ನಿಖಿಲ್ ಎಂಬಾತನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈತ ಬೆಂಗಳೂರಿನ ಪಟ್ಟೇಗಾರಪಾಳ್ಯ ನಿವಾಸಿ ಎಂಬ ಮಾಹಿತಿ ತಿಳಿದು ಬಂದಿದೆ.
2/ 7
ವಿಜಯನಗರ ಪೊಲೀಸ್ ಠಾಣೆಯ ಸಂಚಾರ ಪೇದೆ ಎನ್.ಆರ್.ಹರೀಶ್ ಎಂಬವರು ಜುಲೈ 3ರಂದು ಮಾರೇನಹಳ್ಳಿಯ ಜಂಕ್ಷನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ನಿಖಿಲ್ ವಿಜಯನಗರ ಕ್ಲಬ್ ಕಡೆಯಿಂದ ವೇಗವಾಗಿ ಬಂದಿದ್ದಾನೆ.
3/ 7
ಈ ವೇಳೆ ಪೇದೆ ಹರೀಶ್ FTR ಮೊಬೈಲ್ ಆಪ್ ನಲ್ಲಿ ಗಾಡಿ ಸಂಖ್ಯೆ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಗಾಬರಿಗೊಂಡ ನಿಖಿಲ್ ಪೇದೆಯನ್ನು ತಳ್ಳಿ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. (ಸಾಂದರ್ಭಿಕ ಚಿತ್ರ)
4/ 7
ದ್ವಿಚಕ್ರ ವಾಹನದ ಫಲಕದ ಸಂಖ್ಯೆ ಕೆಎ 02 ಜೆ 938 ಎಂದು ಬರೆಯಲಾಗಿತ್ತು. ಅನುಮಾನಗೊಂಡ ಪೊಲೀಸರು ವಾಹನದ ಇಂಜಿನ್ ಮತ್ತು ಚಾಸಿ ಸಂಖ್ಯೆ ಪರಿಶೀಲಿಸಿದಾಗ ವಾಹನದ ಅಸಲಿ ನಂಬರ್ ಕೆಎ 02 ಜೆಜಿ 9181 ಎಂಬ ವಿಷಯ ಗೊತ್ತಾಗಿದೆ. (ಸಾಂದರ್ಭಿಕ ಚಿತ್ರ)
5/ 7
ಈ ವಾಹನ ಸವಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಹರೀಶ್ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. (ಸಾಂದರ್ಭಿಕ ಚಿತ್ರ)
6/ 7
ಈ ದ್ವಿಚಕ್ರ ವಾಹನ 55 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ದಂಡದ ಮೊತ್ತ 28,500 ರೂ. ಬಾಕಿ ಇದೆ. (ಸಾಂದರ್ಭಿಕ ಚಿತ್ರ)
7/ 7
ನಕಲಿ ನಂಬರ್ ಫಲಕ ಅಳವಡಿಸಿಕೊಂಡು ಚಲಾಯಿಸುವ ವಾಹನ ಸವಾರರ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗುವುದು ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಎಚ್ಚರಿಸಿದ್ದಾರೆ. (ಸಾಂದರ್ಭಿಕ ಚಿತ್ರ)