ. ಈ ವೇಳೆ ಮದ್ಯದ ನಶೆಯಲ್ಲಿದ್ದ ನರಸಿಂಹಪ್ಪ ಮಹಿಳೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.
3/ 5
ಅಂಜಿಮ್ಮಳನ್ನು ಕೊಂದ ಬಳಿಕ ಶವವನ್ನು ಮನೆಯಿಂದ ಹೊರ ಹಾಕಿ, ನಿದ್ದೆಗೆ ಜಾರಿದ್ದಾನೆ. ಮದ್ಯ ಸೇವನೆ ಮಾಡಿದ್ದರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಸಹ ಆರೋಪಿ ಮಾಡಿಲ್ಲ.
4/ 5
ಇನ್ನು ವಿಷಯ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಶವವನ್ನು ಆಸ್ಪತ್ರೆಗೆ ರವಾನಿಸಿ, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಫುರ ಎಸ್ ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
5/ 5
ಇಬ್ಬರು ಮದ್ಯದ ನಶೆಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಆದ್ರೆ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಪ್ರಕರಣದ ಬಗ್ಗೆ ಹಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
First published:
15